ಅತಿ ಹೆಚ್ಚು ವಿಧಾನಸಭೆ ಕಲಾಪ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕ ಫಸ್ಟ್: ಬಜೆಟ್‌ ಮೇಲಿನ ಚರ್ಚೆಯಲ್ಲಿ ನಂ.2

ಅತಿ ಹೆಚ್ಚು ವಿಧಾನಸಭೆ ಕಲಾಪ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕ ನಂಬರ್ 1 ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಇನ್ನು ಬಜೆಟ್‌ ಮೇಲಿನ ಚರ್ಚೆಗೆ ಹೆಚ್ಚು ಅವಕಾಶ ಮಾಡಿಕೊಟ್ಟ ದೇಶದ ಎರಡನೇ ರಾಜ್ಯ ಎನ್ನುವ ಹೆಗ್ಗಳಿಕೆಗೂ ಕರ್ನಾಟಕ ಭಾಜನವಾಗಿದೆ.

ಅತಿ ಹೆಚ್ಚು ವಿಧಾನಸಭೆ ಕಲಾಪ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕ ಫಸ್ಟ್: ಬಜೆಟ್‌ ಮೇಲಿನ ಚರ್ಚೆಯಲ್ಲಿ ನಂ.2
ವಿಧಾನಸೌಧ
Follow us
ರಮೇಶ್ ಬಿ. ಜವಳಗೇರಾ
|

Updated on: Jun 02, 2023 | 8:53 AM

ಬೆಂಗಳೂರು: 2022ರಲ್ಲಿ ಅತಿ ಹೆಚ್ಚು ದಿನ ವಿಧಾನಸಭೆ ಕಲಾಪ (Assembly Session) ನಡೆಸಿದ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ(Karnataka) ಪಾತ್ರವಾಗಿದೆ. ಇನ್ನು ಬಜೆಟ್‌ ಮೇಲಿನ ಚರ್ಚೆಗೆ ಹೆಚ್ಚು ಅವಕಾಶ ಮಾಡಿಕೊಟ್ಟ ದೇಶದ ಎರಡನೇ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರುನಾಡು ಪಾತ್ರವಾಗಿದೆ. ಹೌದು… ದೇಶದ ವಿವಿಧ ವಿಧಾನಸಭೆಗಳ ಕಲಾಪ ಕುರಿತಂತೆ ಚಿಂತನಾ ಸಂಸ್ಥೆಯಾಗಿರುವ ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರೀಸರ್ಚ್‌ ಸಂಸ್ಥೆ ವರದಿ ಬಿಡುಗಡೆ ಮಾಡಿದ್ದು, 2022ನೇ ವರ್ಷದಲ್ಲಿ ದೇಶಾದ್ಯಂತ ಸರಾಸರಿ ಕೇವಲ 21 ದಿನಗಳು ಮಾತ್ರ ವಿಧಾನಸಭೆ ಕಲಾಪ ನಡೆದಿದೆ. ಆದರೆ ಕರ್ನಾಟಕದಲ್ಲಿ 45 ದಿನ ಕಲಾಪ ನಡೆದಿದ್ದು, ಪಶ್ಚಿಮ ಬಂಗಾಳ (42 ದಿನ) ಹಾಗೂ ಕೇರಳ (41 ದಿನ) ನಂತರದ ಸ್ಥಾನದಲ್ಲಿ ಇವೆ. ಈ ಮೂಲಕ ಅತಿ ಹೆಚ್ಚು ದಿನ ವಿಧಾನಸಭೆ ಕಲಾಪ ನಡೆಸಿದ ಎನ್ನುವ ಹಿರಿಮೆ ಕರ್ನಾಟಕದ್ದಾಗಿದೆ.

ಇದನ್ನೂ ಓದಿ: Karnataka Breaking News Today Live: ಹೈವೋಲ್ಟೇಜ್​​ ಮೀಟಿಂಗ್: ಉಚಿತ, ಖಚಿತ, ಖಂಡಿತ, ನಿಶ್ಚಿತ.. ಗ್ಯಾರಂಟಿ ಘೋಷಣೆಗೆ ಕ್ಷಣಗಣನೆ

2022ರಲ್ಲಿ ಬಜೆಟ್‌ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ 26 ದಿನಗಳ ಕಾಲ ಚರ್ಚೆ ನಡೆದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, 15 ದಿನ ಚರ್ಚೆಯಾಗಿದೆ. ಬಳಿಕದ ಸ್ಥಾನದಲ್ಲಿ ಕೇರಳ (14 ದಿನ) ಹಾಗೂ ಒಡಿಶಾ (14 ದಿನ)ಗಳು ಇವೆ ಎಂದು ವರದಿ ಹೇಳಿದೆ. ಇನ್ನು ವಿಧಾನಸಭೆ ಕಲಾಪಗಳ ಅವಧಿ ಕುಸಿಯುತ್ತಿರುವುದನ್ನು ವರದಿ ಎತ್ತಿ ತೋರಿಸಿದೆ. 2016ರಲ್ಲಿ ವಿಧಾನಸಭೆಗಳು ಸರಾಸರಿ 31 ದಿನ ಕಲಾಪ ನಡೆಸಿದ್ದರೆ, ಅದು ಈಗ 21 ದಿನಕ್ಕೆ ಕುಸಿದಿದೆ. 2016ರಿಂದ 2022ರ ನಡುವಣ ಅವಧಿಯಲ್ಲಿ ವಿಧಾನಸಭೆಗಳು ಸರಾಸರಿ 25 ದಿನ ಕಲಾಪ ನಡೆಸಿವೆ. 48 ದಿನ ಕಲಾಪ ನಡೆಸಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಒಡಿಶಾ (41 ದಿನ) ಹಾಗೂ ಕರ್ನಾಟಕ (35 ದಿನ) ನಂತರದ ಸ್ಥಾನದಲ್ಲಿವೆ ಎಂದು ತಿಳಿಸಿದೆ.

ಪ್ರತಿ ವಿಧಾನಸಭೆಯಲ್ಲೂ ವರ್ಷಕ್ಕೆ 2 ಅಥವಾ 3 ಬಾರಿ ಅಧಿವೇಶನಗಳು ನಡೆಯುತ್ತವೆ. ಈ ಪೈಕಿ ಬಜೆಟ್‌ ಅಧಿವೇಶನ ಸುದೀರ್ಘವಾಗಿರುತ್ತದೆ. ನಂತರ ಮುಂಗಾರು ಹಾಗೂ ಚಳಿಗಾಲದ ಅಧಿವೇಶನಗಳು ನಡೆಯುತ್ತವೆ. ಈಶಾನ್ಯದ 5 ರಾಜ್ಯಗಳು ಸೇರಿ 12 ರಾಜ್ಯಗಳಲ್ಲಿ 2022ರಲ್ಲಿ ಎರಡೇ ಅಧಿವೇಶನ ನಡೆದಿವೆ. ವಿಧಾನಸಭೆಯ ಒಟ್ಟಾರೆ ಕಲಾಪದಲ್ಲಿ ದೇಶದಲ್ಲಿ ಸರಾಸರಿ ಶೇ.61ರಷ್ಟು ಬಜೆಟ್‌ ಅಧಿವೇಶನದ್ದೇ ಇದೆ. ಆದರೆ ತಮಿಳುನಾಡಿನಲ್ಲಿ ಶೇ.90ರಷ್ಟು ಕಲಾಪವನ್ನು ಬಜೆಟ್‌ ಅಧಿವೇಶನದಲ್ಲಿಯೇ ನಡೆಸಲಾಗಿದೆ. ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ಈ ಪ್ರಮಾಣ ಶೇ.80ರಷ್ಟಿದೆ ಎಂದು ಹೇಳಿದೆ.

ಬಜೆಟ್‌ ಮೇಲಿನ ಚರ್ಚೆ ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ದಿನ ನಡೆದಿದೆ. ಆದರೆ ದೆಹಲಿ, ಮಧ್ಯಪ್ರದೇಶ, ಪಂಜಾಬ್‌ನಲ್ಲಿ ಕೇವಲ 2 ದಿನ ಜರುಗಿದೆ. ನಾಗಾಲ್ಯಾಂಡ್‌ನಲ್ಲಿ ಬಜೆಟ್‌ ಮಂಡಿಸಿದ ದಿನವೇ ಅಂಗೀಕರಿಸಲಾಗಿದೆ ಎಂದು ವರದಿ ತಿಳಿಸಿದೆ. 2022ರಲ್ಲಿ ಅಂಗೀಕರಿಸಲಾದ 322 ಮಸೂದೆಗಳ ಪೈಕಿ ಶೇ.56ರಷ್ಟಕ್ಕೆ ಮಂಡನೆಯಾದ ಮರುದಿನವೇ ಅಂಗೀಕಾರ ನೀಡಲಾಗಿದೆ. ಕರ್ನಾಟಕ, ಕೇರಳ, ಮೇಘಾಲಯ, ರಾಜಸ್ಥಾನಗಳಲ್ಲಿ ಮಾತ್ರ ಒಂದು ಮಸೂದೆಗೆ ಒಪ್ಪಿಗೆ ನೀಡಲು ಸರಾಸರಿ 5 ದಿನ ತೆಗೆದುಕೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ