ಅಹ್ಮದ್ಬಾದ್: ಗುಜರಾತ್ನ ಅನೇಕ ಪ್ರದೇಶಗಳಲ್ಲಿ ವಿಪರೀತ ಮಳೆ (Gujarat Rainfall)ಯಾಗುತ್ತಿದ್ದು, ಸದ್ಯ 56 ರಸ್ತೆಗಳು ಬ್ಲಾಕ್ ಆಗಿವೆ. ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ. ನಾಳೆಯವರೆಗೂ ಇದೇ ಪ್ರಮಾಣದ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹಾಗೇ ಜು.29ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಇಂದು ಮುಂಜಾನೆ 6ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಸೌರಾಷ್ಟ್ರ ಸೇರಿ ಗುಜರಾತ್ನ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ. ಅದರಲ್ಲೂ ಸೌರಾಷ್ಟ್ರದ ರಾಜಕೋಟಾ ಜಿಲ್ಲೆಯ ಲೊಧಿಕಾ ತಾಲೂಕಿನಲ್ಲಿ 24 ಗಂಟೆಯಲ್ಲಿ ಅತಿಹೆಚ್ಚು ಅಂದರೆ 198 ಮಿಮೀ ಮಳೆಯಾಗಿದೆ. ಹಾಗೇ, ಛೋಟೌಡ್ಪುರ್ನಲ್ಲಿ 190 ಎಂಎಂ, ಕ್ವಾಂತ್ನಲ್ಲಿ 182 ಮಿಮೀ ಮಳೆಬಿದ್ದಿದೆ. ಇದರ ಹೊರಾತಿಗೆ ಮಹೀದಾಗರ್, ಖೇದಾ, ವಡೋದರಾ, ಪಂಚಮಹಲ್, ಅರ್ವಲ್ಲಿ, ಮೊರ್ಬಿ ಸೇರಿ ಹಲವೆಡೆ 100 ಮಿಮೀ ಗೂ ಅಧಿಕ ಪ್ರಮಾಣದಲ್ಲಿ ಮಳೆ ಯಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಕಾಣೆಯಾದ ಶುಭಾ ಪೂಂಜಾ; ಸ್ಪರ್ಧಿಗಳಿಗೆ ಮಿಡ್ವೀಕ್ ಟ್ವಿಸ್ಟ್
ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್
Heavy Rainfall in Gujarat 56 roads are blocked