ಕೊರೊನಾ ಲಸಿಕೆ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 03, 2020 | 6:37 PM

ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕೊರೊನಾ ಲಸಿಕೆ ನೀಡಲು ದೊಡ್ಡ ಪ್ರಮಾಣದಲ್ಲಿ ಔಷಧಕ್ಕೆ ಬೇಡಿಕೆ ಇಡುತ್ತಿವೆ. ಇಂಥ ಕಂಪನಿಗಳಿಗೆ ಮಾರ್ಚ್-ಏಪ್ರಿಲ್​​ನಲ್ಲಿ ಔಷಧ ಪೂರೈಕೆ ಮಾಡಲು ಎಸ್ಎಐಐ ನಿರ್ಧರಿಸಿದೆ.

ಕೊರೊನಾ ಲಸಿಕೆ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ವರ್ಷದ ಹಿಂದೆ ಚೀನಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಇಂದಿಗೂ ವಿಶ್ವಾದ್ಯಂತ ತನ್ನ ಅಬ್ಬರವನ್ನು ಮುಂದುವರಿಸಿದೆ. ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಕೊರೊನಾ ವೈರಸ್​​ಗೆ ಲಸಿಕೆ ಸಿದ್ಧವಾಗಿದೆ. ಮಾರ್ಚ್ ವೇಳೆಗೆ ಈ ಔಷಧ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೊವಿಡ್-19ಕ್ಕೆ ಔಷಧ ಕಂಡು ಹಿಡಿಯಲು ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಸಂಸ್ಥೆಗೆ ಭಾರತದ ಸಂಶೋಧನಾ ಸಂಸ್ಥೆ ಸೆರಮ್ ಇನ್​ಸ್ಟಿಟ್ಯೂಟ್ ಅಫ್ ಇಂಡಿಯಾ (ಎಸ್ಐಐ) ಸಹಕಾರ ನೀಡಿತ್ತು. ಮಾರ್ಚ್ ವೇಳೆಗೆ ಎಸ್ಐಐ ಕೊರೊನಾ ಲಸಿಕೆಯನ್ನು ಭಾರತದಲ್ಲಿ ಮಾರಾಟ ಮಾಡುವ ಸಾಧ್ಯತೆಯಿದೆ.

ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕೊರೊನಾ ಲಸಿಕೆ ನೀಡಲು ದೊಡ್ಡ ಪ್ರಮಾಣದಲ್ಲಿ ಔಷಧಕ್ಕೆ ಬೇಡಿಕೆ ಇಡುತ್ತಿವೆ. ಇಂಥ ಕಂಪನಿಗಳಿಗೆ ಮಾರ್ಚ್-ಏಪ್ರಿಲ್​​ನಲ್ಲಿ ಔಷಧ ಪೂರೈಕೆ ಮಾಡಲು ಎಸ್ಎಐಐ ನಿರ್ಧರಿಸಿದೆ.

ಕೊರೊನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಜನವರಿ-ಫೆಬ್ರವರಿ ವೇಳೆಗೆ ಈ ಔಷಧ ಉತ್ಪಾದನೆ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ. 500-600 ಕೋಟಿ ರೂಪಾಯಿಗೆ ಈ ಲಸಿಕೆಯನ್ನು ಸರ್ಕಾರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಎಸ್​ಐಐ ಹೇಳಿದೆ.

ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ಮೊಟ್ಟ ಮೊದಲ ಬಾರಿಗೆ ಚೀನಾದಲ್ಲಿ ಕೊರೋನಾ ವೈರಸ್​ ಕಾಣಿಸಿಕೊಂಡಿತ್ತು. ಜನವರಿ ವೇಳೆಗೆ ಈ ವೈರಸ್​ ತನ್ನ ರೌದ್ರಾವತಾರ ತೋರಿತ್ತು. ನಂತರ ನಿಧಾನವಾಗಿ ಇತರ ರಾಷ್ಟ್ರಗಳಿಗೂ ಹಬ್ಬಿತ್ತು. ಈಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ​ ಅಮೆರಿಕ ಮೊದಲ ಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ಒಂದು ಕೋಟಿ ಸಮೀಪಿಸಿದೆ.

ಲಸಿಕೆ ಸಿಗೋ ಮುನ್ನ ಸಜ್ಜಾಗ್ತಿದೆ ‘ಕೊರೊನಾ ಮಾಫಿಯಾ’: ಭಾರತಕ್ಕೆ ಇಂಟರ್‌ಪೋಲ್ ಎಚ್ಚರಿಕೆ