ಹರ್ಯಾಣ ಹಿಂಸಾಚಾರ: ಗುರುಗ್ರಾಮದ ಎರಡು ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆತ

ಹರ್ಯಾಣದ ನುಹ್​ ಬಳಿಕ ಮೂರನೇ ದಿನ ಹಿಂಸಾಚಾರವು ಪಲ್ವಾಲ್ ಜಿಲ್ಲೆಯನ್ನೂ ತಲುಪಿದೆ. ಬೆಳಗ್ಗೆಯಿಂದಲೇ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡು ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.

ಹರ್ಯಾಣ ಹಿಂಸಾಚಾರ: ಗುರುಗ್ರಾಮದ ಎರಡು ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆತ
ಹರ್ಯಾಣ ಹಿಂಸಾಚಾರ
Image Credit source: India Today

Updated on: Aug 03, 2023 | 11:04 AM

ಹರ್ಯಾಣದ ನುಹ್​ ಬಳಿಕ ಮೂರನೇ ದಿನ ಹಿಂಸಾಚಾರ(Violence)ವು ಪಲ್ವಾಲ್ ಜಿಲ್ಲೆಯನ್ನೂ ತಲುಪಿದೆ. ಬೆಳಗ್ಗೆಯಿಂದಲೇ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡು ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಬುಧವಾರ ರಾತ್ರಿ 11.30ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಮಸೀದಿಗಳಲ್ಲಿ ಒಂದು ವಿಜಯ್ ಚೌಕ್ ಬಳಿ ಇದ್ದರೆ, ಇನ್ನೊಂದು ಪೊಲೀಸ್ ಠಾಣೆ ಬಳಿ ಇದೆ. ಎರಡೂ ಮಸೀದಿಗಳಿಗೆ ಸ್ವಲ್ಪ ಹಾನಿಯಾಗಿದೆ.

ಘಟನೆಗಳ ಬಗ್ಗೆ ಮಾಹಿತಿ ಬಂದ ಕೂಡಲೇ ಎರಡು ಮಸೀದಿಗಳಿಗೆ ಅಗ್ನಿಶಾಮಕ ದಳಗಳು ಧಾವಿಸಿ ಬೆಂಕಿಯನ್ನು ನಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಪಲ್ವಾಲ್ ಜಿಲ್ಲೆಯ ಮಿನಾರ್ ಗೇಟ್ ಮಾರುಕಟ್ಟೆಯಲ್ಲಿರುವ ಬಳೆ ಅಂಗಡಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಮತ್ತಷ್ಟು ಓದಿ: ಹರ್ಯಾಣ ಹಿಂಸಾಚಾರ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 116 ಜನರ ಬಂಧನ, ದೆಹಲಿಯಿಂದ ಯುಪಿವರೆಗೆ ಕಟ್ಟೆಚ್ಚರ

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಗುಂಪೊಂದು ಯತ್ನಿಸಿದ ನಂತರ ಸೋಮವಾರ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ದೃಷ್ಟಿಯಿಂದ ನುಹ್ ಮತ್ತು ಪಲ್ವಾಲ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ನುಹ್‌ನಲ್ಲಿ ಪ್ರಾರಂಭವಾದ ಕೋಮು ಹಿಂಸಾಚಾರವು ಗುರುಗ್ರಾಮವನ್ನು ತಲುಪಿತು.

ಹಿಂಸಾಚಾರದಲ್ಲಿ ಇದುವರೆಗೆ ಆರು ಜನರು ಸಾವನ್ನಪ್ಪಿದ್ದಾರೆ, 116 ಜನರನ್ನು ಬಂಧಿಸಲಾಗಿದೆ ಎಂದು ಹರ್ಯಾಣ ಸರ್ಕಾರ ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ