ಇಂದು ‘ಸುಪ್ರೀಂ’ನ ಹೊಸ ಪೀಠದಲ್ಲಿ ‘ನಿರ್ಭಯಾ’ ಅಪರಾಧಿಯ ಅರ್ಜಿ ವಿಚಾರಣೆ
ದೆಹಲಿ: ದೇಶವೇ ಬೆಚ್ಚಿಬಿದ್ದಿದ್ದ ನಿರ್ಭಯ ಪ್ರಕರಣ ಅಂತಿಮ ಹಂತಕ್ಕೆ ತಲುಪಿದೆ. ಪ್ರಕರಣದ ಪ್ರಮುಖ ಆರೋಪಿ ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಕೋರಿದ್ದಾನೆ. ಇಂದು ಸುಪ್ರೀಂಕೋರ್ಟ್ ನ್ಯಾ. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ನಿರ್ಧಾರ ತಿಳಿಸಲಿದೆ. ನಿರ್ಭಯಾ ಅಪರಾಧಿಯ ಮರುಪರಿಶೀಲನಾ ಅರ್ಜಿ: ರಾಷ್ಟ್ರರಾಜಧಾನಿ ದೆಹಲಿ ಮಾತ್ರವಲ್ಲದೇ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದು ನಿರ್ಭಯಾ ಗ್ಯಾಂಗ್ ರೇಪ್. ನಿರ್ಭಯಾಳನ್ನು ಘೋರಾತಿಘೋರವಾಗಿ ಕೊಂದ ಕ್ರೂರಿಗಳನ್ನು ಗಲ್ಲಿಗೇರಿಸಬೇಕು ಅಂತಾ ಇಡೀ ದೇಶದ ಜನರೇ ಆಗ್ರಹಿಸಿದ್ರು. ಅದ್ರಂತೆ ಅಕ್ಷಯ್ ಕುಮಾರ್ ಠಾಕೂರ್, […]
ದೆಹಲಿ: ದೇಶವೇ ಬೆಚ್ಚಿಬಿದ್ದಿದ್ದ ನಿರ್ಭಯ ಪ್ರಕರಣ ಅಂತಿಮ ಹಂತಕ್ಕೆ ತಲುಪಿದೆ. ಪ್ರಕರಣದ ಪ್ರಮುಖ ಆರೋಪಿ ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಕೋರಿದ್ದಾನೆ. ಇಂದು ಸುಪ್ರೀಂಕೋರ್ಟ್ ನ್ಯಾ. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ನಿರ್ಧಾರ ತಿಳಿಸಲಿದೆ.
ನಿರ್ಭಯಾ ಅಪರಾಧಿಯ ಮರುಪರಿಶೀಲನಾ ಅರ್ಜಿ: ರಾಷ್ಟ್ರರಾಜಧಾನಿ ದೆಹಲಿ ಮಾತ್ರವಲ್ಲದೇ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದು ನಿರ್ಭಯಾ ಗ್ಯಾಂಗ್ ರೇಪ್. ನಿರ್ಭಯಾಳನ್ನು ಘೋರಾತಿಘೋರವಾಗಿ ಕೊಂದ ಕ್ರೂರಿಗಳನ್ನು ಗಲ್ಲಿಗೇರಿಸಬೇಕು ಅಂತಾ ಇಡೀ ದೇಶದ ಜನರೇ ಆಗ್ರಹಿಸಿದ್ರು. ಅದ್ರಂತೆ ಅಕ್ಷಯ್ ಕುಮಾರ್ ಠಾಕೂರ್, ಮುಖೇಶ್, ಪವನ್ ಕುಮಾರ್ ಗುಪ್ತಾ ಮತ್ತು ವಿನಯ್ ಶರ್ಮಾಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ.
ಇಂಥಾದ್ರಲ್ಲಿ ಅಪರಾಧಿ ಅಕ್ಷಯ್ ಕುಮಾರ್ ಠಾಕೂರ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದ್ದು, ತೀರ್ಪು ಪರಿಶೀಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
‘ಸುಪ್ರೀಂ’ನ ಹೊಸ ಪೀಠದಲ್ಲಿ ನಡೆಯಲಿದೆ ವಿಚಾರಣೆ: ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಬಗ್ಗೆ ನಿನ್ನೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸ್ತು. ನಿನ್ನೆ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ವಿಚಾರಣೆಯಿಂದ ಹಿಂದೆ ಸರಿದ್ರು. ತಮ್ಮ ಸಂಬಂಧಿ ಅರ್ಜುನ್ ಬೊಬ್ಡೆ 2017 ರಲ್ಲಿ ಸಂತ್ರಸ್ತೆಯ ತಾಯಿ ಪರವಾಗಿ ವಾದ ಮಂಡಿಸಿದ ಹಿನ್ನೆಲೆ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಅಲ್ಲದೇ ವಿಚಾರಣೆಗೆ ಹೊಸ ಪೀಠ ರಚಿಸುವುದಾಗಿ ಹೇಳಿದ್ದರು. ಹೀಗಾಗಿ, ಹೊಸದಾಗಿ ರಚನೆ ಆಗಿದೆ. ನ್ಯಾ.ಆರ್.ಭಾನುಮತಿ, ನ್ಯಾ. ಅಶೋಕ್ ಭೂಷಣ್, ನ್ಯಾ.ಎ.ಎಸ್ ಬೋಪಣ್ಣ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.
‘ಅಪರಾಧಿಗಳನ್ನ ಶೀಘ್ರವೇ ಗಲ್ಲು ಶಿಕ್ಷೆಗೆ ಒಳಪಡಿಸಿ’ ಅಕ್ಷಯ್ ಕುಮಾರ್ ಠಾಕೂರ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುತ್ತಿದ್ದಂತೆ, ಇತ್ತ ಸಂತ್ರಸ್ತೆಯ ತಾಯಿ ಆಶಾದೇವಿ ಸುಪ್ರೀಂಕೋರ್ಟ್‌ನಲ್ಲಿ ಮೆನ್ಶನ್ ಮಾಡಿದ್ದಾರೆ. ಜತೆಗೆ ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಪರಾಧಿಗಳನ್ನು ಶೀಘ್ರದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಿ ಅಂತಾ ಮನವಿ ಮಾಡಿದ್ದಾರೆ.
ಆದ್ರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ನಿರ್ಧಾರದ ಬಳಿಕ ವಿಚಾರಣೆ ನಡೆಸುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶ ಸತೀಶ್ ಕುಮಾರ್ ಅರೋರಾ ಹೇಳಿದ್ದಾರೆ. ಅಲ್ದೇ ಅರ್ಜಿದಾರರ ಕಾನೂನು ಹೋರಾಟದ ಅವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಒಟ್ನಲ್ಲಿ, ಇಂದು ಸರ್ವೋಚ್ಛ ನ್ಯಾಯಾಲಯ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಅಕ್ಷಯ್ ಕಮಾರ್ ಠಾಕೂರ್ ಅರ್ಜಿಯನ್ನು ಪರಿಗಣಿಸುತ್ತಾ ಅಥವಾ ತಿರಸ್ಕರುತ್ತಾ ಅನ್ನೊದು ಇಂದು ಗೊತ್ತಾಗಲಿದೆ.
Published On - 7:50 am, Wed, 18 December 19