Digital Arrest: ಭಾರತದ 12 ಕಡೆಗಳಲ್ಲಿ ಸಿಬಿಐ ದಾಳಿ, ನಾಲ್ವರು ಸೈಬರ್ ಅಪರಾಧಿಗಳ ಬಂಧನ
ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಸೈಬರ್ ಅಪರಾದಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ತನಿಖಾ ಸಂಸ್ಥೆಯ ವಕ್ತಾರರು ಮಂಗಳವಾರ ಈ ಮಾಹಿತಿಯನ್ನು ನೀಡಿದ್ದಾರೆ. ಆಪರೇಷನ್ ಚಕ್ರ-ವಿ" ಅಡಿಯಲ್ಲಿ 12 ಸ್ಥಳಗಳಲ್ಲಿ ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯ ನಂತರ ಮುಂಬೈ ಮತ್ತು ಮೊರಾದಾಬಾದ್‌ನಿಂದ ತಲಾ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ರಾಜಸ್ಥಾನ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ 'ಡಿಜಿಟಲ್ ಅರೆಸ್ಟ್' ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು. ಈ ಪ್ರಕರಣವನ್ನು ಜುನ್ಜುನು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ನವದೆಹಲಿ, ಏಪ್ರಿಲ್ 15: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ಅಪರಾಧಿಗಳು(Cyber Criminals) ಮೂರು ತಿಂಗಳಲ್ಲಿ 42 ಬಾರಿ 7.67 ಕೋಟಿ ರೂ.ಗಳಷ್ಟು ಸುಲಿಗೆ ಮಾಡಿರುವ ಪ್ರಕರಣದಲ್ಲಿ ನಾಲ್ವರು ಪ್ರಮುಖ ಸೈಬರ್ ಅಪರಾಧಿಗಳನ್ನು ಬಂಧಿಸಿರುವುದಾಗಿ ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ತಿಳಿಸಿದೆ. ಭಾರತದ 12 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೂಲತಃ ರಾಜಸ್ಥಾನದ ಜುನ್ಜುನುವಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ರಾಜಸ್ಥಾನ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ ವಹಿಸಿಕೊಂಡಿತ್ತು. ವಿವಿಧ ಜಾರಿ ಸಂಸ್ಥೆಗಳ ಸಿಬ್ಬಂದಿಯಂತೆ ನಟಿಸುವ ಸೈಬರ್ ವಂಚಕರು ಕೋಟಿಗಟ್ಟಲೆ ಹಣ ದೋಚಿದ್ದರು.
ಸಿಬಿಐ ನಡೆಸುತ್ತಿರುವ ಆಪರೇಷನ್ ಚಕ್ರ-ವಿ ಕಾರ್ಯಾಚರಣೆಯ ಭಾಗವಾಗಿ ಮುಂಬೈ ಮತ್ತು ಮೊರಾದಾಬಾದ್‌ನಿಂದ ತಲಾ ಇಬ್ಬರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಸಂಭಾಲ್, ಮಹಾರಾಷ್ಟ್ರದ ಮುಂಬೈ, ರಾಜಸ್ಥಾನದ ಜೈಪುರ ಮತ್ತು ಪಶ್ಚಿಮ ಬಂಗಾಳದ ಕೃಷ್ಣನಗರ ಸೇರಿದಂತೆ ದೇಶಾದ್ಯಂತ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು.
ಮತ್ತಷ್ಟು ಓದಿ: ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ
ತನಿಖೆಯ ಸಮಯದಲ್ಲಿ ದೊರೆತ ಸುಳಿವುಗಳ ಆಧಾರದ ಮೇಲೆ, ಸಿಬಿಐ ಇತ್ತೀಚೆಗೆ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಸಂಭಾಲ್, ಮಹಾರಾಷ್ಟ್ರದ ಮುಂಬೈ, ರಾಜಸ್ಥಾನದ ಜೈಪುರ ಮತ್ತು ಪಶ್ಚಿಮ ಬಂಗಾಳದ ಕೃಷ್ಣನಗರದ ಹನ್ನೆರಡು ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತು, ಈ ಹೆಚ್ಚು ಸಂಘಟಿತ ಅಪರಾಧ ಸಿಂಡಿಕೇಟ್‌ನಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು.
ಶೋಧದ ಸಮಯದಲ್ಲಿ, ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ ಕಾರ್ಡ್‌ಗಳು, ಚೆಕ್ ಪುಸ್ತಕಗಳು, ಠೇವಣಿ ಸ್ಲಿಪ್‌ಗಳು ಮತ್ತು ಡಿಜಿಟಲ್ ಸಾಧನಗಳು ಸೇರಿದಂತೆ ಗಣನೀಯ ಪುರಾವೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ. ಬಂಧಿತ ಆರೋಪಿಗಳನ್ನು ಸಮರ್ಥ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಐದು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ