ಆಗ್ರಾದ ಬಾಲಾಪರಾಧಿಗೃಹದಲ್ಲಿ ಆಘಾತಕಾರಿ ಘಟನೆ, ಮಕ್ಕಳನ್ನು ಮಂಚಕ್ಕೆ ಕಟ್ಟಿ, ಚಪ್ಪಲಿಯಿಂದ ಥಳಿಸುತ್ತಾರೆ ಅಧಿಕಾರಿಗಳು
ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ, ಬಾಲಾಪರಾಧಿಗೃಹ(Juvenile Home)ದಲ್ಲಿದ್ದ ಮಕ್ಕಳಿಗೆ ರಕ್ಷಣೆ ನೀಡಬೇಕಿದ್ದ ಸರ್ಕಾರಿ ಅಧಿಕಾರಿಗಳೇ ಮಕ್ಕಳ ಜತೆ ಕ್ರೂರವಾಗಿ ನಡೆದುಕೊಂಡಿದ್ದಾರೆ. ಬಾಲ ಕೈದಿಗಳಾಗಿ ಬಾಲಾಪರಾಧಿಗೃಹಕ್ಕೆ ಬಂದಿರುವ ಮಕ್ಕಳಿಗೆ ಒಳ್ಳೆಯ ನಡತೆ ಕಲಿಸಬೇಕಿದ್ದ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಜವಾಬ್ದಾರಿ ಮರೆತು ನಡೆದುಕೊಂಡಿದ್ದಾರೆ. ಚಿಕ್ಕ ಮಕ್ಕಳನ್ನು ನಿರ್ದಯವಾಗಿ ಥಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ, ಬಾಲಾಪರಾಧಿ ಗೃಹ(Juvenile Home)ದಲ್ಲಿದ್ದ ಮಕ್ಕಳಿಗೆ ರಕ್ಷಣೆ ನೀಡಬೇಕಿದ್ದ ಸರ್ಕಾರಿ ಅಧಿಕಾರಿಗಳೇ ಮಕ್ಕಳ ಜತೆ ಕ್ರೂರವಾಗಿ ನಡೆದುಕೊಂಡಿದ್ದಾರೆ. ಬಾಲ ಕೈದಿಗಳಾಗಿ ಬಾಲಾಪರಾಧಿ ಗೃಹಕ್ಕೆ ಬಂದಿರುವ ಮಕ್ಕಳಿಗೆ ಒಳ್ಳೆಯ ನಡತೆ ಕಲಿಸಬೇಕಿದ್ದ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಜವಾಬ್ದಾರಿ ಮರೆತು ನಡೆದುಕೊಂಡಿದ್ದಾರೆ. ಚಿಕ್ಕ ಮಕ್ಕಳನ್ನು ನಿರ್ದಯವಾಗಿ ಥಳಿಸಿದ್ದಾರೆ. ಈ ಘಟನೆ ಆಗ್ರಾದಲ್ಲಿ ನಡೆದಿದೆ, ಮಹಿಳಾ ಅಧೀಕ್ಷಕರು ಮಕ್ಕಳಿಗೆ ಥಳಿಸುವ ದೃಶ್ಯಗಳು ಬಾಲಾಪರಾಧಿ ಗೃಹದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಕ್ಕಳು ತಿಳಿದೇ ಯಾವುದೋ ಸಂದರ್ಭದಲ್ಲಿ ತಪ್ಪು ಮಾಡಿರುತ್ತಾರೆ, ಆದರೆ ಅದು ತಪ್ಪು ಎಂದು ಅವರಿಗೆ ಮನವರಿಕೆ ಮಾಡಿ, ಒಳ್ಳೆಯ ನಡತೆಯನ್ನು ಕಲಿಸಬೇಕಿದ್ದ ಅಧಿಕಾರಿಗಳೇ ಇಂಥಾ ತಪ್ಪು ಮಾಡಿದರೆ ಆ ಮಕ್ಕಳ ಭವಿಷ್ಯದ ಗತಿ ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಒಂದು ಕೋಣೆಯಲ್ಲಿ 6 ಮಕ್ಕಳು ಹಾಸಿಗೆ ಮೇಲೆ ಮಲಗಿದ್ದಾರೆ. ಅಲ್ಲಿಗೆ ಬಂದ ಮೇಲ್ವಿಚಾರಕರು ಹಾಗೂ ಇತರೆ ನೌಕರರು ಮಕ್ಕಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮಕ್ಕಳಿಗೆ ಚಪ್ಪಲಿಯಿಂದ ಥಳಿಸಿ, ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ, ಉಳಿದ ಮಕ್ಕಳನ್ನೂ ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮಂಗಳವಾರ ಇದೇ ಬಾಲಾಪರಾಧಿಗೃಹದ ಮತ್ತೊಂದು ವಿಡಿಯೋ ಹೊರಬಿದ್ದಿತ್ತು. ಇದರಲ್ಲಿ ಮೇಲ್ವಿಚಾರಕರು 7 ವರ್ಷದ ಬಾಲಕಿಯ ಕೈಕಾಲುಗಳನ್ನು ಹಾಸಿಗೆಗೆ ಕಟ್ಟಿ ಮಲಗಿಸಿದ್ದಾರೆ. ಆಕೆ ಅದನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಸಾಧ್ಯವಾಗಲಿಲ್ಲ.
ಮತ್ತಷ್ಟು ಓದಿ: ಕುಖ್ಯಾತ ವಿಚಾರಣಾಧೀನ ಕೈದಿ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈತಾನಂತೆ!
ಈ ಎರಡು ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಾಲಾಪರಾಧಿ ಗೃಹದಲ್ಲಿರುವ ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
In #Agra‘s govt run children shelterhome (Pachkuiyaan), Poonam Lal, the center superintendent was caught slapping a girl with slippers. Earlier she was booked for abetment to suicide in #Prayagraj district in 2021 after a 15-yr-old girl allegedly killed her self in shelter home pic.twitter.com/JE5V56jR7l
— Arvind Chauhan 💮🛡️ (@Arv_Ind_Chauhan) September 12, 2023
ಎರಡೂ ಘಟನೆಗಳ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ, ಕ್ರೂರವಾಗಿ ವರ್ತಿಸಿದ ಅಧಿಕಾರಿ ಪೂನಂ ಪಾಲ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಕೆಲವು ದಿನಗಳ ಹಿಂದೆ ಆ ಮನೆಯಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ, ಅಲ್ಲಿ ಮಕ್ಕಳನ್ನು ಕ್ರೂರವಾಗಿ ನಡೆಸಿಕೊಂಡಿರುವುದು ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:30 am, Fri, 15 September 23