ಕುಖ್ಯಾತ ವಿಚಾರಣಾಧೀನ ಕೈದಿ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈತಾನಂತೆ!

ಮೈಸೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ಯಾಂಟ್ರೋ ರವಿ ಹುಟ್ಟು ಗುಣ ಸುಟ್ಟರು ಹೋಗಲ್ಲ ಅನ್ನೋ ರೀತಿ ಹೊರಗೆ ಇದ್ದು ಗಣ್ಯರು ರಾಜಕಾರಣಿಗಳನ್ನು ಕಾಡುತ್ತಿದ್ದವನು ಈಗ ಜೈಲು ಸೇರಿದ್ದರೂ ತನ್ನ ಬುದ್ದಿ ಬಿಟ್ಟಿಲ್ಲ ಅನ್ನೋದೆ ವಿಪರ್ಯಾಸ.

ಕುಖ್ಯಾತ ವಿಚಾರಣಾಧೀನ ಕೈದಿ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈತಾನಂತೆ!
ಕೈದಿ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬೈತಾನಂತೆ!
Follow us
ರಾಮ್​, ಮೈಸೂರು
| Updated By: Digi Tech Desk

Updated on:Jul 31, 2023 | 10:44 AM

ಸ್ಯಾಂಟ್ರೋ ರವಿ (Santro Ravi) ರಾಜ್ಯದ ಖತರ್ನಾಕ್ ಆರೋಪಿ. ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳನ್ನು ಬಿಡದೆ ಕಾಡಿ ನಂತರ ಜೈಲು ಸೇರಿದ್ದ. ಇದೀಗ ಜೈಲಿನಲ್ಲಿ ಅಧಿಕಾರಿಗಳನ್ನು ಕಾಡುತ್ತಿದ್ದಾನೆ. ಆತನ ಕಾಟ ತಾಳಲಾರದೆ ಜೈಲು ಅಧಿಕಾರಿಗಳು ಕಂಗಾಲಾಗಿದ್ದಾರೆ. ಹೇಗೆ ಅಂತೀರಾ ಆಗಿದ್ರೆ ಈ ಸ್ಟೋರಿ ನೋಡಿ. ಈ ಪತ್ರ ಬರೆದಿರೋರು ಮೈಸೂರು ಜೈಲು (Mysore jail) ಅಧಿಕಾರಿ ದಿವ್ಯಶ್ರೀ. ಈ ಪತ್ರ ಬರೆದಿರೋದು ಮೋಸ್ಟ್ ನಟೋರಿಯಸ್ (Notorious) ಆರೋಪಿ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Accused) ಬಗ್ಗೆ. ಈ ಪತ್ರ ನೋಡಿದರೆ ಗೊತ್ತಾಗುತ್ತೇ ಈ ಸ್ಯಾಂಟ್ರೋ ರವಿಯ ಕಾಟದಿಂದ ಜೈಲಿನ ಅಧಿಕಾರಿಗಳು ಎಷ್ಟು ಹರಾಣಗೊಂಡಿದ್ದಾರೆ ಅಂತಾ!

ಸ್ಯಾಂಟ್ರೋ ರವಿ ವಿರುದ್ದ ಮಹಿಳೆಯೊಬ್ಬರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ರು. ಅದರ. ಬೆನ್ನು ಹತ್ತಿದ ಪೊಲೀಸರಿಗೆ ಸ್ಯಾಂಟ್ರೋ ರವಿಯ ಕರ್ಮಕಾಂಡಗಳು ಒಂದೊಂದೇ ಹೊರಗೆ ಬಂದಿದ್ದವು. ವರ್ಗಾವಣೆ ದಂಧೆ, ವೇಶ್ಯಾವಾಟಿಕೆ ಸೇರಿದಂತೆ ಸ್ಯಾಂಟ್ರೋ ರವಿಯ ಹಲವು ಕರಾಳ ಮುಖ ತೆರೆದುಕೊಂಡಿತ್ತು. ಅಷ್ಟೇ ಅಲ್ಲ ಆತನಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳು ಮಂತ್ರಿಗಳ ಜೊತೆ ಇದ್ದ ನಿಕಟ ಸಂಪರ್ಕದ ಬಗ್ಗೆ ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆಯಾಗಿತ್ತು. ಈ ಸಂಬಂಧ ಹಲವು ಆಡಿಯೋ ವಿಡಿಯೋಗಳು ವೈರಲ್ ಆಗಿದ್ದವು.

ಇದಾದ ನಂತರ ಮೈಸೂರು ಪೊಲೀಸರು ಹರಸಾಹಸಪಟ್ಟು ದೂರದ ಉತ್ತರ ಭಾರತದಲ್ಲಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕಳೆದ 6 ತಿಂಗಳಿನಿಂದ ಸ್ಯಾಂಟ್ರೋ ರವಿಗೆ ಜಾಮೀನು ಸಿಕ್ಕಿಲ್ಲ. ಆತ ಮೈಸೂರಿನ ಜೈಲಿನಲ್ಲೇ ಇದ್ದಾನೆ. ಆದ್ರೆ ಆತ ಜೈಲಿನ ಅಧಿಕಾರಿಗಳಿಗೆ ತಲೆ ನೋವಾಗಿದ್ದಾನೆ. ಆತನನ್ನು ಬೆಂಗಳೂರಿನ ಜೈಲಿಗೆ ವರ್ಗಾವಣೆ ಮಾಡಿ ಅಂತಾ ಖುದ್ದು ಜೈಲು ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ವಿಚಾರಣಾಧೀನ ಕೈದಿಯಾಗಿರುವ ಸ್ಯಾಂಟ್ರೋ ರವಿ ಜೈಲಿನ ಅಧಿಕಾರಿಗಳಿಗೆ ಗೌರವ ನೀಡದೆ ಅನುಚಿತವಾಗಿ ವರ್ತಿಸುತ್ತಿದ್ದಾನಂತೆ. ಕಾರಾಗೃಹದ ನಿಯಮಗಳನ್ನು ಪಾಲಿಸದೆ ಅಧಿಕಾರಿಗಳನ್ನು ಸತಾಯಿಸುತ್ತಿದ್ದಾನಂತೆ. ಅಷ್ಟೇ ಅಲ್ಲ ಅಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸುತ್ತಾನಂತೆ. ಸಹ ಕೈದಿಗಳ ಜೊತೆಯೂ ಸದಾ ಗಲಾಟೆ ಮಾಡುವ ಸ್ಯಾಂಟ್ರೋ ರವಿ ಜೈಲು ಅಧಿಕಾರಿಗಳನ್ನು ಕಾಡುತ್ತಿದ್ದಾನಂತೆ. ಸ್ಯಾಂಟ್ರೋ ರವಿ ಕಾಟದಿಂದ ಬೇಸತ್ತ ಜೈಲು ಅಧಿಕಾರಿಗಳು ದಯಮಾಡಿ ಆತನಿಂದ ಮುಕ್ತಿ‌ ಕೊಡಿಸಿ ಅಂತಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:  BMTC ಎಂಡಿ, ನಿರ್ದೇಶಕರ ನಕಲಿ ಸಹಿ ಮಾಡಿ ₹79 ಲಕ್ಷ ವಂಚನೆ; 7 ಅಧಿಕಾರಿಗಳ ವಿರುದ್ಧ FIR

ಸದ್ಯ ನ್ಯಾಯಾಲಯ ಈ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ. ಅದೇನೋ ಹೇಳ್ತಾರಲ್ಲ ಹುಟ್ಟು ಗುಣ ಸುಟ್ಟರು ಹೋಗಲ್ಲ ಅನ್ನೋ ರೀತಿ ಹೊರಗೆ ಇದ್ದು ಗಣ್ಯರು ರಾಜಕಾರಣಿಗಳನ್ನು ಕಾಡುತ್ತಿದ್ದ ಸ್ಯಾಂಟ್ರೋ ರವಿ ಜೈಲು ಸೇರಿದ್ರು ತನ್ನ ಬುದ್ದಿ ಬಿಟ್ಟಿಲ್ಲ ಅನ್ನೋದೆ ವಿಪರ್ಯಾಸ.

ಮೈಸೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:28 am, Mon, 31 July 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ