ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​ ಯಾರು?-ರೇಸ್​​ನಲ್ಲಿ ಇಲ್ಲದಿದ್ದರೂ ಹುದ್ದೆಗೇರಿದ ನಾಯಕ

| Updated By: Lakshmi Hegde

Updated on: Sep 12, 2021 | 7:27 PM

Bhupendra Patel: ಭೂಪೇಂದ್ರ ಪಟೇಲ್​ ಅವರ ಹೆಸರನ್ನು ವಿಜಯ್​ ರೂಪಾನಿಯವರೇ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಅದರಾಚೆಗೂ ಕೂಡ ಇವರು ಗುಜರಾತ್​ನ ಪ್ರಭಾವಿ ಸಮುದಾಯಕ್ಕೆ ಸೇರಿರುವುದೂ ಕೂಡ ಆಯ್ಕೆಗೆ ಇನ್ನೊಂದು ಕಾರಣ ಇರಬಹುದು.

ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​ ಯಾರು?-ರೇಸ್​​ನಲ್ಲಿ ಇಲ್ಲದಿದ್ದರೂ ಹುದ್ದೆಗೇರಿದ ನಾಯಕ
ಭೂಪೇಂದ್ರ ಪಟೇಲ್​
Follow us on

ಗುಜರಾತ್​: ವಿಜಯ್​ ರೂಪಾನಿ (Vijay Rupani) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಕುತೂಹಲಕ್ಕೆ ಕಾರಣವಾದ ಪ್ರಶ್ನೆಯಾಗಿತ್ತು. ಇದೀಗ 59 ವರ್ಷದ ಭೂಪೇಂದ್ರ ಪಟೇಲ್ (Bhupendra Patel)​ ಆ ಹುದ್ದೆಗೆ ಏರಿದ್ದಾರೆ. ನಾಳೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೂಡ ನಡೆಯಲಿದೆ ಎನ್ನಲಾಗಿದೆ. ಭೂಪೇಂದ್ರ ಪಟೇಲ್​ ಘಟ್​​ಲೋಡಿಯಾ ಕ್ಷೇತ್ರದ ಶಾಸಕರಾಗಿದ್ದಾರೆ.

ನಿನ್ನೆ ರೂಪಾಣಿ ರಾಜೀನಾಮೆ ಬೆನ್ನಲ್ಲೇ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಗಾಂಧಿನಗರದಲ್ಲಿ ನಡೆದಿತ್ತು. ಈ ಸಭೆಯಲ್ಲಿ ಭೂಪೇಂದ್ರ ಪಟೇಲ್​ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ 1,17,000 ಮತಗಳ ಅಂತರದಿಂದ ಗೆದ್ದಿದ್ದಾರೆ.

ಗುಜರಾತ್​ನ ಪ್ರಭಾವಿ ಸಮುದಾಯಕ್ಕೆ ಸೇರಿದವರು
ಭೂಪೇಂದ್ರ ಪಟೇಲ್​ ಅವರ ಹೆಸರನ್ನು ವಿಜಯ್​ ರೂಪಾನಿಯವರೇ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಅದರಾಚೆಗೂ ಕೂಡ ಇವರು ಗುಜರಾತ್​ನ ಪ್ರಭಾವಿ ಸಮುದಾಯಕ್ಕೆ ಸೇರಿರುವುದೂ ಕೂಡ ಆಯ್ಕೆಗೆ ಇನ್ನೊಂದು ಕಾರಣ ಇರಬಹುದು. ಗುಜರಾತ್​ ವಿಧಾನಸಭೆ ಚುನಾವಣೆ ಇನ್ನೊಂದೇ ವರ್ಷ ಬಾಕಿ ಇರುವಾಗ ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​​ ಪಾಟಿದಾರ್ ಸಮುದಾಯದ ಉಪ-ಜಾತಿ ಕಡವಾಕ್ಕೆ ಸೇರಿದವರು. ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಹಾಗೇ, ಪಾಟಿದಾರ್​ ಸಂಸ್ಥೆಗಳಾದ ಸರ್ದಾರ್​ ಧಾಮ್​ ಮತ್ತು ವಿಶ್ವ ಉಮಿಯಾ ಫೌಂಡೇಶನ್​​ನ ಟ್ರಸ್ಟೀಗಳಲ್ಲೊಬ್ಬರು.

ಭೂಪೇಂದ್ರ ಪಟೇಲ್​ ಅವರು 1999ರಿಂದ 2000ರವರೆಗೆ ಮೇಮ್ನಾಗಗರ್​ ನಗರಪಾಲಿಕೆ ಅಧ್ಯಕ್ಷರಾಗಿದ್ದರು. ಹಾಗೇ, 2008ರಿಂದ 2010ರವರೆಗೆ ಅಹ್ಮದಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​​ನ ಶಾಲಾ ಮಂಡಳಿ ಉಪಾಧ್ಯಕ್ಷರಾಗಿದ್ದರು. ಬಳಿಕ 2010ರಿಂದ 2015ರವರೆಗೆ ತಥ್ಲೇಜ್​ ವಾರ್ಡ್​ನ ಕೌನ್ಸಿಲರ್​ ಆಗಿದ್ದರು.

ಇದನ್ನೂ ಓದಿ: Bhupendra Patel: ಗುಜರಾತ್​ ಮುಂದಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​

ಎಸ್​ಸಿ ಎಸ್​ಟಿಯ 52 ಶಾಸಕರಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ

IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?

Published On - 7:26 pm, Sun, 12 September 21