AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heat Wave: ತಾಪಮಾನ ಹೆಚ್ಚಳದಿಂದಾಗಿ ತ್ರಿಪುರದ ಶಾಲೆಗಳಿಗೆ ಏಪ್ರಿಲ್ 23ರವರೆಗೆ ರಜೆ ಘೋಷಣೆ

ಈಶಾನ್ಯ ರಾಜ್ಯ ತ್ರಿಪುರದಲ್ಲಿ ಬಿಸಿಗಾಳಿ ಹೆಚ್ಚುತ್ತಿದೆ. ಬಿಸಿಲಿನ ಝಳದಿಂದಾಗಿ ದೈನಂದಿನ ಜೀವನಕ್ಕೆ ತೊಂದರೆಯಾಗತೊಡಗಿದೆ. ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತಾಪ ಎದುರಿಸಬೇಕಾಗಿದೆ

Heat Wave: ತಾಪಮಾನ ಹೆಚ್ಚಳದಿಂದಾಗಿ ತ್ರಿಪುರದ ಶಾಲೆಗಳಿಗೆ ಏಪ್ರಿಲ್ 23ರವರೆಗೆ ರಜೆ ಘೋಷಣೆ
ವಿದ್ಯಾರ್ಥಿಗಳುImage Credit source: NDTV
ನಯನಾ ರಾಜೀವ್
|

Updated on: Apr 18, 2023 | 8:11 AM

Share

ಈಶಾನ್ಯ ರಾಜ್ಯ ತ್ರಿಪುರದಲ್ಲಿ ಬಿಸಿಗಾಳಿ ಹೆಚ್ಚುತ್ತಿದೆ. ಬಿಸಿಲಿನ ಝಳದಿಂದಾಗಿ ದೈನಂದಿನ ಜೀವನಕ್ಕೆ ತೊಂದರೆಯಾಗತೊಡಗಿದೆ. ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತಾಪ ಎದುರಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ಬಿಸಿಗಾಳಿ ಪರಿಸ್ಥಿತಿಯಿಂದಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಏಪ್ರಿಲ್ 18 ರಿಂದ 23 ರವರೆಗೆ ಮುಚ್ಚಲಾಗುವುದು ಎಂದು ಸಿಎಂ ಸಹಾ ಹೇಳಿದ್ದಾರೆ. ಬಿಸಿಲಿನ ತಾಪವು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ, ಎಲ್ಲಾ ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಖಾಸಗಿ ಶಾಲೆಗಳಿಗೂ ಇದೇ ರೀತಿ ಮಾಡುವಂತೆ ಅವರು ಮನವಿ ಮಾಡಿದರು.

ಮತ್ತಷ್ಟು ಓದಿ:Heat Stroke: ಒಡಿಶಾದಲ್ಲಿ ಹೀಟ್​ಸ್ಟ್ರೋಕ್​ಗೆ ಬಾವಲಿಗಳ ಸಾವು, ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸುವ ಸಣ್ಣ ಪ್ರಯತ್ನ

ತ್ರಿಪುರಾದಲ್ಲಿ 4,226 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು 7.02 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿವೆ. ಆದರೆ, ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ತ್ರಿಪುರಾದಲ್ಲಿ ಕಳೆದ ಮೂರು ದಿನಗಳಿಂದ ಪಾದರಸವು ಸುಮಾರು 37 ಡಿಗ್ರಿ ಸೆಲ್ಸಿಯಸ್ ಇತ್ತು. ಏಪ್ರಿಲ್ 20ರವರೆಗೆ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದಲ್ಲಿ ಬಿಸಿಲಿನ ತಾಪ(Heat Stroke)ದಿಂದಾಗಿ ಬಾವಲಿಗಳು ಸಾವನ್ನಪ್ಪುತ್ತಿವೆ, ಈಗಾಗಲೇ 8 ಬಾವಲಿಗಳು ಮೃತಪಟ್ಟಿದ್ದು, ಉಳಿದವುಗಳನ್ನು ಉಳಿಸಿಕೊಳ್ಳಲು ಸ್ಥಳೀಯರು ನೀರು ಸ್ಪ್ರೇ ಮಾಡುತ್ತಿದ್ದಾರೆ. ಶಾಖದ ಹೊಡೆತ ಅಥವಾ ಹೀಟ್ ಸ್ಟ್ರೋಕ್ ಸಾಮಾನ್ಯವಾಗಿ ನಿಮ್ಮ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಇದು ಸಂಭವಿಸುತ್ತದೆ. ಶಾಖದ ಹೊಡೆತದಲ್ಲಿ, ದೇಹದ ಉಷ್ಣತೆಯು ವೇಗವಾಗಿ ಹೆಚ್ಚಳ ಆಗುತ್ತದೆ. ಮತ್ತು ಶಾಖ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ