ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ

ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ

Sahadev Mane
| Updated By: ವಿವೇಕ ಬಿರಾದಾರ

Updated on: Nov 29, 2024 | 2:23 PM

ಅಪರಾಧ ಕೃತ್ಯಗಳು ಕಡಿಮೆ ಆಗಲಿ ಅಂತ ಬೆಳಗಾವಿಯ ಮಾಳಮಾರುತಿ ಪೊಲೀಸರು ಠಾಣೆಯಲ್ಲಿ ಹೋಮ-ಹವನ ಮಾಡಿಸಿದ್ದಾರೆ. ಠಾಣೆ ಬಾಗಿಲಿಗೆ ಬುದಗುಂಬಳಕಾಯಿ ಒಡೆದು ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.

ಬೆಳಗಾವಿ, ನವೆಂಬರ್​ 29: ಅಪರಾಧ ಕೃತ್ಯಗಳು ಕಡಿಮೆ ಆಗಲಿ ಅಂತ ಬೆಳಗಾವಿಯ ಮಾಳಮಾರುತಿ ಪೊಲೀಸರು ಠಾಣೆಯಲ್ಲಿ ಹೋಮ-ಹವನ ಮಾಡಿಸಿದ್ದಾರೆ. ಠಾಣೆ ಬಾಗಿಲಿಗೆ ಬುದಗುಂಬಳಕಾಯಿ ಒಡೆದು ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಈ ಠಾಣೆಯಲ್ಲಿ ಕೊಲೆ ಸುಲಿಗೆ, ದರೋಡೆ, ಕಳ್ಳತನ ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕಳೆದ ವಾರ ಮಹಿಳೆಯೊಬ್ಬಳ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಇದೇ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಗಾಗಿ ಗುಂಡಿನ ಸದ್ದು ಕೇಳಿ ಬಂದಿತ್ತು. ಈ ಎಲ್ಲ ಪ್ರಕರಣಗಳು ಇದೇ ಠಾಣೆಯಲ್ಲಿ ದಾಖಲಾಗಿವೆ. ಹೀಗಾಗಿ, ಅಪರಾಧ ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಪೊಲೀಸರು ದೇವರ ಮೊರೆ ಹೋಗಿದ್ದಾರೆ.