ನಿರ್ಭಯಾ ಅಪರಾಧಿಗಳಿಗೆ ಹೊಸದಾಗಿ ನೋಟಿಸ್ ನೀಡಲು ಕೋರ್ಟ್ ಸೂಚನೆ
ದೆಹಲಿ: ಅತ್ಯಾಚಾರ ಅಪರಾಧಿಗಳನ್ನು ಶೀಘ್ರ ಗಲ್ಲಿಗೇರಿಸುವಂತೆ ಕೋರಿ ನಿರ್ಭಯಾ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜನವರಿ 7ಕ್ಕೆ ಪಾಟಿಯಾಲ ಹೌಸ್ ಕೋರ್ಟ್ ಮುಂದೂಡಿದೆ. ನಿಮ್ಮ ಮಗಳು ಮೃತಪಟ್ಟಿದ್ದಾಳೆ ಅನ್ನೋದು ನಮಗೆ ಗೊತ್ತು. ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ. ಆದರೆ ಅಪರಾಧಿಗಳಿಗೆ ಅವರದೇ ಆದ ಹಕ್ಕುಗಳಿವೆ. ನಾವು ನಿಮ್ಮ ವಾದವನ್ನು ಕೇಳುತ್ತೇವೆ. ಆದರೆ ನಾವು ಕಾನೂನನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಪಟಿಯಾಲ ಹೌಸ್ ಕೋರ್ಟ್ ಹೇಳಿದೆ. ಅಪರಾಧಿಗಳು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸ್ತಾರಾ ಇಲ್ವೋ ಅಪರಾಧಿಗಳಿಗೆ ಹೊಸದಾಗಿ ನೋಟಿಸ್ […]
ದೆಹಲಿ: ಅತ್ಯಾಚಾರ ಅಪರಾಧಿಗಳನ್ನು ಶೀಘ್ರ ಗಲ್ಲಿಗೇರಿಸುವಂತೆ ಕೋರಿ ನಿರ್ಭಯಾ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜನವರಿ 7ಕ್ಕೆ ಪಾಟಿಯಾಲ ಹೌಸ್ ಕೋರ್ಟ್ ಮುಂದೂಡಿದೆ.
ನಿಮ್ಮ ಮಗಳು ಮೃತಪಟ್ಟಿದ್ದಾಳೆ ಅನ್ನೋದು ನಮಗೆ ಗೊತ್ತು. ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ. ಆದರೆ ಅಪರಾಧಿಗಳಿಗೆ ಅವರದೇ ಆದ ಹಕ್ಕುಗಳಿವೆ. ನಾವು ನಿಮ್ಮ ವಾದವನ್ನು ಕೇಳುತ್ತೇವೆ. ಆದರೆ ನಾವು ಕಾನೂನನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಪಟಿಯಾಲ ಹೌಸ್ ಕೋರ್ಟ್ ಹೇಳಿದೆ. ಅಪರಾಧಿಗಳು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸ್ತಾರಾ ಇಲ್ವೋ ಅಪರಾಧಿಗಳಿಗೆ ಹೊಸದಾಗಿ ನೋಟಿಸ್ ನೀಡಲು ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.