Robert Vadra: ಭೂ ಅವ್ಯವಹಾರ ಆರೋಪ, ಸಮನ್ಸ್​, ಇಡಿ ಕಚೇರಿಗೆ ಹಾಜರಾದ ರಾಬರ್ಟ್​ ವಾದ್ರಾ

|

Updated on: Apr 15, 2025 | 11:42 AM

ಉದ್ಯಮಿ ರಾಬರ್ಟ್ ವಾದ್ರಾ(Robert Vadra) ಸಂಕಷ್ಟ ಮತ್ತೆ ಬಂದೊದಗಿದೆ. ಭೂ ಅವ್ಯವಹಾರದ ಆರೋಪಕ್ಕೆ ಸಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಸಮನ್ಸ್​ ಕಳುಹಿಸಿದ್ದು, ಇಂದು ಇಡಿ ಕಚೇರಿಗೆ ವಾದ್ರಾ ಹಾಜರಾಗಿದ್ದಾರೆ. ಇದು ರಾಬರ್ಟ್ ವಾದ್ರಾಗೆ ಕಳುಹಿಸಲಾದ ಎರಡನೇ ಸಮನ್ಸ್ ಆಗಿದ್ದು, ಹರ್ಯಾಣ ಭೂ ವ್ಯವಹಾರ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅವರನ್ನು ಇಂದು ವಿಚಾರಣೆಗೆ ಒಳಪಡಿಸಲಾಗಿದೆ.

Robert Vadra: ಭೂ ಅವ್ಯವಹಾರ ಆರೋಪ, ಸಮನ್ಸ್​,  ಇಡಿ ಕಚೇರಿಗೆ ಹಾಜರಾದ ರಾಬರ್ಟ್​ ವಾದ್ರಾ
ರಾಬರ್ಟ್​ ವಾದ್ರಾ
Follow us on

ನವದೆಹಲಿ, ಏಪ್ರಿಲ್ 15: ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ಉದ್ಯಮಿ ರಾಬರ್ಟ್ ವಾದ್ರಾ(Robert Vadra) ಗೆ ಸಂಕಷ್ಟ ಮತ್ತೆ ಬಂದೊದಗಿದೆ. ಭೂ ಅವ್ಯವಹಾರದ ಆರೋಪಕ್ಕೆ ಸಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಸಮನ್ಸ್​ ಕಳುಹಿಸಿದ್ದು, ಇಂದು ಇಡಿ ಕಚೇರಿಗೆ ವಾದ್ರಾ ಹಾಜರಾಗಿದ್ದಾರೆ. ಇದು ರಾಬರ್ಟ್ ವಾದ್ರಾಗೆ ಕಳುಹಿಸಲಾದ ಎರಡನೇ ಸಮನ್ಸ್ ಆಗಿದ್ದು, ಹರ್ಯಾಣ ಭೂ ವ್ಯವಹಾರ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅವರನ್ನು ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ರಾಬರ್ಟ್ ವಾದ್ರಾ ಇಂದು ಇಡಿ ಕಚೇರಿಗೆ ತೆರಳಿದ್ದಾರೆ. ಇದು 2018 ರ ಪ್ರಕರಣವಾಗಿದ್ದು. ಗುರುಗ್ರಾಮದಲ್ಲಿ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಡಿಎಲ್ಎಫ್ ನಡುವೆ 3.5 ಎಕರೆ ಭೂಮಿ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇದರಲ್ಲಿ ವಂಚನೆ ಮತ್ತು ನಿಯಮಗಳ ಉಲ್ಲಂಘನೆಯ ಆರೋಪಗಳು ಸೇರಿವೆ, ಏಪ್ರಿಲ್ 8 ರಂದು ರಾಬರ್ಟ್ ವಾದ್ರಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು, ಆದರೆ ಅವರು ಹಾಜರಾಗಲಿಲ್ಲ. ಇಡಿ ಈಗ ಎರಡನೇ ಸಮನ್ಸ್ ಕಳುಹಿಸಿತ್ತು. ಸುರೇಂದ್ರ ಶರ್ಮಾ ಅವರ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 1, 2018 ರಂದು ಗುರುಗ್ರಾಮದ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಬರ್ಟ್ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿ ಇತರರೊಂದಿಗೆ ಸೇರಿ ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ಅವರನ್ನು ಸಹ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 420, 120, 467, 468 ಮತ್ತು 471 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ, ಐಪಿಸಿಯ ಸೆಕ್ಷನ್ 423 ರ ಅಡಿಯಲ್ಲಿ ಹೊಸ ಆರೋಪಗಳನ್ನು ಸೇರಿಸಲಾಯಿತು.

ಮತ್ತಷ್ಟು ಓದಿ: ಅಮೇಥಿ ಹಿಂಪಡೆಯಲು ಕೈ ಕಸರತ್ತು; ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಕಣಕ್ಕಿಳಿಯುವ ಸಾಧ್ಯತೆ

ಫೆಬ್ರವರಿ 2008 ರಲ್ಲಿ ವಾದ್ರಾ ಅವರ ಕಂಪನಿಯು ಗುರುಗ್ರಾಮದ ಶಿಕೋಪುರದಲ್ಲಿ 3.5 ಎಕರೆ ಭೂಮಿಯನ್ನು ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ 7.5 ಕೋಟಿ ರೂ.ಗೆ ಖರೀದಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಾಣಿಜ್ಯ ಪರವಾನಗಿ ಪಡೆದ ನಂತರ, ಕಂಪನಿಯು ಅದೇ ಆಸ್ತಿಯನ್ನು ಡಿಎಲ್‌ಎಫ್‌ಗೆ 58 ಕೋಟಿ ರೂ.ಗೆ ಮಾರಾಟ ಮಾಡಿದೆ. ಈ ಪ್ರಕರಣದಲ್ಲಿ, ವಾದ್ರಾ ಅವರ ಕಂಪನಿಯಲ್ಲಿನ ಹಣಕಾಸಿನ ಅಕ್ರಮಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ