Heat Stroke: ಒಡಿಶಾದಲ್ಲಿ ಹೀಟ್​ಸ್ಟ್ರೋಕ್​ಗೆ ಬಾವಲಿಗಳ ಸಾವು, ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸುವ ಸಣ್ಣ ಪ್ರಯತ್ನ

|

Updated on: Apr 18, 2023 | 8:00 AM

ಒಡಿಶಾದಲ್ಲಿ ಶಾಖದ ಅಲೆಯಿಂದಾಗಿ ಬಾವಲಿಗಳು ಸಾವನ್ನಪ್ಪುತ್ತಿವೆ, ಈಗಾಗಲೇ 8 ಬಾವಲಿಗಳು ಮೃತಪಟ್ಟಿದ್ದು, ಉಳಿದವುಗಳನ್ನು ಉಳಿಸಿಕೊಳ್ಳಲು ಸ್ಥಳೀಯರು ನೀರು ಸ್ಪ್ರೇ ಮಾಡುತ್ತಿದ್ದಾರೆ.

Heat Stroke: ಒಡಿಶಾದಲ್ಲಿ ಹೀಟ್​ಸ್ಟ್ರೋಕ್​ಗೆ ಬಾವಲಿಗಳ ಸಾವು, ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸುವ ಸಣ್ಣ ಪ್ರಯತ್ನ
ಬಾವಲಿ
Follow us on

ಒಡಿಶಾದಲ್ಲಿ ಬಿಸಿಲಿನ ತಾಪ(Heat Stroke)ದಿಂದಾಗಿ ಬಾವಲಿಗಳು ಸಾವನ್ನಪ್ಪುತ್ತಿವೆ, ಈಗಾಗಲೇ 8 ಬಾವಲಿಗಳು ಮೃತಪಟ್ಟಿದ್ದು, ಉಳಿದವುಗಳನ್ನು ಉಳಿಸಿಕೊಳ್ಳಲು ಸ್ಥಳೀಯರು ನೀರು ಸ್ಪ್ರೇ ಮಾಡುತ್ತಿದ್ದಾರೆ. ಶಾಖದ ಹೊಡೆತ ಅಥವಾ ಹೀಟ್ ಸ್ಟ್ರೋಕ್ ಸಾಮಾನ್ಯವಾಗಿ ನಿಮ್ಮ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಇದು ಸಂಭವಿಸುತ್ತದೆ. ಶಾಖದ ಹೊಡೆತದಲ್ಲಿ, ದೇಹದ ಉಷ್ಣತೆಯು ವೇಗವಾಗಿ ಹೆಚ್ಚಳ ಆಗುತ್ತದೆ. ಮತ್ತು ಶಾಖ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.

ಕಳೆದೆರಡು ದಿನಗಳಿಂದ ಬಿಸಿಲಿನ ತಾಪದಿಂದ ರಕ್ಷಿಸಲು ಸ್ಪ್ರಿಂಕ್ಲರ್ ಮೂಲಕ ಅವುಗಳ ಮೇಲೆ ನೀರು ಸಿಂಪಡಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಎಂಡಿ ಸಕೀರ್​ ಹೌಸನ್ ಹೇಳಿದ್ದಾರೆ. ಬಾವಲಿಗಳು ರಾತ್ರಿ ಹಾರಾಟ ನಡೆಸುತ್ತವೆ, ಹಗಲಿನಲ್ಲಿ ಮರಗಳಲ್ಲಿ ನೇತಾಡುತ್ತಿರುತ್ತವೆ, ಶಾಖಕ್ಕೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಸಾವನ್ನಪ್ಪುತ್ತವೆ.
ಬಾವಲಿಗಳು ನಿಶಾಚರವಾದ್ದರಿಂದ ಹಗಲಿನಲ್ಲಿ ಮರಗಳ ಮೇಲೆ ನೇತಾಡುತ್ತವೆ. “ತೀವ್ರವಾದ ಶಾಖದ ಅಲೆಗಳಿಗೆ ಒಡ್ಡಿಕೊಂಡಾಗ ಅವು ಕುಸಿದು ಸಾಯುತ್ತವೆ. ಹಾಗಾಗಿ ಹವಾಮಾನ ಸುಧಾರಿಸುವವರೆಗೆ ನಾವು ನೀರು ಚಿಮುಕಿಸುವುದನ್ನು ಮುಂದುವರಿಸುತ್ತೇವೆ.

ಮತ್ತಷ್ಟು ಓದಿ:ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಸಮಾರಂಭ ನೋಡಲು ಬಂದಿದ್ದ 11 ಮಂದಿ ಬಿಸಿಲಿನ ತಾಪಕ್ಕೆ ಬಲಿ

ಕಬಟಬಂಧ ಗ್ರಾಮವು ಬಾವಲಿಗಳು ಮತ್ತು ವಲಸೆ ಹಕ್ಕಿಗಳಿಗೆ ಸುರಕ್ಷಿತ ತಾಣವೆಂದು ಪರಿಗಣಿಸಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ, ಸ್ಥಳೀಯ ಜನರು ಕಳೆದ ಎರಡು ದಶಕಗಳಿಂದ ತಮ್ಮ ಆವಾಸಸ್ಥಾನಗಳನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. “ನಾವು ಬಾವಲಿಗಳನ್ನು ನಮ್ಮ ಹಳ್ಳಿಗಳಿಗೆ ಪವಿತ್ರವೆಂದು ಪರಿಗಣಿಸಿ ಅವುಗಳನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ.

ಇದಲ್ಲದೆ ಬ್ರಹ್ಮಣಿ ನದಿಯ ದಡದಲ್ಲಿರುವ ಮರಗಳ ಮೇಲೆ ಸುಮಾರು 5,000 ಪಕ್ಷಿಗಳು ವಾಸಿಸುತ್ತಿವೆ. ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳನ್ನು ಸಂರಕ್ಷಿಸುವುದನ್ನು ನಾವು ಸಾಮೂಹಿಕ ಜವಾಬ್ದಾರಿಯನ್ನಾಗಿ ಮಾಡಿದ್ದೇವೆ ಎಂದು ಸ್ಥಳೀಯರಾದ ರವೀಂದ್ರ ಸಾಹು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:59 am, Tue, 18 April 23