AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನಲ್ಲಿ ಮಾನ್ಸೂನ್ ಆರ್ಭಟಕ್ಕೆ 14 ಮಂದಿ ಬಲಿ; ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧ

ತಮಿಳುನಾಡಿನಾದ್ಯಂತ ಈಶಾನ್ಯ ಮಾನ್ಸೂನ್ ಆರ್ಭಟ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಲವು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಿದ್ಧ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶವನ್ನು ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಮಳೆಗಾಲ ಆರಂಭವಾದಾಗಿನಿಂದ ಸಿಡಿಲು ಬಡಿದು ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಸರ್ಕಾರ ಖಚಿತಪಡಿಸಿದೆ.

ತಮಿಳುನಾಡಿನಲ್ಲಿ ಮಾನ್ಸೂನ್ ಆರ್ಭಟಕ್ಕೆ 14 ಮಂದಿ ಬಲಿ; ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧ
ತಮಿಳುನಾಡಿನಲ್ಲಿ ಭಾರೀ ಮಳೆಯಿಂದ ಭೂಕುಸಿತImage Credit source: PTI
ಸುಷ್ಮಾ ಚಕ್ರೆ
|

Updated on: Oct 26, 2026 | 7:52 PM

Share

ಚೆನ್ನೈ, ಅಕ್ಟೋಬರ್ 26: ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಆರಂಭವಾದಾಗಿನಿಂದಲೂ ಭಾರಿ ಮಳೆ ಮತ್ತು ಸಿಡಿಲಿನ ಆರ್ಭಟ ಮುಂದುವರಿದಿದೆ. ಸಿಡಿಲು ಬಡಿದು ರಾಜ್ಯದ ವಿವಿಧ ಭಾಗಗಳಲ್ಲಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶವನ್ನು ಸ್ಥಳೀಯ ಆಡಳಿತ ತಾತ್ಕಾಲಿಕವಾಗಿ ನಿಷೇಧಿಸಿದೆ.

ಸಿಡಿಲು ಬಡಿದು 14 ಮಂದಿ ಮೃತಪಟ್ಟಿರುವುದನ್ನು ತಮಿಳುನಾಡಿನ ಕಂದಾಯ ಸಚಿವ ಕೆ.ಎ. ಸೆಂಗೋಟ್ಟೈಯನ್ ದೃಢಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ದಿನವೊಂದರಲ್ಲೇ 35 ಮಂದಿ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸಚಿವರು ತಳ್ಳಿಹಾಕಿದ್ದು, ಇತರ ಸಾವುಗಳ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಂಧ್ರ, ಒಡಿಶಾದಲ್ಲಿ ಅ. 28ಕ್ಕೆ ಚಂಡಮಾರುತ ಅಬ್ಬರ; ಕರ್ನಾಟಕದಲ್ಲೂ ಬಿರುಗಾಳಿ ಸಹಿತ ಮಳೆಯ ಅಲರ್ಟ್

ನೀಲಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 62 ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಅಧಿಕಾರಿಗಳು ತೆರವುಗೊಳಿಸಿದ್ದಾರೆ. ರಸ್ತೆಗೆ ಬಂಡೆಕಲ್ಲು ಬಿದ್ದು ಬಸ್ ಚಾಲಕರೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬಕ್ಕೂ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಮಳೆ ಹಾಗೂ ಭೂಕುಸಿತದ ಭೀತಿಯ ಹಿನ್ನೆಲೆಯಲ್ಲಿ ನೀಲಗಿರಿ (ಊಟಿ), ಕೊಡೈಕೆನಾಲ್ ಮತ್ತು ಯೆರ್ಕಾಡ್ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ. ಸ್ಥಳೀಯ ನಿವಾಸಿಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಜಿಲ್ಲಾಧಿಕಾರಿಗಳ ಪಾಸ್ ಪಡೆದು ಪ್ರಯಾಣಿಸಲು ಅನುಮತಿಸಲಾಗಿದೆ.

ಇದನ್ನೂ ಓದಿ: Karnataka Weather Forecast: ತಗ್ಗಿದ ಮಳೆ ಅಬ್ಬರ, ಒಣ ಹವೆ-ಚಳಿಯ ಮುನ್ಸೂಚನೆ

ತಮಿಳುನಾಡಿನ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಮುಂಬರುವ 48 ಗಂಟೆಗಳ ಕಾಲ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ನದಿ ತೀರ ಹಾಗೂ ತಗ್ಗು ಪ್ರದೇಶಗಳ ಜನರು ಜಾಗರೂಕರಾಗಿರಲು ಮತ್ತು ಅಗತ್ಯವಿಲ್ಲದೆ ಮನೆಯಿಂದ ಹೊರಬಾರದಂತೆ ಸರ್ಕಾರ ಮನವಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ