ದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉನ್ನಾವೋ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಅಪರಾಧಿ ಎಂದು ದೆಹಲಿಯ ತೀಸ್ ಹಜಾರಿ ಕೋರ್ಟ್ ತೀರ್ಪು ನೀಡಿದೆ.
2017ರ ಜೂನ್ 4ರಂದು ಅಪ್ರಾಪ್ತೆಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪ್ರಕರಣ ಸಂಬಂಧ 2018ರ ಏ.14ರಂದು ಕುಲದೀಪ್ ಸೆಂಗರ್ ಬಂಧನವಾಗಿತ್ತು. ಶಾಸಕ ಕುಲದೀಪ್ ಸೆಂಗರ್ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ. 5 ಪ್ರಕರಣಗಳ ಪೈಕಿ 1 ಪ್ರಕರಣದ ತೀರ್ಪು ನೀಡಿದ ತೀಸ್ ಹಜಾರಿ ಕೋರ್ಟ್ ಸೆಂಗರ್ ಅಪರಾಧಿ ಎಂದಿದೆ. ಡಿಸೆಂಬರ್ 19ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ವಿಳಂಬ ಹಿನ್ನೆಲೆಯಲ್ಲಿ ಸಿಬಿಐಗೆ ತರಾಟೆ ತೆಗೆದುಕೊಂಡಿದೆ. ಕುಲದೀಪ್ ಸೆಂಗಾರ್ ಬಳಿ ಅಪ್ರಾಪ್ತೆ ಕರೆದೊಯ್ದಿದ್ದ ಶಶಿಸಿಂಗ್ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.