ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ ಹಿಡಿದ ಟ್ರಕ್‌ನಲ್ಲಿ ಏನಿತ್ತು ಗೊತ್ತಾ ?
ತಿರುವನಂತಪುರಮ್: ಕಳೆದ ವರ್ಷ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಭಾರೀ ಗಾತ್ರದ ಟ್ರಕ್ ಕೊನೆಗೂ ತನ್ನ ನಿಗದಿತ ಗುರಿ ಅಂದ್ರೆ ಸ್ಥಳ ತಲುಪಿದೆ. ಕೇರಳದ ತಿರುವನಂತಪುರಮ್‌ಗೆ ಇಂದು ಆಗಮಿಸಿದ ಟ್ರಕ್ ಇದಕ್ಕಾಗಿ ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ ಹನ್ನೊಂದು ದಿನಗಳು. ಹೌದು ಈ ಟ್ರಕ್ ಕೇರಳದ ತಿರುವನಂತ್ರಪುರಮ್ ಬಳಿ ಇರುವ ಭಾರತದ ವಿಕ್ರಮ್ ಸಾರಾಭಾಯಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಿದ್ದ ಸುಮಾರು 70 ಟನ್ ಭಾರದ ಏರೋಸ್ಪೇಸ್ ಹಾರಿಜಂಟಲ್ ಆಟೋಕ್ಲೇವ್ ಅಂದ್ರೆ ಬಾಹ್ಯಾಕಾಶ […]
ತಿರುವನಂತಪುರಮ್: ಕಳೆದ ವರ್ಷ ಜುಲೈ 8ರಂದು ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಭಾರೀ ಗಾತ್ರದ ಟ್ರಕ್ ಕೊನೆಗೂ ತನ್ನ ನಿಗದಿತ ಗುರಿ ಅಂದ್ರೆ ಸ್ಥಳ ತಲುಪಿದೆ. ಕೇರಳದ ತಿರುವನಂತಪುರಮ್‌ಗೆ ಇಂದು ಆಗಮಿಸಿದ ಟ್ರಕ್ ಇದಕ್ಕಾಗಿ ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ ಹನ್ನೊಂದು ದಿನಗಳು.
ಹೌದು ಈ ಟ್ರಕ್ ಕೇರಳದ ತಿರುವನಂತ್ರಪುರಮ್ ಬಳಿ ಇರುವ ಭಾರತದ ವಿಕ್ರಮ್ ಸಾರಾಭಾಯಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಿದ್ದ ಸುಮಾರು 70 ಟನ್ ಭಾರದ ಏರೋಸ್ಪೇಸ್ ಹಾರಿಜಂಟಲ್ ಆಟೋಕ್ಲೇವ್ ಅಂದ್ರೆ ಬಾಹ್ಯಾಕಾಶ ಉಡ್ಡಯನಕ್ಕೆ ಬೇಕಾದ ಸಾಮಗ್ರಿಯನ್ನು ಹೊತ್ತು ಸಾಗಿಸುತ್ತಿದೆ. ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದ ಈ ಟ್ರಕ್ ದಿನಕ್ಕೇ ಐದು ಕಿ.ಮೀ. ವೇಗದಲ್ಲಿ ಸಾಗಿ ಬಂದಿದೆ.
ಭಾರೀ ಮಹತ್ವದ ಸಾಮಗ್ರಿಗಳಿದ್ದ ಈ ಟ್ರಕ್ ಜೊತೆಗೆ 32 ಜನರು ಸಿಬ್ಬಂದಿ ಕೂಡಾ ಕಾವಾಲಾಗಿ ಜೊತೆ ಜೊತೆಗೆ ಪ್ರಯಾಣಿಸಿದ್ದಾರೆ. ಇಷ್ಟೊಂದು ಗಾತ್ರ ಹಾಗೂ ಭಾರವನ್ನು ಸಾಗಿಸಿದ ಈ ಟ್ರಕ್‌ಗೆ ಮುಂದೆ 32, ಹಿಂದೆ 32 ಮತ್ತು ನಡುವೆ 10 ಗಾಲಿಗಳಿರೋದು ವಿಶೇಷ.
Kerala: A truck, carrying an aerospace horizontal autoclave for delivery to Vikram Sarabhai Space Centre in Thiruvananthapuram, reached the city today a year after starting from Maharashtra. Staff say, "Started in July 2019 & travelled across 4 states. Hope to deliver this today" pic.twitter.com/XNaCjXa1C3
— ANI (@ANI) July 19, 2020
Published On - 7:42 pm, Sun, 19 July 20