Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣ ಹಿಂಸಾಚಾರ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 116 ಜನರ ಬಂಧನ, ದೆಹಲಿಯಿಂದ ಯುಪಿವರೆಗೆ ಕಟ್ಟೆಚ್ಚರ

ಕಳೆದ ಎರಡು ದಿನಗಳ ಹಿಂದೆ ಹರ್ಯಾಣದ ನುಹ್​ನಲ್ಲಿ ಆರಂಭವಾದ ಹಿಂಸಾಚಾರವು ಇದೀಗ ಗುರುಗ್ರಾಮವನ್ನು ತಲುಪಿದೆ. ಮಂಗಳವಾರ ರಾತ್ರಿ ಅಲ್ಲಿಯ ಮಸೀದಿ ಮೇಲೆ ದಾಳಿ ನಡೆಸಿದ ಗುಂಪೊಂದು ಧರ್ಮಗುರುವನ್ನು ಹತ್ಯೆ ಮಾಡಿದೆ.

ಹರ್ಯಾಣ ಹಿಂಸಾಚಾರ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 116 ಜನರ ಬಂಧನ, ದೆಹಲಿಯಿಂದ ಯುಪಿವರೆಗೆ ಕಟ್ಟೆಚ್ಚರ
ಹರ್ಯಾಣ ಹಿಂಸಾಚಾರImage Credit source: Mint
Follow us
ನಯನಾ ರಾಜೀವ್
|

Updated on: Aug 02, 2023 | 11:57 AM

ಕಳೆದ ಎರಡು ದಿನಗಳ ಹಿಂದೆ ಹರ್ಯಾಣದ ನುಹ್​ನಲ್ಲಿ ಆರಂಭವಾದ ಹಿಂಸಾಚಾರವು ಇದೀಗ ಗುರುಗ್ರಾಮವನ್ನು ತಲುಪಿದೆ. ಮಂಗಳವಾರ ರಾತ್ರಿ ಅಲ್ಲಿಯ ಮಸೀದಿ ಮೇಲೆ ದಾಳಿ ನಡೆಸಿದ ಗುಂಪೊಂದು ಧರ್ಮಗುರುವನ್ನು ಹತ್ಯೆ ಮಾಡಿದೆ. ಅಷ್ಟೇ ಅಲ್ಲ ಅಂಗಡಿಗಳಿಗೂ ಬೆಂಕಿ ಹಚ್ಚಿದೆ. ಹಿಂಸಾಚಾರದಲ್ಲಿ ಇಬ್ಬರು ಹೋಮ್​ಗಾರ್ಡ್ಸ್​ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ನುಹ್​ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಅರೆಸೇನಾ ಪಡೆಗಳ 20 ಮಂದಿಯನ್ನು ನಿಯೋಜಿಸಲಾಗಿದೆ.

ನುಹ್, ಪಲ್ವಾಲ್, ಮಾನೇಸರ್, ಸೋಹಾನಾ ಹಾಗೂ ಪಟೌಡಿಯಲ್ಲಿ ಇಂಟರ್​ನೆಟ್ ಸ್ಥಗಿತಗೊಳಿಸಲಾಗಿದೆ. ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ. ಹಿಂಸಾಚಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಮತ್ತೊಂದೆಡೆ ಹರ್ಯಾಣದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಯುಪಿಯ 11 ಜಿಲ್ಲೆಗಳಲ್ಲಿ ಹೈ ಅಲರ್ಟ್​ ನೀಡಲಾಗಿದೆ. ರಾಜಸ್ಥಾನದ ಭರತ್​ಪುರದ ನಂತರ ಅಲ್ವಾರ್​ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಮತ್ತಷ್ಟು ಓದಿ: ಹರ್ಯಾಣದಲ್ಲಿ ಹಿಂಸಾಚಾರ; ಸಂಘರ್ಷಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಮೋನು ಮಾನೇಸರ್ ಯಾರು?

ಹಿಂಸಾಚಾರಕ್ಕೆ ಕಾರಣವೇನು? ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ ಮಂಡಲ ಜಲಾಭಿಷೇಕ ಯಾತ್ರೆಗೆ ಗುರುಗ್ರಾಮ-ಅಲ್ವಾರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಗುಂಪೊಂದು ತಡೆಯೊಡ್ಡಿತ್ತು.

ಗಲಭೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಮೇಲೆ ದಾಳಿ ನಡೆದಿತ್ತು. ಸಂಜೆ ವೇಳೆಗೆ ಹಿಂಸಾಚಾರವು ಗುರುಗ್ರಾಮ ಹಾಗೂ ಸೊಹ್ನಾ ಹೆದ್ದಾರಿಗೂ ವ್ಯಾಪಿಸಿತ್ತು. ಅನೇಕ ಕಾರುಗಳಿಗೆ ಬೆಂಕಿ ಹಚ್ಚಿ ದಾಂದಲೆ ನಡೆಸಿದರು, ಪೊಲೀಸರ ಮೇಲೆಯೂ ಕಲ್ಲು ಎಸೆತ ನಡೆದಿತ್ತು.

ಗುರುಗ್ರಾಮದಲ್ಲಿ ಬಾಟಲಿಗಳಲ್ಲಿ ಪೆಟ್ರೋಲ್ ನೀಡದಂತೆ ಸೂಚಿಸಲಾಗಿದೆ, ಗುರುಗ್ರಾಮದ ಗಡಿಯಲ್ಲಿರುವ ಸೊಹ್ನಾದಲ್ಲಿನ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ದೆಹಲಿಯ ಜನತೆಗೂ ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ