ಭಾರತವು ಇಂದು ಅಂದರೆ ಶುಕ್ರವಾರ (ನವೆಂಬರ್ 26) ಸಂವಿಧಾನ ದಿನವನ್ನು (Constitution day) ಆಚರಿಸುತ್ತಿದೆ. ಸಂವಿಧಾನದ ದಿನದ ಮಹತ್ವ, ಆಚರಣೆಯ ಹಿನ್ನೆಲೆ ಮತ್ತು ಉದ್ದೇಶ, ಇಂದು ದೇಶದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ನವೆಂಬರ್ 26, 1949 ರಂದು ಭಾರತದ ಸಂವಿಧಾನ ಸಭೆಯು ಔಪಚಾರಿಕವಾಗಿ ಅತ್ಯುನ್ನತ ಕಾನೂನು ದಾಖಲೆಯಾದ ಸಂವಿಧಾನವನ್ನು ಅಂಗೀಕರಿಸಿತು. ಆದ್ದರಿಂದಲೇ ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನದ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದಿದ್ದು, ಜನವರಿ 26, 1950 ರಂದು. ಆ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ದೇಶದ ಯುವಜನರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಕಾನೂನುಗಳನ್ನು ವಿವರಿಸುವ ಕಾನೂನು ದಾಖಲೆಯ ತಯಾರಿಕೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದರಿಂದ, ಈ ಆಚರಣೆಯನ್ನು ಅವರ ಪರಂಪರೆಗೆ ಗೌರವ ಸಲ್ಲಿಸುವಂತೆಯೂ ಕಾಣಬಹುದಾಗಿದೆ.
mygov.in ಸಂವಿಧಾನ ದಿನದ ಉದ್ದೇಶವನ್ನು ಮತ್ತಷ್ಟು ವಿವರಿಸುತ್ತಾ, “ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 19 ನವೆಂಬರ್ 2015 ರಂದು ಸಂವಿಧಾನದ ಮೌಲ್ಯಗಳನ್ನು ಪ್ರಜೆಗಳಿಗೆ ಮತ್ತಷ್ಟು ಪ್ರಚುರಪಡಿಸಲು ಪ್ರತಿ ವರ್ಷ ನವೆಂಬರ್ 26 ನೇ ತಾರೀಕಿನಂದು ‘ಸಂವಿಧಾನ ದಿನ’ ಎಂದು ಆಚರಿಸಲು ಭಾರತ ಸರ್ಕಾರಕ್ಕೆ ಸೂಚಿಸಿದೆ” ಎಂದು ಹೇಳಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶವನ್ನುದ್ದೇಶಿಸಿ, ಸಂವಿಧಾನ ದಿನದಂದು ಮಾತನಾಡಿದ್ದಾರೆ. ಆ ಕಾರ್ಯಕ್ರಮದ ಲೈವ್ ಇಲ್ಲಿ ಲಭ್ಯವಿದೆ.
LIVE: President Kovind’s address at the Constitution Day Celebrations in the Central Hall of the Parliament https://t.co/jX0PTuI0u5
— President of India (@rashtrapatibhvn) November 26, 2021
We invite everyone to make #SamvidhanDiwas celebrations grand. Join the online reading of the Preamble of the Constitution with the Hon’ble President on 26 Nov’21, 11am. Get participation certificates. Also, take part in Constitutional Democracy quiz #AmritMahotsav pic.twitter.com/8Q4Yf4sqTV
— Amrit Mahotsav (@AmritMahotsav) November 25, 2021
ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಸಂವಿಧಾನ ಓದಿನ ಕಾರ್ಯಕ್ರಮ ನಡೆಯುತ್ತಿದ್ದು, 23 ಭಾಷೆಗಳಲ್ಲಿ ಸರ್ಕಾರಿ ವೆಬ್ಸೈಟ್ನಲ್ಲಿ ಸಂವಿಧಾನ ಲಭ್ಯವಾಗುವಂತೆ ಮಾಡಲಾಗಿದೆ. ಇದರೊಂದಿಗೆ ರಸಪ್ರಶ್ನೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, ಜನರು ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಇದನ್ನೂ ಓದಿ:
Published On - 12:20 pm, Fri, 26 November 21