ದೆಹಲಿ: ರಾಜಧಾನಿಯಲ್ಲಿ ಆರ್ಭಟಿಸುತ್ತಿರುವ ಸೋಂಕಿನ ಮಧ್ಯೆ ಇದೀಗ ದೆಹಲಿಯ ಸ್ಥಳೀಯರಿಗೆ ಮತ್ತೊಂದು ತಲೆ ನೋವು ಬಂದೊದಗಿದೆ; ಮಳೆ.
ಹೌದು, ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ, ಇಂದು ರಾಜಕಾಲುವೆಯೊಂದು ಉಕ್ಕಿ ಹರಿದ ಪರಿಣಾಮ ಅದರ ಪಕ್ಕದಲ್ಲೇ ಇದ್ದ ಮನೆಯೊಂದು ಕುಸಿದಿರುವ ಘಟನೆ ಅಣ್ಣಾನಗರದ ಕೊಳಗೇರಿ ಪ್ರದೇಶದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಯಾವುದೇ ಸಾವು ಸಂಭಿವಿಸಿಲ್ಲ. ಇನ್ನು ಸ್ಥಳೀಯರು ಘಟನೆಯ ವಿಡಿಯೋ ಮಾಡಿದ್ದು ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
#WATCH Delhi: A house collapsed in the slum area of Anna Nagar near ITO today following heavy rainfall. No one was present in the house at the time of the incident. Centralised Accident and Trauma Services (CATS) and fire engines are present at the spot. pic.twitter.com/IwS5X08nps
— ANI (@ANI) July 19, 2020
ರಾಜಕಾಲುವೆಯ ಪಕ್ಕ ವಾಹನ ಪಾರ್ಕಿಂಗ್ಗಾಗಿ ಕಟ್ಟಡ ನಿರ್ಮಿಸಲು ದೊಡ್ಡ ಹಳ್ಳವನ್ನು ತೋಡಿಲಾಗಿತ್ತು. ಈ ವೇಳೆ ರಾಜಕಾಲುವೆ ಉಕ್ಕಿ ಹರಿದು ಅದರಲ್ಲಿ ನೀರು ತುಂಬಿಕೊಂಡಿತು. ಹಾಗಾಗಿ, ಪಕ್ಕದಲ್ಲೇ ಇದ್ದ ಮನೆಯ ಅಡಿಪಾಯ ಕೊಚ್ಚಿಹೋಯ್ತು ಎಂದು ತಿಳಿದುಬಂದಿದೆ.
ಇನ್ನು ಸುದ್ದಿ ತಿಳಿದು ಅತ್ತ ಧಾವಿಸಿ ಬಂದ ಮನೆಯೊಡತಿ ಪುಷ್ಪಾಗೆ ತನ್ನ ಕಣ್ಣುಗಳನ್ನ ನಂಬೋಕೆ ಆಗಲಿಲ್ಲ. ಜೀವ ಉಳಿದಿದ್ದರೂ ಸೂರು ಕಳೆದುಕೊಂಡ ನೋವು ಅವರ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರಿನ ಮುಖಾಂತರ ಹೊರಬಂತು. ನನ್ನ ಮನೆ ಇಲ್ಲಿ ಇರಲೇ ಇಲ್ಲವೇನೋ ಎಂಬಂತೆ ಮಾಯವಾಗಿ ಹೋಗಿದೆ ಎಂದು ತಮ್ಮ ದುಃಖವನ್ನ ತೋಡಿಕೊಂಡರು.
Published On - 5:20 pm, Sun, 19 July 20