ಭಯೋತ್ಪಾದನಾ ನಿಗ್ರಹ ತರಬೇತಿ ಪಡೆಯಲು ರಷ್ಯಾಕ್ಕೆ ತೆರಳಿದ ರಜಪೂತಾನ ರೈಫಲ್ಸ್ ಬೆಟಾಲಿಯನ್
ರಜಪೂತಾನ ರೈಫಲ್ಸ್ ಬೆಟಾಲಿಯನ್‌ನ 32 ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನಾ ತುಕಡಿಯು ಸೆಪ್ಟೆಂಬರ್ 25 ರಿಂದ 30 ರವರೆಗೆ ರಷ್ಯಾದಲ್ಲಿ ನಡೆಯಲಿರುವ ಭಯೋತ್ಪಾದನಾ ನಿಗ್ರಹ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಇಂದು (ಸೆ.23) ತಿಳಿಸಿದೆ.

ದೆಹಲಿ, ಸೆ.23: ರಜಪೂತಾನ ರೈಫಲ್ಸ್ ಬೆಟಾಲಿಯನ್‌ನ (Rajputana Rifles Battalion) 32 ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನಾ ತುಕಡಿಯು ಸೆಪ್ಟೆಂಬರ್ 25 ರಿಂದ 30 ರವರೆಗೆ ರಷ್ಯಾದಲ್ಲಿ ನಡೆಯಲಿರುವ ಭಯೋತ್ಪಾದನಾ ನಿಗ್ರಹ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಇಂದು (ಸೆ.23) ತಿಳಿಸಿದೆ. ರಷ್ಯಾ ಆಯೋಜಿಸುತ್ತಿರುವ ಬಹುರಾಷ್ಟ್ರೀಯ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಏಷ್ಯಾನ್ ರಕ್ಷಣಾ ಮಂತ್ರಿಗಳ ಸಭೆಯ ಜೊತೆಗೆ ನಡೆಸಲಾಗುವುದು. ಇದರಲ್ಲಿ ಭಯೋತ್ಪಾದನೆ ನಿಗ್ರಹದ ಕುರಿತಾದ ತಜ್ಞರ ಸಲಹೆ ಮತ್ತು ತರಬೇತಿಯನ್ನು ನೀಡಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಷ್ಯಾ EWG ವಹಿಸಿಕೊಂಡಿದೆ.
2017 ರಿಂದ, ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN) ಮತ್ತು ಇತರ ದೇಶಗಳ ನಡುವೆ ಸಂವಾದ ಮತ್ತು ಸಹಾಕಾರವನ್ನು ಗಟ್ಟಿಗೊಳಿಸುವ ಸಲುವಾಗಿ ಈ ಕಾರ್ಯಕ್ರವವನ್ನು ಮಾಡಲಾಗುತ್ತದೆ. ಈ ಸಮರ ಅಭ್ಯಾಸವು ದೇಶಗಳ ಗಡಿ ಭಾಗಗಳ ಸುರಕ್ಷತೆ ಮತ್ತು ಭಯೋತ್ಪಾದಕ ಗುಂಪುಗಳನ್ನು ನಾಶಪಡಿಸುವ ತಂತ್ರಗಳು ಈ ತರಬೇತಿಯಲ್ಲಿ ಇರುತ್ತದೆ.
ಇದನ್ನೂ ಓದಿ: ಶತ್ರು ರಾಷ್ಟ್ರಗಳ ಡ್ರೋನ್ ಹೊಡೆದುರುಳಿಸಲು ‘ಅರ್ಜುನ್’ಗೆ ತರಬೇತಿ
ಇನ್ನು ಈ ಅಭ್ಯಾಸದಲ್ಲಿ ಭಯೋತ್ಪಾದನೆ ನಿಗ್ರಹ ಕ್ಷೇತ್ರದಲ್ಲಿ ಪ್ರಾದೇಶಿಕ ಸಹಕಾರವನ್ನು ಬಲಪಡಿಸುವುದು ಮತ್ತು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸದಸ್ಯ ರಾಷ್ಟ್ರಗಳ ಸೈನ್ಯವನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹೆಚ್ಚು ಪರಿಣಿತಿಯನ್ನು ಹೊಂದಲು ಮತ್ತು ಉತ್ತಮ ತರಬೇತಿಯನ್ನು ನೀಡಲು ಈ ಕಾರ್ಯಯೋಜನೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಸೇನೆಗಳು ಅಭ್ಯಾಸದಲ್ಲಿ ಒಳ್ಳೆಯ ತರಬೇತಿಯನ್ನು ಪಡೆಯಲಿದೆ ಎಂದು ಸೇನೆ ಹೇಳಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ