ವಿಜ್ಞಾನದಲ್ಲಿ ಯುವಜನಾಂಗಕ್ಕೆ ಆಸಕ್ತಿ ಹುಟ್ಟಿಸುತ್ತೆ ನಾಸಾದ ಮಾರ್ಸ್‌ ಆಪರ್ಚುನಿಟಿ ರೋವರ್‌

ಎರಡು ದಶಕಗಳ ಹಿಂದೆ ಕೆಂಪು ಗ್ರಹದಲ್ಲಿ ನೀರಿನ ಕುರುಹಿದೆಯೇ ಎಂಬುದನ್ನು ಪತ್ತೆ ಹಚ್ಚಲು ನಾಸಾ ಮಾರ್ಸ್‌ ಆಪರ್ಚುನಿಟಿ ರೋವರ್‌ ಅನ್ನು ಕಳುಹಿಸಲಾಗಿದ್ದು, ಸದ್ಯ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಬಂದಿಳಿದಿದೆ.

ವಿಜ್ಞಾನದಲ್ಲಿ ಯುವಜನಾಂಗಕ್ಕೆ ಆಸಕ್ತಿ ಹುಟ್ಟಿಸುತ್ತೆ ನಾಸಾದ ಮಾರ್ಸ್‌ ಆಪರ್ಚುನಿಟಿ ರೋವರ್‌
ಮಾರ್ಸ್‌ ಆಪರ್ಚುನಿಟಿ ರೋವರ್‌
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 01, 2023 | 9:20 PM

ಬೆಂಗಳೂರು: ಎರಡು ದಶಕಗಳ ಹಿಂದೆ ಕೆಂಪು ಗ್ರಹದಲ್ಲಿ ನೀರಿನ ಕುರುಹಿದೆಯೇ ಎಂಬುದನ್ನು ಪತ್ತೆ ಹಚ್ಚಲು ನಾಸಾ (NASA) ಮಾರ್ಸ್‌ ಆಪರ್ಚುನಿಟಿ ರೋವರ್‌ ಅನ್ನು ಕಳುಹಿಸಿತು. ಇಂದು ಅದರ ಪೂರ್ಣ ಪ್ರಮಾಣದ ಪ್ರತಿಕೃತಿಯು ಮುಂದಿನ ಪೀಳಿಗೆಯ ಬಾಹ್ಯಾಕಾಶ ಪರಿಶೋಧಕರಿಗೆ ಪ್ರೇರಣೆ ನೀಡಲು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಬಂದಿಳಿದಿದೆ. ಯು.ಎಸ್‌. ಅಂಡರ್‌ ಸೆಕ್ರೆಟರಿ ಆಫ್‌ ಕಾಮರ್ಸ್‌ ಫಾರ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಮರಿಸಾ ಲಾಗೊ, ಚೆನ್ನೈನ ಯು.ಎಸ್‌. ಕಾನ್ಸಲ್‌ ಜನರಲ್‌ ಜುಡಿತ್‌ ರೇವಿನ್, ಬೆಂಗಳೂರಿನಲ್ಲಿರುವ ಯು.ಆರ್‌. ರಾವ್‌ ಸ್ಯಾಟಲೈಟ್‌ ಸೆಂಟರ್‌ನ ಡೈರೆಕ್ಟರ್‌ ಡಾ.ಎಂ. ಶಂಕರನ್​ ಜೂನ್‌ 1 ರಂದು ಅನಾವರಣಗೊಳಿಸಿದರು.

ಯು.ಎಸ್‌. ಅಂಡರ್‌ ಸೆಕ್ರೆಟರಿ ಆಫ್‌ ಕಾಮರ್ಸ್‌ ಫಾರ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಮರಿಸಾ ಲಾಗೊ, ಅತ್ಯಂತ ಕೀಲಕ ವಲಯಗಳಲ್ಲಿ ಅಮೇರಿಕ ಮತ್ತು ಭಾರತಗಳ ಸಹಕಾರ ಇನ್ನಷ್ಟು ನಿಕಟವಾಗಿದೆ. ಬಾಹ್ಯಾಕಾಶ ವಲಯವು ನಮ್ಮ ಸಹಭಾಗಿತ್ವಕ್ಕೆ ಮತ್ತೊಂದು ಉದಾಹರಣೆ. ಇಂದಿನ ಅನಾವರಣ ಸಮಾರಂಭವು ಪರಸ್ಪರರ ಬದ್ಧತೆಯ ಸಂಕೇತವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫಾಕ್ಸ್​​​ಕಾನ್​ ಘಟಕ; ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ, ಕಾಂಗ್ರೆಸ್​ ಪಕ್ಷವನ್ನು ಲೇವಡಿ ಮಾಡಿದ ಬಿಜೆಪಿ

ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣ ಪ್ರಮಾಣದ ಮಾದರಿಯನ್ನು ಅಮೇರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿದ್ದಾರೆ. ಅಮೇರಿಕದಲ್ಲಿನ ವರ್ಜಿನಿಯದ ಡಲ್ಲಾಸ್‌ನಲ್ಲಿರುವ ಸ್ಮಿತ್‌ಸೋನಿಯನ್‌ ಅವರ ಏರ್‌ ಅಂಡ್‌ ಸ್ಪೇಸ್‌ ಮ್ಯೂಸಿಯಂನಲ್ಲಿ, 2020ರ ದುಬೈ ವರ್ಲ್ಡ್‌ ಎಕ್ಸ್‌ಪೊದಲ್ಲಿ, ಮತ್ತು ಚೆನ್ನೈ ದೂತಾವಾಸದಲ್ಲಿನ ಅಮೆರಿಕನ್‌ ಸೆಂಟರ್‌ನಲ್ಲಿ ಪ್ರದರ್ಶಿಸಲಾಗಿತ್ತು.

ಚೆನ್ನೈನ ಯು.ಎಸ್‌. ಕಾನ್ಸಲ್‌ ಜನರಲ್‌ ಜುಡಿತ್‌ ರೇವಿನ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಮತ್ತು ಗಣಿತ (STEM) ಶಿಕ್ಷಣವನ್ನು ಪ್ರೋತ್ಸಾಹಿಸಲು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ನಡೆಸುತ್ತಿರುವ ಪ್ರಯತ್ನಗಳನ್ನು ಬೆಂಬಲಿಸಲು ಯು.ಎಸ್‌ ಕಾನ್ಸಲೇಟ್‌ ಜನರಲ್‌ ಹೆಮ್ಮೆ ಪಡುತ್ತದೆ. ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣಪ್ರಮಾಣದ ಮಾದರಿಯ ಪ್ರದರ್ಶನದ ಮೂಲಕ ಮುಂದಿನ ಪೀಳಿಗೆಯ ಸಂಶೋಧಕರಿಗೆ ಸ್ಫೂರ್ತಿ ನೀಡುವ ಆಶಯ ನಮ್ಮದು ಎಂದರು.

ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಕೆ ಗೋವಿಂದರಾಜ್, ನಜೀರ್‌ ಅಹ್ಮದ್ ನೇಮಕ: ಸರ್ಕಾರ ಆದೇಶ

ಭಾರತಕ್ಕೆ ಮಾರ್ಸ್‌ರೋವರ್‌ ಆಪರ್ಚುನಿಟಿಯ ಪೂರ್ಣ ಪ್ರಮಾಣದ ಪ್ರತಿಕೃತಿಯ ಆಗಮನವು ಭಾರತ ಮತ್ತು ಅಮೇರಿಕಗಳ ನಡುವಣ ದೀರ್ಘಕಾಲೀನ ಬಾಹ್ಯಾಕಾಶ ಸಹಕಾರದ ಪ್ರತೀಕವಾಗಿದೆ. ಅಮೇರಿಕಕ್ಕೆ ಬಾಹ್ಯಾಕಾಶ ವಲಯದಲ್ಲಿ ಭಾರತವು ಬಹುಮುಖ್ಯ ಸಹಭಾಗಿ. 2005 ರಲ್ಲಿ ಆರಂಭವಾದ ಅಮೇರಿಕ ಭಾರತ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆಯು ನಾಗರಿಕ ಬಾಹ್ಯಾಕಾಶ ಸಹಕಾರಕ್ಕಾಗಿ ಹೊಸ ಮತ್ತು ವಿಸ್ತೃತ ಕ್ಷೇತ್ರಗಳ ಕುರಿತು ರಚನಾತ್ಮಕ ದೃಷ್ಟಿಕೋನ ಮತ್ತು ಚರ್ಚೆಯ ವಿನಿಮಯದ ಸ್ಥಳವಾಗಿದೆ.

ಈ ವಿಷಯದ ಸಂಬಂಧ ಉಭಯ ದೇಶಗಳ ನಡುವಿನ ಮಾತುಕತೆಯ ಆಧಾರದಲ್ಲಿ ನಾಲ್ಕು ಕಾರ್ಯಪಡೆಗಳನ್ನು ಮಾಡಲಾಗಿದೆ. ಭೂವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆ, ಹಿಲಿಯೊಫಿಸಿಕ್ಸ್‌, ಮತ್ತು ಮಾನವನ ಬಾಹ್ಯಾಕಾಶ ಯಾತ್ರೆ. ಎರಡೂ ದೇಶಗಳ ನಡುವಣ ಸಹಕಾರದಲ್ಲಿ ಅಭಿವೃದ್ದಿ ಪಡಿಸಿದ ಬಾಹ್ಯಾಕಾಶ ಸಂಶೋಧನೆಗಳು ನಿಜಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು, ದೂರಸಂಪರ್ಕ ಮತ್ತು ಉಪಗ್ರಹ ನ್ಯಾವಿಗೇಷನ್‌ನಲ್ಲಿನ ಪ್ರಗತಿಯಿಂದ ಕೃಷಿ ಮೇಲ್ವಿಚಾರಣೆ ಮತ್ತು ಹವಾಮಾನ ಮುನ್ಸೂಚನೆಯವರೆಗೆ ನಮ್ಮೆಲ್ಲರ ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಅಮೇರಿಕ ಮತ್ತು ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಜಗತ್ತನ್ನು ಬದಲಾಯಿಸಲು ಒಟ್ಟಾಗಿ ಕೆಲಸ ಮಾಡುವ ಅವಕಾಶವನ್ನು ಹೊಂದಿದ್ದಾರೆ ಎಂದರು.

ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕಿ ಕೆ.ಎ. ಸಾಧನ ಮಾತನಾಡಿ, ವಿಐಟಿಎಂನ ಬಾಹ್ಯಾಕಾಶ ಗ್ಯಾಲರಿಯಲ್ಲಿ ನಾಸಾದ ಮಾರ್ಸ್‌ ರೋವರ್‌ ಆಪರ್ಚುನಿಟಿಯ ಪೂರ್ಣ ಪ್ರಮಾಣದ ಪ್ರತಿಕೃತಿಯ ಪ್ರದರ್ಶನ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಿ, ಬಾಹ್ಯಾಕಾಶ ಪರಿಶೋಧನೆಯ ಅದ್ಭುತಗಳನ್ನು ಕಲಿಯಲು ಮತ್ತು ಸ್ಫೂರ್ತಿ ಪಡೆಯಲು ಸಮುದಾಯಕ್ಕೆ ಒಂದು ಅನನ್ಯ ಅವಕಾಶವನ್ನು ಸೃಷ್ಟಿಸುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.