ದೆಹಲಿ: ಮಣಿಪುರದಲ್ಲಿ (Manipur) ದ್ವೇಷದ ಭಾಷಣಕ್ಕೆ (Hate Speech) ಕಡಿವಾಣ ಹಾಕಬೇಕು ಮತ್ತು ಎಲ್ಲಾ ಪಕ್ಷಗಳು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ. ಹಿಂಸಾಚಾರಕ್ಕೆ ಬಲಿಯಾದವರ ಮೃತದೇಹಗಳನ್ನು ಹಿಂದಿರುಗಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸ್ವಾತಂತ್ರ್ಯದ ನಂತರ ನಾಗರಿಕ ನಾಯಕತ್ವವನ್ನು ಹೊಂದಿರುವ ಸೇನೆ ಅಥವಾ ಅರೆಸೇನಾ ಪಡೆಗಳಿಗೆ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದು ಹೇಳಿದೆ. ಸಮತೋಲನದ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ದ್ವೇಷದ ಭಾಷಣದಲ್ಲಿ ಭಾಗವಹಿಸದಂತೆ ನಾವು ಎಲ್ಲಾ ಪಕ್ಷಗಳನ್ನು ವಿನಂತಿಸುತ್ತೇವೆ ಎಂದು ಮಂಗಳವಾರ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ತ್ರಿಸದಸ್ಯ ಪೀಠದ ನೇತೃತ್ವದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದರು. ನ್ಯಾಯಾಲಯವಾಗಿ ನಾವು ಸ್ಪಷ್ಟ ಸಮತೋಲನವನ್ನು ತೋರಿಸಬೇಕಾಗಿದೆ. ನಾವು ವಿವಾದದಿಂದ ದೂರವಿದ್ದೇವೆ. ಒಮ್ಮೆ ನಾವು ಚೌಕಟ್ಟಿಗೆ ಪ್ರವೇಶಿಸಿದರೆ, ನಾವು ನಮ್ಮ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುತ್ತೇವೆ. ನಾವು ಪ್ರತ್ಯೇಕವಾಗಿ ನಿಲ್ಲಬೇಕು ಎಂದು ಸಿಜೆಐ ಹೇಳಿದ್ದಾರೆ.
ಕುಕಿ ಸಮುದಾಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, ತೀವ್ರವಾದ ದ್ವೇಷದ ಭಾಷಣವನ್ನು ಕಡಿವಾಣ ಹಾಕಬೇಕು. ನಾನು ಭಾರತದಲ್ಲಿ ಇದನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಕುಕಿ ಮತ್ತು ಮೈತಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದಾಗಿನಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 150 ಜನರು ಸಾವಿಗೀಡಾಗಿದ್ದು ಅನೇಕರು ಗಾಯಗೊಂಡಿದ್ದಾರೆ. ರಾಜ್ಯ ಸರ್ಕಾರವು ಹಿಂಸಾಚಾರವನ್ನು ಪ್ರಾಯೋಜಿಸುತ್ತಿದೆ ಎಂದು ಕುಕಿಗಳು ಹೇಳಿಕೊಂಡಿದ್ದು, ಅದನ್ನು ಕಡಿಮೆ ಮಾಡಲು ಸಹಾಯ ಮಾಡಲು ನ್ಯಾಯಾಲಯದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ಹಿಂಸಾಚಾರವು ದ್ವೇಷದ ಭಾಷಣದಿಂದ ಉತ್ತೇಜಿತವಾಗಿದೆ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಜಾಸ್ತಿ ಇದೆ.
ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಲಹೆಗಳನ್ನು ಕೋರಿರುವ ನ್ಯಾಯಾಲಯ, ಕಳೆದ 72 ವರ್ಷಗಳಲ್ಲಿ ನಾವು ಭಾರತೀಯ ಸೇನೆಗೆ ಅಂತಹ ನಿರ್ದೇಶನಗಳನ್ನು ನೀಡಿಲ್ಲ. ಸೇನೆಯ ಮೇಲೆ ನಾಗರಿಕ ನಿಯಂತ್ರಣವು ಪ್ರಜಾಪ್ರಭುತ್ವದ ಶ್ರೇಷ್ಠ ಲಕ್ಷಣವಾಗಿದೆ, ನಾವು ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ.
ನ್ಯಾಯಾಲಯವು ಸೇನೆ ಮತ್ತು ಅರೆಸೇನಾ ಪಡೆಗಳಿಗೆ ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಅದೇ ಸಮಯದಲ್ಲಿ, ಮಣಿಪುರದ ನಾಗರಿಕರ ಜೀವಗಳನ್ನು ರಕ್ಷಿಸುವ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ನಾವು ಕೇಂದ್ರ ಸರ್ಕಾರ ಮತ್ತು ಮಣಿಪುರ ರಾಜ್ಯಕ್ಕೆ ಹೇಳುವುದಾಗಿ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂಕೋರ್ಟ್ನ್ನು ವೇದಿಕೆಯಾಗಿ ಬಳಸಬೇಡಿ: ಸಿಜೆಐ
ನ್ಯಾಯಾಲಯವು ವ್ಯಾಪಕ ಅಧಿಕಾರವನ್ನು ಹೊಂದಿದ್ದರೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಚುನಾಯಿತ ಸರ್ಕಾರದ ಕೆಲಸ ಎಂದು ನಿನ್ನೆ ಹೇಳಿತ್ತು. ಇದೊಂದು ಮಾನವೀಯ ಬಿಕ್ಕಟ್ಟು ಮತ್ತು ನಮ್ಮಲ್ಲಿ ಅಗಾಧವಾದ ಶಕ್ತಿ ಇದೆ. ಸುಪ್ರೀಂಕೋರ್ಟ್‌ನ ಕ್ರಮದ ಬಗ್ಗೆ ನಾವು ಜಾಗೃತರಾಗಿರಬೇಕು. ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಅದನ್ನು ಚುನಾಯಿತ ಸರ್ಕಾರ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ