Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ; ಸೌದಿ ಅರೇಬಿಯಾ ಜೊತೆ ಕಾರ್ಯಾಚರಣೆಗಿಳಿದ ಭಾರತ; 8 ಒಪ್ಪಂದಗಳಿಗೆ ಸಹಿ

India and Saudi Arabia: ಜಿ 20 ಶೃಂಗಸಭೆಯಲ್ಲಿ ಭಾರತ, ಪಶ್ಚಿಮ ಏಷ್ಯಾ ಮತ್ತು ಯೂರೋಪ್ ಮಧ್ಯೆ ಆರ್ಥಿಕ ಕಾರಿಡಾರ್ ನಿರ್ಮಿಸುವ ಐಎಂಇಸಿ ಯೋಜನೆಯ ಘೋಷಣೆ ಆದ ಬೆನ್ನಲ್ಲೇ ಭಾರತ ಹಾಗು ಸೌದಿ ಅರೇಬಿಯಾ ಮಧ್ಯೆ ಎಂಟು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಬೇರೆ ಬೇರೆ ಕಂಪನಿಗಳ ಮಧ್ಯೆ 24ಕ್ಕೂ ಹೆಚ್ಚು ಎಂಒಯು ಒಪ್ಪಂದಗಳೂ ಆಗಿವೆ. ನಿನ್ನೆ ಸೆ. 11ರಂದು ಸೌದಿ ದೊರೆಯನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದಾರೆ.

ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ; ಸೌದಿ ಅರೇಬಿಯಾ ಜೊತೆ ಕಾರ್ಯಾಚರಣೆಗಿಳಿದ ಭಾರತ; 8 ಒಪ್ಪಂದಗಳಿಗೆ ಸಹಿ
ಸೌದಿ ದೊರೆ ಸಲ್ಮಾನ್ ಜೊತೆ ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2023 | 10:48 AM

ನವದೆಹಲಿ, ಸೆಪ್ಟೆಂಬರ್ 12: ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ನಡುವೆ ಎಕನಾಮಿಕ್ ಕಾರಿಡಾರ್ (IMEC) ಯೋಜನೆ ಜಿ20 ಶೃಂಗಸಭೆಯಲ್ಲಿ ಘೋಷಣೆ ಆದ ಬೆನ್ನಲ್ಲೇ ಕ್ಷಿಪ್ರಗತಿಯಲ್ಲಿ ಬೆಳವಣಿಗೆಗಳಾಗುತ್ತಿವೆ. ಶೃಂಗಸಭೆ ಮುಗಿದ ಒಂದೇ ದಿನಕ್ಕೆ ಸೌದಿ ಅರೇಬಿಯಾ ಮತ್ತು ಭಾರತದ ಮಧ್ಯೆ ವಿವಿಧ ಒಪ್ಪಂದಗಳಾಗಿವೆ. ವಿದ್ಯುತ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ತಯಾರಿಕೆ, ಹಣಕಾಸು, ಭದ್ರತೆ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಭಾರತದ ಜೊತೆ ಸೌದಿ ಅರೇಬಿಯಾ ಸೋಮವಾರ (ಸೆ. 11) ಎಂಟು ಒಪ್ಪಂದಗಳಿಗೆ ಸಹಿ ಹಾಕಿದೆ. ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ನಿನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂದಗಳಿಗೆ ಸಮ್ಮತಿ ಬಿದ್ದಿದೆ.

ಈ ಎಂಟು ಯೋಜನೆಗಳು ಭಾರತದ ಐಎಂಇಸಿ ಯೋಜನೆಗೆ ಪೂರಕವಾಗಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (ಬಿಆರ್​ಐ) ಮಹಾಯೋಜನೆಗೆ ಪ್ರತಿಯಾಗಿ ಭಾರತದ ನೇತೃತ್ವದಲ್ಲಿ ಐಎಂಇಸಿ ಯೋಜನೆ ಇದೆ. ಭಾರತದ ಈ ಪ್ರಯತ್ನಕ್ಕೆ ಅಮೆರಿಕ ಹಾಗೂ ಇತರ ಐರೋಪ್ಯ ಶಕ್ತಿಗಳ ಬೆಂಬಲ ಇದೆ. ಜಿ20 ಶೃಂಗಸಭೆಯ ವೇಳೆ ಚೀನಾ ಎದುರೇ ಬಹಳಷ್ಟು ದೇಶಗಳು ಭಾರತ ಯೂರೋಪ್ ಎಕನಾಮಿಕ್ ಕಾರಿಡಾರ್ ಯೋಜನೆಗೆ ಬೆಂಬಲ ನೀಡಿದ್ದು ಹೌದು.

ಇದನ್ನೂ ಓದಿ: G20ಗೆ ಆಫ್ರಿಕನ್ ಯೂನಿಯನ್ ಸೇರ್ಪಡೆ ಈ ಶೃಂಗಸಭೆಯ ದೊಡ್ಡ ಸಾಧನೆ: ಧರ್ಮೇಂದ್ರ ಪ್ರಧಾನ್

ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ಮಧ್ಯೆ ಸಂಪರ್ಕ ಸೇತು ಹೆಚ್ಚಿಸಲು ಪ್ರಯತ್ನಗಳಾಗಲಿವೆ. ಬಂದರು, ರಸ್ತೆ, ರೈಲು, ಆಪ್ಟಿಕಲ್ ಫೈಬರ್, ಗ್ಯಾಸ್ ಗ್ರಿಡ್ ಹೀಗೆ ಎರಡೂ ಪ್ರದೇಶಗಳ ಮಧ್ಯೆ ಕನೆಕ್ಟಿವಿಟಿ ಬಲಗೊಳ್ಳಲಿದೆ. ಭಾರತ ಮತ್ತು ಸೌದಿ ಮಧ್ಯೆ ಎಂಟು ಒಪ್ಪಂದಗಳಿಗೆ ಸಹಿಬಿದ್ದಿರುವುದು ಮಾತ್ರವಲ್ಲ, ಎರಡೂ ದೇಶಗಳ ವಿವಿಧ ಸಂಸ್ಥೆಗಳ ಮಧ್ಯೆ ತಿಳಿವಳಿಕೆ 25ಕ್ಕೂ ಹೆಚ್ಚು ಒಪ್ಪಂದಗಳಾಗಿವೆ (ಎಂಒಯು) ಎಂದು ಹೇಳಲಾಗುತ್ತಿದೆ. ಮಾಹಿತಿ ಮತ್ತು ತಂತ್ರಜ್ಞಾನ, ಕೃಷಿ, ಔಷಧ, ಪೆಟ್ರೋಕೆಮಿಕಲ್, ಮಾನವ ಸಂಪನ್ಮೂಲ ಮೊದಲಾದ ವಲಯಗಳಲ್ಲಿನ ಕಂಪನಿಗಳ ಮಧ್ಯೆ ಒಪ್ಪಂದಗಳಾಗಿವೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಬಹಳ ಯಶಸ್ವಿಯಾಗಿರುವುದನ್ನು ಸೌದಿ ಅರೇಬಿಯಾ ಗುರುತಿಸಿ ಪ್ರಶಂಸಿಸಿದೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವೇಳೆ ಸೌದಿ ದೊರೆ ಈ ಬಗ್ಗೆ ಅಭಿನಂದನೆ ಸಲ್ಲಿಸಿದರೆನ್ನಲಾಗಿದೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದು 4,100 ಕೋಟಿ ರೂ; ಬೇರೆ ದೇಶಗಳಲ್ಲಿ ನಡೆದ ಸಭೆಗಳಿಗೆ ವೆಚ್ಚವಾಗಿದ್ದು ಎಷ್ಟು?

ಸೌದಿ ಜೊತೆಗಿನ ವ್ಯವಹಾರದಲ್ಲಿ ರುಪಾಯಿ ಕರೆನ್ಸಿ ಬಳಕೆ, ಸೌದಿಯಲ್ಲಿ ರುಪೇ ಕಾರ್ಡ್​​ಗಳ ಬಳಕೆ ಇತ್ಯಾದಿ ವಿಚಾರಗಳೂ ಚರ್ಚೆಯಲ್ಲಿವೆ. ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ವ್ಯವಹಾರ ಮೊತ್ತ 2022-23ರಲ್ಲಿ ಶೇ. 23ರಷ್ಟು ಹೆಚ್ಚಾಗಿದೆ. 52 ಬಿಲಿಯನ್ ಡಾಲರ್​ನಷ್ಟು ವ್ಯಾಪಾರ ವಹಿವಾಟು ನಡೆದಿರುವುದು ವರದಿಯಾಗಿದೆ. ಕುತೂಹಲವೆಂದರೆ ಭಾರತವು ಸೌದಿ ಅರೇಬಿಯಾದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಇನ್ನು, ಸೌದಿ ಅರೇಬಿಯಾ ಭಾರತಕ್ಕೆ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.

ಸೆಪ್ಟೆಂಬರ್ 11ರಂದು ಸಂಜೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌದಿ ದೊರೆ ಭೇಟಿಯಾದರು. ಸೌದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರಿಗೆ ಮುಕ್ತವಾಗಿ ಬೆಳೆಯಲು ಅವಕಾಶ ಸಿಕ್ಕಿರುವುದನ್ನು ಮುರ್ಮು ಪ್ರಶಂಸಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ