ಮಾನವ ಕಳ್ಳಸಾಗಾಣಿಕೆಗೆ ಒಳಗಾದವರಿಗೆ ಗಡಿ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ನೆರವು
ದೇಶದ ಪ್ರತಿ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು (AHTU) ಸ್ಥಾಪಿಸಲು/ಬಲಪಡಿಸಲು ನಿರ್ಭಯಾ ನಿಧಿಯ ಅಡಿಯಲ್ಲಿ ಸರ್ಕಾರವು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಒದಗಿಸಿ
ಮಾನವ ಕಳ್ಳಸಾಗಾಣಿಕೆಗೆ (Human trafficking) ಒಳಗಾದ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರಿಗೆ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಗಳನ್ನು (Rehabilitation Homes) ಸ್ಥಾಪಿಸಲು ಗಡಿ ಪ್ರದೇಶಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು (financial assistance) ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಪುನರ್ವಸತಿ ಕೇಂದ್ರಗಳು ಆಶ್ರಯ, ಆಹಾರ, ಬಟ್ಟೆ, ಸಮಾಲೋಚನೆ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಮತ್ತು ಇತರ ದೈನಂದಿನ ಅವಶ್ಯಕತೆಗಳಂತಹ ಸೇವೆಗಳನ್ನು ಒದಗಿಸುತ್ತವೆ. ಮಿಷನ್ ವಾತ್ಸಲ್ಯ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಪ್ರಾಯೋಜಕತ್ವವನ್ನು ಒದಗಿಸಲು ಸಂತ್ರಸ್ತ ಬಾಲಕಿಯರನ್ನು CWC ಯ ಮುಂದೆ ಹಾಜರುಪಡಿಸಲಾಗುವುದು. ಅದರ ಪ್ರಕಾರ ಇದಕ್ಕೆ ಬೇಕಾದ ವ್ಯವಸ್ಥೆ ಮಾಡಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಲಾಗುವುದು.
ದೇಶದ ಪ್ರತಿ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು (AHTU) ಸ್ಥಾಪಿಸಲು/ಬಲಪಡಿಸಲು ನಿರ್ಭಯಾ ನಿಧಿಯ ಅಡಿಯಲ್ಲಿ ಸರ್ಕಾರವು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಒದಗಿಸಿದೆ. ಹೆಚ್ಚುವರಿಯಾಗಿ ಬಿಎಸ್ಎಫ್ ಮತ್ತು ಎಸ್ಎಸ್ ಬಿ ಯಂತಹ ಗಡಿ ಕಾವಲು ಪಡೆಗಳಲ್ಲಿ AHTU ಗಳಿಗೆ ಸಹ ಹಣವನ್ನು ಒದಗಿಸಲಾಗಿದೆ. ಈವರೆಗೆ 30 ಗಡಿ ಕಾವಲು ಪಡೆಗಳು ಸೇರಿದಂತೆ 788 AHTU ಗಳು ಕಾರ್ಯನಿರ್ವಹಿಸುತ್ತಿವೆ.
ಭಾರತವು ವ್ಯಕ್ತಿಗಳ ಕಳ್ಳಸಾಗಣೆಗೆ ಒಂದು ಮೂಲ ಮತ್ತು ಗಮ್ಯ ದೇಶವಾಗಿದೆ. ಮೂಲ ದೇಶಗಳು ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಆಗಿದ್ದು, ಭಾರತದಲ್ಲಿ ಉತ್ತಮ ಜೀವನ, ಉದ್ಯೋಗಗಳು ಮತ್ತು ಉತ್ತಮ ಜೀವನ ಸ್ಥಿತಿಯನ್ನು ಸಾಬೀತುಪಡಿಸುವ ನೆಪದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಕಳ್ಳಸಾಗಣೆ ಮಾಡಲಾಗುತ್ತಿದೆ. ಅವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಹುಡುಗಿಯರು ಅಥವಾ ಕಿರಿಯ ವಯಸ್ಸಿನ ಮಹಿಳೆಯರು. ಭಾರತಕ್ಕೆ ಬಂದ ನಂತರ ಅವರನ್ನು ಮಾರಾಟ ಮಾಡಿ ಲೈಂಗಿಕ ಕೆಲಸಕ್ಕೆ ಒತ್ತಾಯಿಸಲಾಗುತ್ತದೆ.
ಇದನ್ನೂ ಓದಿ: Viral Optical Illusion: ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡುಹಿಡಿಯಬಹುದೆ?
ಈ ಹುಡುಗಿಯರು ಹೆಚ್ಚಾಗಿ ಮುಂಬೈ ದೆಹಲಿ, ಹೈದರಾಬಾದ್, ಮುಂತಾದ ಪ್ರಮುಖ ನಗರಗಳನ್ನು ತಲುಪುತ್ತಾರೆ.ಅಲ್ಲಿಂದ ಅವರನ್ನು ಮುಖ್ಯವಾಗಿ ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದಲ್ಲಿ ದೇಶದಿಂದ ಹೊರಗೆ ಕರೆದೊಯ್ಯಲಾಗುತ್ತದೆ. ಈ ಕಾರಣದಿಂದಾಗಿ, ಈ ದೇಶಗಳಿಗೆ ಗಡಿಯಲ್ಲಿರುವ ರಾಜ್ಯಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಕಳ್ಳಸಾಗಣೆಯ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸಲು ಸಾಕಷ್ಟು ಸೌಲಭ್ಯಗಳನ್ನು ಹೊಂದಿರಬೇಕು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ