ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ: ದೆಹಲಿಯಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ-2019 ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. ಡಿ.15ರಂದು ದೆಹಲಿಯಲ್ಲಿ ನಾಲ್ಕ ಸರ್ಕಾರಿ ಬಸ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ 3 ಬಸ್ಗಳ ಮೇಲೆ ಉದ್ರಿಕ್ತರು ಕಲ್ಲುತೂರಾಟ ನಡೆಸಿದ್ದಾರೆ. ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 7 ಮೆಟ್ರೋ ಸ್ಟೇಷನ್ ಬಂದ್: ಡಿಟಿಸಿಯ ಕ್ಲಸ್ಟರ್ ಬಸ್, ಸ್ಕೂಲ್ ಬಸ್ ಮೇಲೆ ಕಲ್ಲೆಸೆದು, ಪ್ರತಿಭಟನಾಕಾರರು ಪೊಲೀಸರ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 5 ಮೆಟ್ರೋ ಸ್ಟೇಷನ್ ಬಂದ್ ಮಾಡಲಾಗಿದ್ದು, […]
ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ-2019 ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. ಡಿ.15ರಂದು ದೆಹಲಿಯಲ್ಲಿ ನಾಲ್ಕ ಸರ್ಕಾರಿ ಬಸ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ 3 ಬಸ್ಗಳ ಮೇಲೆ ಉದ್ರಿಕ್ತರು ಕಲ್ಲುತೂರಾಟ ನಡೆಸಿದ್ದಾರೆ. ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
7 ಮೆಟ್ರೋ ಸ್ಟೇಷನ್ ಬಂದ್: ಡಿಟಿಸಿಯ ಕ್ಲಸ್ಟರ್ ಬಸ್, ಸ್ಕೂಲ್ ಬಸ್ ಮೇಲೆ ಕಲ್ಲೆಸೆದು, ಪ್ರತಿಭಟನಾಕಾರರು ಪೊಲೀಸರ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 5 ಮೆಟ್ರೋ ಸ್ಟೇಷನ್ ಬಂದ್ ಮಾಡಲಾಗಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಜಫರಾಬಾದ್ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷವುಂಟಾಗಿದ್ದು, ಪ್ರತಿಭಟನಾನಿರತರ ಮೇಲೆ ಡ್ರೋನ್ ಮೂಲಕ ಪೊಲೀಸರ ಹದ್ದಿನಗಣ್ಣಿಟ್ಟಿದ್ದಾರೆ.
Published On - 4:20 pm, Tue, 17 December 19