5 ಮರ್ಸಿಡಿಸ್ ಬೆನ್ಜ್ ಕಾರುಗಳಿದ್ದ ಟ್ರಕ್​ ದರೋಡೆ ಮಾಡಿದರು.. ಮುಂದೇನಾಯ್ತು?

| Updated By: ಸಾಧು ಶ್ರೀನಾಥ್​

Updated on: Oct 06, 2020 | 3:09 PM

ಚಂಡೀಗಢ: ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರ್​ಗಳನ್ನ ಹೊತ್ತೊಯ್ಯುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ವಾಹನದೊಂದಿಗೆ ಪರಾರಿಯಾಗಿದ್ದ ದರೋಡೆಕೋರನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ, ಈ ಘಟನೆ ಹರಿಯಾಣದ ನೂಹ್​ ಜಿಲ್ಲೆಯಲ್ಲಿ ನಡೆದಿದೆ. ಸರಿಸುಮಾರು 3.5 ಕೋಟಿ ರೂಪಾಯಿ ಮೌಲ್ಯದ 5 ಐಷಾರಾಮಿ ಮರ್ಸಿಡಿಸ್ ಬೆನ್ಜ್ (Mercedes-Benz) ಕಾರ್​ಗಳನ್ನ ಸಾಗಿಸುತ್ತಿದ್ದ ಕಂಟೇನರ್​ ಲಾರಿಯೊಂದು ಸೋಮವಾರ ನೂಹ್​ ಜಿಲ್ಲೆಯಲ್ಲಿ ಹಾದುಹೋಗುತ್ತಿತ್ತು. ಇದೇ ವೇಳೆ ಲಾರಿಯನ್ನು ಅಡ್ಡಗಟ್ಟಿದ ದರೋಡೆಕೋರರ ಗ್ಯಾಂಗ್​ ಚಾಲಕನಿಗೆ ಬಂದೂಕು ತೋರಿಸಿ ಬೆದರಿಕೆ ಒಡ್ಡಿದ್ದಾರೆ. ಬಳಿಕ ಆತನನ್ನು ಕಟ್ಟಿಹಾಕಿ […]

5 ಮರ್ಸಿಡಿಸ್ ಬೆನ್ಜ್ ಕಾರುಗಳಿದ್ದ ಟ್ರಕ್​ ದರೋಡೆ ಮಾಡಿದರು.. ಮುಂದೇನಾಯ್ತು?
Follow us on

ಚಂಡೀಗಢ: ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರ್​ಗಳನ್ನ ಹೊತ್ತೊಯ್ಯುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ವಾಹನದೊಂದಿಗೆ ಪರಾರಿಯಾಗಿದ್ದ ದರೋಡೆಕೋರನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ, ಈ ಘಟನೆ ಹರಿಯಾಣದ ನೂಹ್​ ಜಿಲ್ಲೆಯಲ್ಲಿ ನಡೆದಿದೆ.

ಸರಿಸುಮಾರು 3.5 ಕೋಟಿ ರೂಪಾಯಿ ಮೌಲ್ಯದ 5 ಐಷಾರಾಮಿ ಮರ್ಸಿಡಿಸ್ ಬೆನ್ಜ್ (Mercedes-Benz) ಕಾರ್​ಗಳನ್ನ ಸಾಗಿಸುತ್ತಿದ್ದ ಕಂಟೇನರ್​ ಲಾರಿಯೊಂದು ಸೋಮವಾರ ನೂಹ್​ ಜಿಲ್ಲೆಯಲ್ಲಿ ಹಾದುಹೋಗುತ್ತಿತ್ತು. ಇದೇ ವೇಳೆ ಲಾರಿಯನ್ನು ಅಡ್ಡಗಟ್ಟಿದ ದರೋಡೆಕೋರರ ಗ್ಯಾಂಗ್​ ಚಾಲಕನಿಗೆ ಬಂದೂಕು ತೋರಿಸಿ ಬೆದರಿಕೆ ಒಡ್ಡಿದ್ದಾರೆ. ಬಳಿಕ ಆತನನ್ನು ಕಟ್ಟಿಹಾಕಿ ಲಾರಿಯೊಂದಿಗೆ ಪರಾರಿಯಾಗಿದ್ದರು.

ಇನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಕಾರ್ಯಪ್ರವೃತರಾದ ಖಾಕಿ ಪಡೆ ಲಾರಿಯನ್ನು ಬೆನ್ನಟ್ಟಿ ದರೋಡೆಕೋರರನ್ನು ಬಂಧಿಸಿದ್ದಾರೆ.