ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!
ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ. ಪತ್ನಿಗೆ ಕಿರುಕುಳ.. ತರಬೇತಿ ನಿರತ IPS ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. […]
ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ.
ಪತ್ನಿಗೆ ಕಿರುಕುಳ.. ತರಬೇತಿ ನಿರತ IPS ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. ಸದ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಮಹೇಶ್ವರರೆಡ್ಡಿ, ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೀತಿದ್ರೂ. ಆದ್ರೀಗ ತನ್ನ ಪತ್ನಿ ಕೊಟ್ಟಿರೋ ಬಿಗ್ ಶಾಕ್ಗೆ ಐಪಿಎಸ್ ಹುದ್ದೆಗೇರೋದನ್ನೇ ಕಳೆದುಕೊಂಡಿದ್ದಾರೆ. ತನಿಖೆಗೆ ಕೂಡ ಆದೇಶಿಸಲಾಗಿದೆ.
ಆಂಧ್ರಪ್ರದೇಶದ ಮಹೇಶ್ವರರೆಡ್ಡಿ ಹಾಗೂ ಭಾವನಾ ಹೈದರಾಬಾದ್ನಲ್ಲಿ ಒಂದೇ ಕಾಲೇಜಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸಿದ್ರು. ಬಳಿಕ 2018 ರ ಫೆಬ್ರವರಿ 9 ರಂದು ರಿಜಿಸ್ಟ್ರಾರ್ ಮ್ಯಾರೇಜ್ ಸಹ ಆಗಿದ್ರು. ಇದಾದ್ಮೇಲೆ ಕಷ್ಟಪಟ್ಟು ಓದಿದ್ದ ಮಹೇಶ್ವರರೆಡ್ಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು 126ನೇ ಱಂಕ್ ಪಡೆದಿದ್ರು. ಬಳಿಕ ತರಬೇತಿ ಕೂಡ ಪಡೀತಿದ್ರೂ. ಆದ್ರೆ, ಕೆಲ ದಿನಗಳ ಹಿಂದಷ್ಟೇ ಭಾವನಾ ತನ್ನ ಪತಿ ಮಹೇಶ್ವರ ರೆಡ್ಡಿ ವಿರುದ್ಧ ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ ಕಾಯ್ದೆ, SC-ST ಕಾಯ್ದೆಯಡಿ ಕೇಸ್ ದಾಖಲಿಸಿದ್ದಾಳೆ.
ಅಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ಕೂಡ ಮಾಡಿದ್ಲು. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಗೃಹ ಇಲಾಖೆಗೆ FIR ಪ್ರತಿ ವರದಿ ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಮಹೇಶ್ವರೆಡ್ಡಿಯನ್ನು ಗೃಹ ಇಲಾಖೆ ಅಮಾನತುಗೊಳಿಸಿದ್ದು ಸೂಕ್ತ ತನಿಖೆಗೆ ಆದೇಶಿಸಿದೆ. ಒಟ್ನಲ್ಲಿ ಐಪಿಎಸ್ ಖಡಕ್ ಅಧಿಕಾರಿ ಆಗ್ಬೇಕು ಅಂದ್ಕೊಂಡಿದ್ದ ಯುವಕನ ಬಾಳಿಗೆ ಬರಸಿಡಿಲು ಅಪ್ಪಳಿಸಿದೆ. ಪೊಲೀಸ್ರು FIR ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Published On - 8:58 am, Tue, 17 December 19