ಅಂಡಮಾನ್: ಪತ್ನಿ ಕೊಲೆ ಮಾಡಿ 11 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಹರ್ಯಾಣ ಮೂಲದ ವ್ಯಕ್ತಿಯ ಬಂಧನ
ಪತ್ನಿಯನ್ನು ಹತ್ಯೆ ಮಾಡಿ 11 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ, ಹರ್ಯಾಣ ಮೂಲದ ವ್ಯಕ್ತಿಯನ್ನು ಅಂಡಮಾನ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. 2007ರಲ್ಲಿ ಹರಿಯಾಣದಲ್ಲಿ ಪತ್ನಿಯನ್ನು ಕೊಂದ ಆರೋಪ ಹೊರಿಸಲಾಗಿತ್ತು. ಆರೋಪಿಯನ್ನು 54 ವರ್ಷದ ಎಪಿ ಸೆಲ್ವನ್ ಎಂದು ಗುರುತಿಸಲಾಗಿದ್ದು, 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅವರು ವೃತ್ತಿಯಲ್ಲಿ ಅಡುಗೆ ಮಾಡುವವರಾಗಿದ್ದರು.
ಪತ್ನಿಯನ್ನು ಹತ್ಯೆ ಮಾಡಿ 11 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ, ಹರ್ಯಾಣ ಮೂಲದ ವ್ಯಕ್ತಿಯನ್ನು ಅಂಡಮಾನ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. 2007ರಲ್ಲಿ ಹರಿಯಾಣದಲ್ಲಿ ಪತ್ನಿಯನ್ನು ಕೊಂದ ಆರೋಪ ಹೊರಿಸಲಾಗಿತ್ತು. ಆರೋಪಿಯನ್ನು 54 ವರ್ಷದ ಎಪಿ ಸೆಲ್ವನ್ ಎಂದು ಗುರುತಿಸಲಾಗಿದ್ದು, 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅವರು ವೃತ್ತಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. 2007 ರಲ್ಲಿ, ಅವರ ಪತ್ನಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು, ಹರ್ಯಾಣದ ಬಾಡಿಗೆ ಮನೆಯಿಂದ ಆತನನ್ನು ಬಂಧಿಸಲಾಗಿತ್ತು, ಆದರೆ ಸಾಕ್ಷ್ಯಾಧಾರ ಕೊರತೆಯಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ತನಿಖೆಯ ವೇಳೆ, ಪತ್ನಿಯ ಹತ್ಯೆಯಲ್ಲಿ ಆತನ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ತನಿಖಾ ಅಧಿಕಾರಿಗಳು ಸೆಲ್ವನ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ ನಂತರ 2012 ರಲ್ಲಿ ಅಂಬಾಲಾ ನ್ಯಾಯಾಲಯವು ಆತನ ವಿರುದ್ಧ ಹೊಸದಾಗಿ ಮರು-ಬಂಧನ ವಾರಂಟ್ ಹೊರಡಿಸಿತು.
ಅಂದಿನಿಂದ ಸೆಲ್ವನ್ ಪರಾರಿಯಾಗಿದ್ದರು ಮತ್ತು 11 ವರ್ಷಗಳ ನಂತರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಿಕೋಬಾರ್ ಜಿಲ್ಲೆಯ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿರುವ ವಿಜಯ್ ನಗರ ಎಂಬ ದೂರದ ಹಳ್ಳಿಯಲ್ಲಿ ಆತ ಇರುವುದು ಪತ್ತೆಯಾಗಿತ್ತು.
ಮತ್ತಷ್ಟು ಓದಿ: Bengaluru News: ಕುಡಿಯುವ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ, ಸ್ನೇಹಿತರಿಂದಲೇ ಯುವಕನ ಕೊಲೆ
ಆತನನ್ನು ಕ್ಯಾಂಪ್‌ಬೆಲ್ ಕೊಲ್ಲಿಯಿಂದ ಬಂಧಿಸಲಾಗಿದೆ, ಆಗಸ್ಟ್ 23 ರಂದು ಹರಿಯಾಣದ ತಂಡವೊಂದು ಪೋರ್ಟ್ ಬ್ಲೇರ್ ತಲುಪಿ ಕ್ಯಾಂಪ್ ಬೆಲ್ ಬೇ ಗೆ ತೆರಳಿತ್ತು, ಸ್ಥಳೀಯ ಪೊಲೀಸರ ಸಹಾಯ ಪಡೆದು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 25 ರಂದು, ಸೆಲ್ವನ್ ಅವರನ್ನು ಪೋರ್ಟ್ ಬ್ಲೇರ್‌ಗೆ ಕರೆತಂದು ಚಾಥಮ್ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಇರಿಸಲಾಗಿತ್ತು. ಭಾನುವಾರ ಆರೋಪಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಹರಿಯಾಣಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Sun, 27 August 23