AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Secular: ನಿಜವಾದ ಕೋಮುವಾದಿಗಳನ್ನ ಜಾತ್ಯಾತೀತರು ಅಂತ ರಾಹುಲ್ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Communalist: ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಪ್ರಲ್ಹಾದ್ ಜೋಶಿ, ಹಿಂದೂಗಳಷ್ಟು ಜಾತ್ಯಾತೀತರು ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

Secular: ನಿಜವಾದ ಕೋಮುವಾದಿಗಳನ್ನ ಜಾತ್ಯಾತೀತರು ಅಂತ ರಾಹುಲ್ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ನಿಜವಾದ ಕೋಮುವಾದಿಗಳನ್ನ ಜಾತ್ಯಾತೀತರು ಅಂತ ರಾಹುಲ್ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದ
TV9 Web
| Updated By: ಸಾಧು ಶ್ರೀನಾಥ್​|

Updated on: Jun 02, 2023 | 7:04 PM

Share

ನೈಜ ಕೋಮುವಾದಿ ಗುಂಪುಗಳಿಗೆ ಜಾತ್ಯಾತೀತರು ಅಂತ ಟೈಟಲ್ ಕೊಟ್ಟು ಬಣ್ಣಿಸುತ್ತಿರುವ ರಾಹುಲ್ ಗಾಂಧಿ ನಡೆ ಹಾಸ್ಯಾಸ್ಪದವಾಗಿದ್ದು, ಅವರು ಇದಕ್ಕೆ ತಕ್ಷಣ ಅಂತ್ಯ ಹಾಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ವಿದೇಶಿ ನೆಲದಲ್ಲಿ ಹಿಂದು ಸಂಘಟನೆಗಳನ್ನ ಟೀಕಿಸಿರುವ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಲ್ಹಾದ್ ಜೋಶಿ (Pralhad Josh), ರಾಹುಲ್ ಗಾಂಧಿ ಮೊದಲು ಯಾರು ಕೋಮುವಾದಿ (Communalist), ಯಾರು ಜಾತ್ಯಾತೀತರು (Secular)? ಎಂಬುದನ್ನ ಅರಿತಿಕೊಳ್ಳಲಿ ಎಂದಿದ್ದಾರೆ.

ದೇಶದಲ್ಲಿ ಕೋಮುವಾದವನ್ನ ಬಿತ್ತುತ್ತಿರುವ ನೈಜ ಕೋಮುವಾದಿ ಮುಸ್ಲಿಂ ಲೀಗ್ ಪಕ್ಷಗಳನ್ನ ಜಾತ್ಯಾತೀತರು ಎಂದು ನಕಲಿ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷದವರು ಜಾತ್ಯಾತೀತರು ಹೇಗೆ ಆಗುತ್ತಾರೆ? ಆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ರಾಹುಲ್ ಗಾಂಧಿ ಮಾಡಿದ ಅತ್ಯಂತ ದೊಡ್ಡ ಅವಮಾನವಿದು. ಇವರ ತುಷ್ಟಿಕರಣದ ರಾಜಕೀಯಕ್ಕೆ ಕೊನೆಯೇ ಇಲ್ಲ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.‌

ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಪ್ರಲ್ಹಾದ್ ಜೋಶಿ, ಹಿಂದೂಗಳಷ್ಟು ಜಾತ್ಯಾತೀತರು ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳ ಯೋಚನೆಯಲ್ಲಿಯೇ ಜಾತ್ಯಾತೀತತೆ ಇದೆ. ಆದರೆ ರಾಹುಲ್ ಗಾಂಧಿ ಹಿಂದು ಸಂಘಟನೆಗಳು ಕೋಮುವಾದ ಬಿತ್ತುತ್ತಿವೆ ಎಂದಿದ್ದಾರೆ.

Also Read: ವಿದೇಶಿ ಮಣ್ಣಲ್ಲಿ ನಿಂತು ದೇಶಕ್ಕೆ ಕಪ್ಪು ಮಸಿ ಬಳಿಯುವ ರಾಹುಲ್ ಒಬ್ಬ ಫೇಕ್ ಗಾಂಧಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಯಾರು ನಿಜವಾದ ಜಾತ್ಯಾತೀತರು ಹಾಗೂ ಯಾರು ಧರ್ಮಾಂಧ ಪಟ್ಟಭದ್ರ ಹಿತಾಸಕ್ತಿ ಹೊಂದಿದವರು ಎಂಬುದು ದೇಶದ ಜನ ಅರ್ಥಮಾಡಿಕೊಂಡಿದ್ದಾರೆ. ನಕಲಿ ಗಾಂಧಿಯ (Fake Gandhi) ಈ ತುಷ್ಠಿಕರಣದ ರಾಜನೀತಿ ದೇಶದಲ್ಲಿ ನಡೆಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​ ಮಾಡಿ