10 ನೇ ತರಗತಿ ಪಠ್ಯ ಪುಸ್ತಕಗಳಿಂದ ಪಿರಿಯಾಡಿಕ್ ಟೇಬಲ್​​ಗೆ ಕೊಕ್; NCERT ಸ್ಪಷ್ಟನೆ

ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಡಲಾದ ವಿಷಯಗಳಲ್ಲಿ ಪರಿಸರ ಸುಸ್ಥಿರತೆ ಮತ್ತು ಶಕ್ತಿಯ ಮೂಲಗಳ ಅಧ್ಯಾಯಗಳೂ ಸೇರಿವೆ. ಇತ್ತೀಚಿನ ಪರಿಷ್ಕರಣೆಯ ನಂತರ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಸವಾಲುಗಳು ರಾಜಕೀಯ ಪಕ್ಷಗಳ ಬಗ್ಗೆ ಸಂಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ.

10 ನೇ ತರಗತಿ ಪಠ್ಯ ಪುಸ್ತಕಗಳಿಂದ ಪಿರಿಯಾಡಿಕ್ ಟೇಬಲ್​​ಗೆ ಕೊಕ್; NCERT ಸ್ಪಷ್ಟನೆ
ವಿದ್ಯಾರ್ಥಿಗಳು
Follow us
ರಶ್ಮಿ ಕಲ್ಲಕಟ್ಟ
|

Updated on: Jun 02, 2023 | 4:28 PM

ದೆಹಲಿ: ಆವರ್ತಕ ಕೋಷ್ಟಕ (Periodic table) ಮತ್ತು ವಿಕಸನದ ಪರಿಕಲ್ಪನೆಗಳನ್ನು ಶಾಲಾ ಶಿಕ್ಷಣ ಪಠ್ಯಕ್ರಮದಿಂದ ತೆಗೆದುಹಾಕಲಾಗಿಲ್ಲ ಆದರೆ ವಾಸ್ತವವಾಗಿ 11 ಮತ್ತು 12 ನೇ ತರಗತಿಗಳಲ್ಲಿ ವಿಜ್ಞಾನವನ್ನು (Science) ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಕಲಿಯಲು ಇರುತ್ತದೆ  ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT )ಸ್ಪಷ್ಟನೆ ನೀಡಿದೆ. 10 ನೇ ತರಗತಿಯ ಪಠ್ಯಪುಸ್ತಕಗಳಿಂದ ಅಧ್ಯಾಯಗಳನ್ನು ತೆಗೆದುಹಾಕುವ ಕ್ರಮವನ್ನು ವಿಜ್ಞಾನಿಗಳು ಮತ್ತು ತಜ್ಞರು ತೀವ್ರವಾಗಿ ಖಂಡಿಸಿದ್ದರು.

ಪಿರಿಯಾಡಿಕ್ ಟೇಬಲ್ ಕಲಿಕೆ ಬಗ್ಗೆ ಶಿಕ್ಷಕರು ಸೇರಿದಂತೆ ವಿವಿಧ ಮಧ್ಯಸ್ಥಗಾರರಿಂದ ಸ್ವೀಕರಿಸಿದ ಪ್ರತಿಕ್ರಿಯೆಯ ಆಧಾರದ ಮೇಲೆ ಕಲಿಕೆಗೆ ಸೂಕ್ತವಾದ ವಯಸ್ಸಿನವರಿಗೆ ಮಾತ್ರ  ಇದು  ಎಂದು ಮಾಡಲಾಗಿದೆ ಎನ್​​ಸಿಇಆರ್​​​ಟಿ ಹೇಳಿದೆ. 11 ಮತ್ತು 12 ನೇ ತರಗತಿಗಳಲ್ಲಿ ವಿಜ್ಞಾನ ಕಲಿಯುವ ವಿದ್ಯಾರ್ಥಿಗಳು ಆವರ್ತಕ ಕೋಷ್ಟಕ ಅಧ್ಯಯನ ಮಾಡುತ್ತಾರೆ. ಆವರ್ತಕ ಕೋಷ್ಟಕದಲ್ಲಿ ಕಲಿಯಬೇಕಾದ ಸಂಗತಿಯನ್ನು ಮತ್ತೆ ವಯಸ್ಸಿಗೆ ಸರಿಹೊಂದುವಂತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ 10 ನೇ ತರಗತಿಯು ವಿಜ್ಞಾನವನ್ನು ಕಡ್ಡಾಯ ವಿಷಯವಾಗಿ ಕಲಿಸುವ ಕೊನೆಯ ವರ್ಷವಾಗಿದೆ. ಶಿಕ್ಷಣದ ಕೊನೆಯ ಎರಡು ವರ್ಷಗಳಲ್ಲಿ (ವಿಶ್ವವಿದ್ಯಾಲಯದ ಮೊದಲು) ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಲು ಆಯ್ಕೆ ಮಾಡುವ ವಿದ್ಯಾರ್ಥಿಗಳು ಮಾತ್ರ ಪಿರಿಯಾಡಿಕ್ ಟೇಬಲ್ ಬಗ್ಗೆ ಕಲಿಯುತ್ತಾರೆ.

ಪಿರಿಯಾಡಿಕ್ ಟೇಬಲ್ ವಿಷಯಕ್ಕೆ ಸಂಬಂಧಿಸಿದಂತೆ, ಎನ್‌ಸಿಇಆರ್‌ಟಿಯು ಮೂಲ ಪರಿಕಲ್ಪನೆಗಳಾದ ಎಲಿಮೆಂಟ್ಸ್, ಚಿಹ್ನೆಗಳು, ಸಂಯುಕ್ತಗಳ ರಚನೆ, ಪರಮಾಣುಗಳು ಮತ್ತು ಅಣುಗಳ ಕುರಿತು ಚರ್ಚೆಯನ್ನು 9 ನೇ ತರಗತಿಯಲ್ಲಿ ಕಲಿಸಲಾಗುತ್ತದೆ. 10 ನೇ ತರಗತಿಯಲ್ಲಿ, ರಾಸಾಯನಿಕ ಕ್ರಿಯೆ, ಆ್ಯಸಿಡ್, ಬೇಸ್ ಮತ್ತು ಲವಣಗಳು, ಲೋಹಗಳು ಮತ್ತು ಲೋಹವಲ್ಲದವುಗಳು, ಇಂಗಾಲ ಮತ್ತು ಅದರ ಸಂಯುಕ್ತಗಳ ಬಗ್ಗೆ ಹೇಳಿಕೊಡಲಾಗುತ್ತದೆ.

ಇದನ್ನೂ ಓದಿ: ಮುಸ್ಲಿಂ ಲೀಗ್ ಅನ್ನು ಜಾತ್ಯಾತೀತ ಪಕ್ಷ ಎಂದ ರಾಹುಲ್ ಗಾಂಧಿ; ಇದು ಅತ್ಯಂತ ದುರದೃಷ್ಟಕರ ಎಂದು ಬಿಜೆಪಿ ಟೀಕೆ

ಬೋಧನೆ-ಕಲಿಕೆಯನ್ನು ಪರ್ಯಾಯ ವಿಧಾನಗಳನ್ನು ಬಳಸಿ ಮಾಡಲಾಗಿರುವುದರಿಂದ 2021 ರಲ್ಲಿ ಪಠ್ಯಪುಸ್ತಕಗಳ ವಿಷಯಗಳನ್ನು ಪರಿಷ್ಕರಿಸಲು ಪ್ರಯತ್ನಿಸಿದೆ ಎಂದು NCERT ಹೇಳಿದೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಇದು ಸುಲಭ ಆಗಬಹುದು. ಇದಕ್ಕೆ ಶಿಕ್ಷಕರಿಂದ ಹೆಚ್ಚಿನ ಹಸ್ತಕ್ಷೇಪದ ಅಗತ್ಯವಿಲ್ಲ. ಸ್ವಯಂ-ಕಲಿಕೆ ಅಥವಾ ಪೀರ್-ಲರ್ನಿಂಗ್ ಮೂಲಕ ಕಲಿಯಬಹುದು, ಪ್ರಸ್ತುತ ಸಂದರ್ಭದಲ್ಲಿ ಪ್ರಸ್ತುತವಲ್ಲದ ಅಥವಾ ಹಳತಾದ ವಿಷಯ, ತರಗತಿಗಳಾದ್ಯಂತ ಈಗಾಗಲೇ ಅಭಿವೃದ್ಧಿಪಡಿಸಿದ ಕಲಿಕೆಯ ಫಲಿತಾಂಶಗಳನ್ನು ನೋಡಿ ಈ ಪರಿಷ್ಕರಣೆ ಮಾಡಲಾಗಿದೆ.

ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಡಲಾದ ವಿಷಯಗಳಲ್ಲಿ ಪರಿಸರ ಸುಸ್ಥಿರತೆ ಮತ್ತು ಶಕ್ತಿಯ ಮೂಲಗಳ ಅಧ್ಯಾಯಗಳೂ ಸೇರಿವೆ. ಇತ್ತೀಚಿನ ಪರಿಷ್ಕರಣೆಯ ನಂತರ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಸವಾಲುಗಳು ರಾಜಕೀಯ ಪಕ್ಷಗಳ ಬಗ್ಗೆ ಸಂಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ.

ಈ ಕ್ರಮಕ್ಕೆ ವಿಜ್ಞಾನಿಗಳು ಮತ್ತು ತಜ್ಞರು ಖಂಡನೆ ವ್ಯಕ್ತಪಡಿಸಿದ್ದಾರೆ. 1,800 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಶಿಕ್ಷಣತಜ್ಞರು ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿದ್ದಾರೆ.

ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನ-ಶಿಕ್ಷಣ ಸಂಶೋಧಕ ಜೊನಾಥನ್ ಓಸ್ಬೋರ್ನ್, ನೇಚರ್ ವೈಜ್ಞಾನಿಕ ಜರ್ನಲ್‌ ಜತೆ ಮಾತನಾಡಿದಾಗ ಆವರ್ತಕ ಕೋಷ್ಟಕವು ರಸಾಯನಶಾಸ್ತ್ರಜ್ಞರ ಶ್ರೇಷ್ಠ ಬೌದ್ಧಿಕ ಸಾಧನೆಗಳಲ್ಲಿ ಒಂದಾಗಿದೆ.ಇದು ಜೀವನದ ಬಿಲ್ಡಿಂಗ್ ಬ್ಲಾಕ್‌ಗಳು ಹೇಗೆ ಸಂಯೋಜಿಸುತ್ತದೆ ಎಂಬುದನ್ನು ಎಂದು ಹೇಳಿದ್ದಾರೆ. ಆದರೆ ಸರ್ಕಾರವು ಎಲ್ಲಾ ಟೀಕೆಗಳನ್ನು ಪ್ರಚಾರ ಎಂದು ತಿರಸ್ಕರಿಸಿದೆ.

ಕೊವಿಡ್ ಕಾರಣದಿಂದಾಗಿ, ಮಗುವಿನ ಮೇಲಿನ ಅಧ್ಯಯನದ ಹೊರೆ ಕಡಿಮೆ ಮಾಡಲು ಕೋರ್ಸ್‌ಗಳ ಪರಿಷ್ಕರಣೆ ನಡೆಯುತ್ತಿದೆ. ಮಗುವು ಅಧ್ಯಯನ ಮಾಡಲು ಬಯಸಿದರೆ, ಡಾರ್ವಿನ್ ಸಿದ್ಧಾಂತವು ಎಲ್ಲಾ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. 12 ನೇ ತರಗತಿಯಲ್ಲಿ, ಈಗಾಗಲೇ ಡಾರ್ವಿನ್ ಸಿದ್ಧಾಂತವಿದೆ. ಪಠ್ಯಕ್ರಮದಲ್ಲಿ ಇಂತಹ ಸುಳ್ಳು ಪ್ರಚಾರ ಮಾಡಬಾರದು ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ