WFI ಮುಖ್ಯಸ್ಥರನ್ನು ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ರೈತ ಮುಖಂಡರ ಎಚ್ಚರಿಕೆ
ಕುಸ್ತಿಪಟುಗಳ ಕುಂದುಕೊರತೆಗಳನ್ನು ಸರ್ಕಾರ ಪರಿಹರಿಸಬೇಕು ಮತ್ತು ಅವರನ್ನು (ಬ್ರಿಜ್ ಭೂಷಣ್ ಶರಣ್ ಸಿಂಗ್) ಬಂಧಿಸಬೇಕು, ಇಲ್ಲದಿದ್ದರೆ ನಾವು ಜೂನ್ 9 ರಂದು ದೆಹಲಿಯ ಜಂತರ್ ಮಂತರ್‌ಗೆ ಕುಸ್ತಿಪಟುಗಳೊಂದಿಗೆ ಹೋಗುತ್ತೇವೆ. ರಾಷ್ಟ್ರದಾದ್ಯಂತ ಪಂಚಾಯಿತಿಗಳನ್ನು ನಡೆಸುತ್ತೇವೆ ಎಂದು ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಟಿಕಾಯತ್.
ಭಾರತೀಯ ಕಿಸಾನ್ ಯೂನಿಯನ್ (BKU) ಮುಖಂಡ ರಾಕೇಶ್ ಟಕಾಯತ್ (Rakesh Tikait) ಅವರು ಶುಕ್ರವಾರ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಏಳರಿಂದ 10 ದಿನಗಳ ಕಾಲಾವಕಾಶ ನೀಡುತ್ತಿರುವುದಾಗಿಎಂದು ಹೇಳಿದ್ದಾರೆ. ಕುಸ್ತಿಪಟುಗಳ ಸಮಸ್ಯೆಗೆ ಸಂಬಂಧಿಸಿದ ಆಂದೋಲನದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಹರ್ಯಾಣದ ಕುರುಕ್ಷೇತ್ರದಲ್ಲಿ “ಖಾಪ್ ಮಹಾಪಂಚಾಯತ್” ನಡೆದ ನಂತರ ರೈತರ ಮುಖಂಡರು ಈ ಘೋಷಣೆ ಮಾಡಿದರು.
ಹರ್ಯಾಣದಿಂದ ಕೇಂದ್ರ ಸರ್ಕಾರಕ್ಕ ಒಂದು ದೊಡ್ಡ ಸಂದೇಶವನ್ನು ಇಲ್ಲಿಂದ (ಕುರುಕ್ಷೇತ್ರದಲ್ಲಿ ಖಾಪ್ ಪಂಚಾಯತ್) ರವಾನಿಸಬೇಕು. ಸಿಂಗ್ ವಿರುದ್ದ ಕ್ರಮ ಕೈಗೊಳ್ಳಲು ಅವರಿಗೆ 7-10 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಖಾಪ್ ಪಂಚಾಯತ್‌ನಿಂದ ಒತ್ತಡಕ್ಕೆ ಒಳಗಾದ ನಂತರ ಅವರು ಜೂನ್ 5 ರ ಸಭೆಯನ್ನು (ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ಅವರ ‘ಮಹಾ ರ್ಯಾಲಿ’) ರದ್ದುಗೊಳಿಸಿದರು ಎಂದು ಟಿಕಾಯತ್ ಹೇಳಿದ್ದಾರೆ,
ಕುಸ್ತಿಪಟುಗಳ ಕುಂದುಕೊರತೆಗಳನ್ನು ಸರ್ಕಾರ ಪರಿಹರಿಸಬೇಕು ಮತ್ತು ಅವರನ್ನು (ಬ್ರಿಜ್ ಭೂಷಣ್ ಶರಣ್ ಸಿಂಗ್) ಬಂಧಿಸಬೇಕು, ಇಲ್ಲದಿದ್ದರೆ ನಾವು ಜೂನ್ 9 ರಂದು ದೆಹಲಿಯ ಜಂತರ್ ಮಂತರ್‌ಗೆ ಕುಸ್ತಿಪಟುಗಳೊಂದಿಗೆ ಹೋಗುತ್ತೇವೆ. ರಾಷ್ಟ್ರದಾದ್ಯಂತ ಪಂಚಾಯಿತಿಗಳನ್ನು ನಡೆಸುತ್ತೇವೆ ಎಂದು ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಟಿಕಾಯತ್.
ರೈತ ಸಂಘಟನೆಗಳು ಉತ್ತರ ಪ್ರದೇಶದ ಮುಜಾಫರ್‌ನಗರದ ಸೊರಮ್ ಗ್ರಾಮದಲ್ಲಿ ಹಲವು ಗಂಟೆಗಳ ಕಾಲ ನಡೆದ ‘ಖಾಪ್ ಮಹಾಪಂಚಾಯತ್’ ಮತ್ತು ಪಂಜಾಬ್ ಮತ್ತು ಹರ್ಯಾಣದಲ್ಲಿ ಗುರುವಾರ ಸರಣಿ ಪ್ರತಿಭಟನೆಗಳು, ಕುಸ್ತಿಪಟುಗಳಿಗೆ ಒಗ್ಗಟ್ಟು ಪ್ರದರ್ಶಿಸಿದ ಒಂದು ದಿನದ ನಂತರ ಸಭೆ ನಡೆಯಿತು.
ರಾಷ್ಟ್ರಪತಿಯನ್ನು ಭೇಟಿ ಮಾಡುತ್ತೇನೆ: ಖಾಪ್ ಮಹಾಪಂಚಾಯತ್ ಸಭೆ ಬಳಿಕ ಟಿಕಾಯತ್
ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ರಾಜಸ್ಥಾನ ಮತ್ತು ದೆಹಲಿಯ ಖಾಪ್‌ಗಳ ಪ್ರತಿನಿಧಿಗಳು ಗುರುವಾರ ಉತ್ತರ ಪ್ರದೇಶದಲ್ಲಿ ಮಹಿಳಾ ಕುಸ್ತಿಪಟುಗಳ ನೇತೃತ್ವದ ಪ್ರತಿಭಟನೆಗಳ ಕುರಿತು ಚರ್ಚಿಸಿದರು. ಖಾಪ್‌ಗಳ ಪ್ರತಿನಿಧಿಗಳು ಅಧ್ಯಕ್ಷರು ಮತ್ತು ಸರ್ಕಾರವನ್ನು ಭೇಟಿಯಾಗಿ ಧರಣಿ ನಿರತ ಕುಸ್ತಿಪಟುಗಳಿಗೆ ಬೆಂಬಲ ನೀಡಲಿದ್ದಾರೆ. ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಟಿಕಾಯತ್ ಗುರುವಾರ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ, ರೈತರು ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದರು. ನಂತರ ರಾಷ್ಟ್ರಪತಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು.
ಕುಸ್ತಿಪಟು ವಿನೇಶ್ ಫೋಗಟ್ ಅವರ ಸ್ಥಳೀಯ ಗ್ರಾಮವಾದ ಚಾರ್ಕಿ ದಾದ್ರಿ ಜಿಲ್ಲೆಯ ಬಲಾಲಿಯಲ್ಲಿ ಗುರುವಾರ ಪಂಚಾಯತ್ ಕೂಡ ನಡೆಯಿತು. ಅಲ್ಲಿನ ದ ಜನರು ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ನೀಡಿದರು.
ಇದನ್ನೂ ಓದಿ: ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ: ಕುಸ್ತಿಪಟುಗಳಿಗೆ ಕಪಿಲ್ ದೇವ್ ನೇತೃತ್ವದ 1983 ಚಾಂಪಿಯನ್ಸ್ ತಂಡದ ಸದಸ್ಯರ ಕಿವಿಮಾತು
ಕುಸ್ತಿಪಟುಗಳ ಬೇಡಿಕೆ
ಅಪ್ರಾಪ್ತ ವಯಸ್ಕ ಸೇರಿದಂತೆ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 12 ವರ್ಷಗಳ ಕಾಲ ಭಾರತೀಯ ಕುಸ್ತಿಯನ್ನು ಆಳಿದ ಗೊಂಡಾ ಬಿಜೆಪಿ ಸಂಸದ ಸಿಂಗ್ ಅವರನ್ನು ಬಂಧಿಸುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಸಿಂಗ್ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಕುಸ್ತಿಪಟುಗಳ ಪದಕಗಳು ತಲಾ ₹ 15 ಮೌಲ್ಯದ್ದಾಗಿವೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ