ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಹಿಮಮಳೆ ಆರಂಭವಾಗಿದೆ. ನಿರಂತರವಾಗಿ ಸುರಿಯುತ್ತಿರೋ ಹಿಮಮಳೆಗೆ ಜನರ ಓಡಾಟಕ್ಕೆ ಅಡ್ಡಿಯಾಗಿದ್ರೆ, ವಾಹನ ಸವಾರರು ಕೂಡ ಪರದಾಡ್ತಿದ್ದಾರೆ.
ಹ್ಯಾಪಿ ಫ್ರಿಡ್ಜ್ ಯೋಜನೆ:
ನಕ್ಸಲ್ ಪೀಡಿತ ಪ್ರದೇಶ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹ್ಯಾಪಿ ಫ್ರಿಡ್ಜ್ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಹ್ಯಾಪಿ ಫ್ರಿಡ್ಜ್ ಇರಿಲಾಗಿದ್ದು, ರೋಗಿಗಳು ತಮಗಿಷ್ಟವಾದ ಹಣ್ಣು, ಹಂಪಲುಗಳನ್ನ ಕೊಂಡೊಯ್ಯಬಹುದಾಗಿದೆ.
ಅಕ್ರಮ ಕಟ್ಟಡ ತೆರವು:
ಅಕ್ರಮವಾಗಿ ನಿರ್ಮಿಸಿದ್ದ ಹೋಟೆಲ್ ಬಳಿಯ ಕಟ್ಟಡವನ್ನ ಗುಜರಾತ್ನ ಭೋಪಾಲ್ನಲ್ಲಿ ನೆಲಸಮ ಮಾಡಲಾಗಿದೆ. ಭೋಪಾಲ್ ಮುನ್ಸಿಪಾಲ್ ಕಾರ್ಪೊರೇಷನ್ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನ ತೆರವುಗೊಳಿಸಿದ್ದಾರೆ.
150 ಕೆ.ಜಿ ಗಾಂಜಾ ವಶ:
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 150 ಕೆ.ಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಅಂಬಾಸಿಡರ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ:
ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದು, ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Published On - 10:43 am, Mon, 16 December 19