AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ಶುರುವಾಗಿರುವ ವರುಣನ ಅಬ್ಬರಕ್ಕೆ ದೆಹಲಿ ತತ್ತರ, ನಾಲ್ವರು ಬಲಿ

[lazy-load-videos-and-sticky-control id=”AbvGclpSb60″] ದೆಹಲಿ: ಕೊರೊನಾ ಕಂಪನದಿಂದ ಇನ್ನೇನು ಹೊರಬರಬೇಕು ಅನ್ನುವಷ್ಟರಲ್ಲೇ ರಾಷ್ಟ್ರ ರಾಜಧಾನಿ ದೆಹಲಿಗೆ ಮತ್ತೊಂದು ಶಾಕ್ ಸಿಕ್ಕಿದೆ. ವರುಣನ ಅಬ್ಬರಕ್ಕೆ ತತ್ತರಿಸಿರೋ ದೆಹಲಿಯಲ್ಲಿ, ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಕಂಡ ಕಂಡ ಕಡೆ ನೀರು ನುಗ್ಗುತ್ತಿರುವ ಕಾರಣ ಜನ ಭಯಗೊಂಡಿದ್ದಾರೆ. ಯಾವಾಗ ಏನಾಗುತ್ತೋ ಅಂತಾ ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಬ್ರಿಡ್ಜ್​ನ ಅಂಡರ್​ಪಾಸ್ ಸಮುದ್ರದಂತಾಗಿದೆ. ಅಧಿಕಪ್ರಸಂಗ ಮಾಡಲು ಹೋಗಿ ಲಾರಿ ಸಮೇತ ನೀರಿನಲ್ಲಿ ಸಿಲುಕಿ ಚಾಲಕನ ಪರದಾಡುತ್ತಿದ್ದಾನೆ. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ. ಇದು ದೆಹಲಿಯಲ್ಲಿ […]

ದಿಢೀರ್ ಶುರುವಾಗಿರುವ ವರುಣನ ಅಬ್ಬರಕ್ಕೆ ದೆಹಲಿ ತತ್ತರ, ನಾಲ್ವರು ಬಲಿ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Jul 20, 2020 | 1:20 PM

Share

[lazy-load-videos-and-sticky-control id=”AbvGclpSb60″]

ದೆಹಲಿ: ಕೊರೊನಾ ಕಂಪನದಿಂದ ಇನ್ನೇನು ಹೊರಬರಬೇಕು ಅನ್ನುವಷ್ಟರಲ್ಲೇ ರಾಷ್ಟ್ರ ರಾಜಧಾನಿ ದೆಹಲಿಗೆ ಮತ್ತೊಂದು ಶಾಕ್ ಸಿಕ್ಕಿದೆ. ವರುಣನ ಅಬ್ಬರಕ್ಕೆ ತತ್ತರಿಸಿರೋ ದೆಹಲಿಯಲ್ಲಿ, ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಕಂಡ ಕಂಡ ಕಡೆ ನೀರು ನುಗ್ಗುತ್ತಿರುವ ಕಾರಣ ಜನ ಭಯಗೊಂಡಿದ್ದಾರೆ. ಯಾವಾಗ ಏನಾಗುತ್ತೋ ಅಂತಾ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.

ಬ್ರಿಡ್ಜ್​ನ ಅಂಡರ್​ಪಾಸ್ ಸಮುದ್ರದಂತಾಗಿದೆ. ಅಧಿಕಪ್ರಸಂಗ ಮಾಡಲು ಹೋಗಿ ಲಾರಿ ಸಮೇತ ನೀರಿನಲ್ಲಿ ಸಿಲುಕಿ ಚಾಲಕನ ಪರದಾಡುತ್ತಿದ್ದಾನೆ. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ. ಇದು ದೆಹಲಿಯಲ್ಲಿ ಸುರಿತೀರೋ ಭಾರಿ ಮಳೆ ಸೃಷ್ಟಿಸಿರುವ ಅವಾಂತರ.

ಕೊರೊನಾ ಜೊತೆ ವರುಣನ ಏಟಿಗೆ ನಲುಗಿದ ರಾಷ್ಟ್ರ ರಾಜಧಾನಿ ರಾಷ್ಟ್ರರಾಜಧಾನಿ ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ಕೆಲವು ತಿಂಗಳಿಂದ ದೆಹಲಿಯಲ್ಲಿ ಇದೇ ರೀತಿ ವಾತಾವರಣ ನಿರ್ಮಾಣವಾಗಿದೆ. ಮೊದಲಿಗೆ ಕೊರೊನಾ ಸೋಂಕು ವಕ್ಕರಿಸಿ ದೆಹಲಿಯನ್ನ ನಡುಗಿಸಿತ್ತು. ಇದಾದ ಬಳಿಕ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇದರ ಪರಿಣಾಮ ಇಡೀ ದೆಹಲಿ ಮುಳುಗಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಒಂದೇ ದಿನ ಮಳೆ ಕೊಟ್ಟ ಏಟಿಗೆ ಅರ್ಧ ದೆಹಲಿ ಕಣ್ಮರೆಯಾಗಿ ಹೋಗಿದೆ.

ಬ್ರಿಡ್ಜ್ ಕೆಳಗೆ ನೀರಿನಲ್ಲಿ ಸಿಲುಕಿದ ವಾಹನಗಳು! ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಇದರಿಂದ ಬ್ರಿಡ್ಜ್​ಗಳ ಕೆಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ. ಈ ಹೊತ್ತಲ್ಲೇ ಕೆಲ ಚಾಲಕರು ಸಾಹಸಮಾಡಿ ನೀರಲ್ಲಿ ವಾಹನ ಚಲಾಯಿಸಲು ಯತ್ನಿಸಿದ್ದಾರೆ. ಆದರೆ ಭಾರಿ ಪ್ರಮಾಣದ ನೀರನ್ನು ದಾಟಲಾಗದೆ ಅಲ್ಲೇ ಸಿಲುಕಿಕೊಂಡಿದ್ದರು. ಹೀಗೆ ನೀರಲ್ಲಿ ಸಿಲುಕಿ ಪರದಾಡುತ್ತಿದ್ದ ಚಾಲಕರಿಗೆ ಸ್ಥಳೀಯರು ನೆರವಾದರೂ ವಾಹನಗಳನ್ನ ಮಳೆ ಹಾಗೂ ಕೊಳಚೆ ಮಿಶ್ರಿತ ನೀರಿನಿಂದ ಹೊರಗೆ ತರೋದಕ್ಕೆ ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕಾಯಿತು.

ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಮನೆ ಇನ್ನು ಮಳೆಯ ಭೀಕರತೆ ಎಷ್ಟಿತ್ತು ಅನ್ನೋದಕ್ಕೆ ಈ ದೃಶ್ಯವೇ ಸಾಕ್ಷಿ. ದೆಹಲಿಯ ಅಣ್ಣಾ ನಗರ ಕೊಳಗೇರಿಯಲ್ಲಿ ಈ ಭೀಕರ ಘಟನೆ ನಡೆದಿದೆ. ದೊಡ್ಡ ಮೋರಿಯಲ್ಲಿ ಭಾರಿ ರಭಸದಿಂದ ಹರಿಯುತ್ತಿದ್ದ ಮಳೆಯ ನೀರು, ದಡದಲ್ಲಿದ್ದ ಮನೆಯನ್ನ ನೆಲಕ್ಕೆ ಉರುಳಿಸಿದೆ.

ಇಷ್ಟೇ ಅಲ್ಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇದೇ ರೀತಿ ಮಳೆಯಾಗುತ್ತಿದೆ. ಅದರಲ್ಲೂ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇನ್ನೂ ಕೆಲದಿನಗಳ ಕಾಲ ದೆಹಲಿಯಲ್ಲಿ ಇದೇ ರೀತಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಸೂಕ್ಷ್ಮಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

Published On - 6:55 am, Mon, 20 July 20