ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿದ್ದು ಕಹಿ ಸತ್ಯ: ಬಿಎಸ್​​ಪಿ ನಾಯಕಿ ಮಾಯಾವತಿ

ಯುಪಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಏನೇ ಇರಲಿ, ಬಹುಸಂಖ್ಯಾತ ವರ್ಗದವರಿಂದ ಬಡವರು ಮತ್ತು ವಂಚಿತರು (ಸಮಾಜದ ವಿಭಾಗಗಳು) ಅನ್ಯಾಯ, ದೌರ್ಜನ್ಯಗಳು ಮತ್ತು ಶೋಷಣೆ ಸಾಮಾನ್ಯ ಸಂಗತಿಯಾಗಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಸರ್ಕಾರವು ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸಿತು ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸಿತು ಎಂದ ಮಾಯಾವತಿ

ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿದ್ದು ಕಹಿ ಸತ್ಯ: ಬಿಎಸ್​​ಪಿ ನಾಯಕಿ ಮಾಯಾವತಿ
ಮಾಯಾವತಿ- ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 02, 2023 | 8:03 PM

ಲಖನೌ: ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ‘ದಯನೀಯ ಸ್ಥಿತಿ’ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ‘ಕಹಿ ಸತ್ಯ’ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ (Mayawati) ಹೇಳಿದ್ದಾರೆ. ಹಿಂದಿಯಲ್ಲಿ ಸರಣಿ ಟ್ವೀಟ್‌ ಮಾಡಿದ ಮಾಯಾವತಿ ಕಾಂಗ್ರೆಸ್ (Congress) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಯುಎಸ್ ಪ್ರವಾಸದ ಸಮಯದಲ್ಲಿ ಕೋಟ್ಯಂತರ ದಲಿತರು ಮತ್ತು ಮುಸ್ಲಿಮರ ಶೋಚನೀಯ ಸ್ಥಿತಿ ಮತ್ತು ಮತ್ತು ಭಾರತದಲ್ಲಿ ಅವರ ಜೀವನ ಮತ್ತು ಧರ್ಮದ ಅಭದ್ರತೆ  ಬಗ್ಗೆ ಹೇಳಿರುವುಗು ಕಹಿ ಸತ್ಯವಾಗಿದೆ, ಇದಕ್ಕೆ ಕೇಂದ್ರದ ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಕ್ಷಗಳ ಸರ್ಕಾರಗಳು ಸಂಪೂರ್ಣ ಹೊಣೆಗಾರರಾಗಿದ್ದಾರೆ.

ಯುಪಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಏನೇ ಇರಲಿ, ಬಹುಸಂಖ್ಯಾತ ವರ್ಗದವರಿಂದ ಬಡವರು ಮತ್ತು ವಂಚಿತರು (ಸಮಾಜದ ವಿಭಾಗಗಳು) ಅನ್ಯಾಯ, ದೌರ್ಜನ್ಯಗಳು ಮತ್ತು ಶೋಷಣೆ ಸಾಮಾನ್ಯ ಸಂಗತಿಯಾಗಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಸರ್ಕಾರವು ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸಿತು ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸಿತು ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ರಾಜಕೀಯ ಮತ್ತು ಚುನಾವಣಾ ಸ್ವಹಿತಾಸಕ್ತಿಗಾಗಿ ಇತಿಹಾಸವು ಅಸಂಖ್ಯಾತ ಕೋಮುಗಲಭೆಗಳು ಮತ್ತು ಜಾತಿವಾದಿ ಘಟನೆಗಳ (ಪ್ರಚೋದಿತ) ಕಪ್ಪು ಅಧ್ಯಾಯಗಳಿಂದ ತುಂಬಿದೆ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಲೀಗ್ ಅನ್ನು ಜಾತ್ಯಾತೀತ ಪಕ್ಷ ಎಂದ ರಾಹುಲ್ ಗಾಂಧಿ; ಇದು ಅತ್ಯಂತ ದುರದೃಷ್ಟಕರ ಎಂದು ಬಿಜೆಪಿ ಟೀಕೆ

ಮುಂದಿನ ಮೂರು-ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ನಾಶವಾಗಲಿದೆ ಎಂದು ಗುರುವಾರ ಹೇಳಿದ್ದ ರಾಹುಲ್ ಗಾಂಧಿ, ಬೆಂಬಲವಿಲ್ಲದ ಆಡಳಿತ ಪಕ್ಷವನ್ನು ಸೋಲಿಸಲು ಅಗತ್ಯವಾದ ಮೂಲಭೂತ ಅವಶ್ಯಕತೆಗಳಿವೆ ಎಂದು ಒತ್ತಿ ಹೇಳಿದರು. ಅದೇ ವೇಳೆ ಮುಸ್ಲಿಂ ಲೀಗ್ ಪಕ್ಷವು “ಸಂಪೂರ್ಣ ಜಾತ್ಯತೀತ ಪಕ್ಷವಾಗಿದೆ, ಮುಸ್ಲಿಂ ಲೀಗ್‌ನಲ್ಲಿ ಜಾತ್ಯತೀತವಲ್ಲದ ಯಾವುದೂ ಇಲ್ಲ ಎಂದು ಅವರು ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಸಮರ್ಥಿಸಿಕೊಂಡರು. ರಾಹುಲ್ ಗಾಂಧಿ ಮೂರು ನಗರಗಳ ಪ್ರವಾಸಕ್ಕಾಗಿ ಅಮೆರಿಕದಲ್ಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Fri, 2 June 23