ಕೊರೊನಾ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್​ನಿಂದ ಕೆಳಗಿಳಿದು ಕಬ್ಬಿನಹಾಲು ಕುಡಿದ ಆರೋಗ್ಯ ಕಾರ್ಯಕರ್ತ; ಸ್ಥಳದಲ್ಲಿದ್ದವರಿಗೆಲ್ಲ ಆತಂಕ

|

Updated on: Apr 09, 2021 | 2:57 PM

ನೀವು ಕೊರೊನಾ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಆದರೂ ಮಾಸ್ಕ್ ಕೂಡ ಸರಿಯಾಗಿ ಧರಿಸಿಲ್ಲವಲ್ಲ ಎಂದು ವಿಡಿಯೋ ಮಾಡುತ್ತಿದ್ದವರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ಆರೋಗ್ಯ ಕಾರ್ಯಕರ್ತ, ಕೊರೊನಾ ಇರುವುದು ನನಗಲ್ಲ.. ಅವನಿಗೆ ಎಂದು ರೋಗಿಯ ಕಡೆ ಕೈ ತೋರಿಸಿದ್ದಾರೆ.

ಕೊರೊನಾ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್​ನಿಂದ ಕೆಳಗಿಳಿದು ಕಬ್ಬಿನಹಾಲು ಕುಡಿದ ಆರೋಗ್ಯ ಕಾರ್ಯಕರ್ತ; ಸ್ಥಳದಲ್ಲಿದ್ದವರಿಗೆಲ್ಲ ಆತಂಕ
ಪಿಪಿಇ ಕಿಟ್​ ಧರಿಸಿ, ಆಂಬುಲೆನ್ಸ್​ನಿಂದ ಇಳಿದು ಜ್ಯೂಸ್ ಕುಡಿದ ಆರೋಗ್ಯ ಕಾರ್ಯಕರ್ತ
Follow us on

ಭೋಪಾಲ್​: ಕೊವಿಡ್​ 19 ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್​​ನಿಂದ ಆರೋಗ್ಯ ಕಾರ್ಯಕರ್ತನೊಬ್ಬ ಕೆಳಗಿಳಿದು ಜ್ಯೂಸ್​ ಕುಡಿದ ವಿಡಿಯೋ ವೈರಲ್ ಆಗುತ್ತಿದೆ. ಇದು ಮಧ್ಯಪ್ರದೇಶದ್ದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಕೊವಿಡ್​-19 ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಆಂಬುಲೆನ್ಸ್ ಚಾಲಕ, ಅವರ ಜತೆಗಿರುವ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್​ ಹಾಕಿಕೊಳ್ಳಬೇಕು. ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದರಿಂದ ಅವರಿಗೆ ರೋಗಿಗಳಿ ಚಿಕಿತ್ಸೆ ನೀಡುವಾಗ, ಅವರೊಂದಿಗೆ ವ್ಯವಹರಿಸುವಾಗ ತುಂಬ ಜಾಗರೂಕತೆಯಿಂದ ಇರಬೇಕಾಗುತ್ತದೆ. ಅಂಥದ್ದರಲ್ಲಿ ಈ ಆರೋಗ್ಯ ಕಾರ್ಯಕರ್ತ ಪಿಪಿಇ ಕಿಟ್​ ಹಾಕಿಕೊಂಡು, ಆಂಬುಲೆನ್ಸ್​ನಿಂದ ಕೆಳಗಿಳಿದು ಜ್ಯೂಸ್​ ಕುಡಿದಿದ್ದಾರೆ.

ಇದು ಮಧ್ಯಪ್ರದೇಶದ ಶಾಹ್​ದೋಲ್ ಜಿಲ್ಲೆಯಲ್ಲಿ ಚಿತ್ರೀಕರಿಸಲಾದ ವಿಡಿಯೋ. ಕೊರೊನಾ ರೋಗಿಯನ್ನು ಕರೆದುಕೊಂಡು ಹೋಗಲಾಗುತ್ತಿದ್ದ ಆಂಬುಲೆನ್ಸ್​​ನಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಇದ್ದರು. ಅದರಲ್ಲಿ ಒಬ್ಬ ಕೆಳಗೆ ಇಳಿದು, ರಸ್ತೆ ಪಕ್ಕ ಇರುವ ಕಬ್ಬಿನ ಹಾಲಿನ ಅಂಗಡಿ ಬಳಿ ನಿಂತು ಕಬ್ಬಿನ ಹಾಲನ್ನು ನೀಡುವಂತೆ ಕೇಳಿದ್ದಾರೆ. ಅವರು ಪಿಪಿಇ ಕಿಟ್​ ಧರಿಸಿದ್ದರೂ, ಮಾಸ್ಕ್​ ಗಲ್ಲದ ಮೇಲೆ ಇತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯ ಎಂದು ನಿಯಮವೇ ಇದೆ. ಹಾಗಿರುವಾಗ ಆಂಬುಲೆನ್ಸ್​ನಲ್ಲಿ ಕೊರೊನಾ ರೋಗಿಯನ್ನು ಕರೆದುಕೊಂಡು ಹೋಗುವಾಗ, ಅದನ್ನು ನಿಲ್ಲಿಸಿ ಕೆಳಗಳಿದಿದ್ದೇ ನಿಯಮ ಉಲ್ಲಂಘನೆ. ಅದರಲ್ಲೂ ಮಾಸ್ಕ್​ ಧರಿಸಿದೆ ಇರುವುದು ಎಳ್ಳಷ್ಟೂ ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ನೀವು ಕೊರೊನಾ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಆದರೂ ಮಾಸ್ಕ್ ಕೂಡ ಸರಿಯಾಗಿ ಧರಿಸಿಲ್ಲವಲ್ಲ ಎಂದು ವಿಡಿಯೋ ಮಾಡುತ್ತಿದ್ದವರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ಆರೋಗ್ಯ ಕಾರ್ಯಕರ್ತ, ಕೊರೊನಾ ಇರುವುದು ನನಗಲ್ಲ.. ಅವನಿಗೆ. ನಾನು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ ಅಷ್ಟೇ. ನಾನು ಜ್ಯೂಸ್ ಕುಡಿಯಲು ಬಿಡಿ ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿಡಿಯೋ ಮಾಡುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಮತ್ತೆ ಮಾಸ್ಕ್​ ಧರಿಸಿದ್ದಾರೆ.

ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ದಿನವೊಂದಕ್ಕೆ ಲಕ್ಷದಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿ ಶೇ.84ರಷ್ಟು ಪಾಲು 10 ರಾಜ್ಯಗಳದ್ದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ 10 ರಾಷ್ಟ್ರಗಳ ಪೈಕಿ ಮಧ್ಯಪ್ರದೇಶವೂ ಒಂದು. ಇಂದು ಒಂದೇ ದಿನ ಭಾರತದಲ್ಲಿ 1,31,968 ಸೋಂಕಿನ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Karnataka Bus Strike Live: ಸಾರಿಗೆ ನೌಕರರ ಮುಷ್ಕರಕ್ಕೆ ಮೂರನೇ ದಿನ.. ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಸಿಬ್ಬಂದಿ

ಮಾರ್ಸ್​ ಪರ್ಸಿವರೆನ್ಸ್​ ರೋವರ್​ ಕಳುಹಿಸಿದೆ ನೋಡಿ.. ಚೊಚ್ಚಲ ಬಾಟ್​ ಸೆಲ್ಫಿ!

Published On - 2:56 pm, Fri, 9 April 21