ಹಿಮಾಚಲ ಪ್ರದೇಶದಲ್ಲಿ 3.3 ತೀವ್ರತೆಯ ಲಘು ಭೂಕಂಪ
Himachal Pradesh Earthquake: ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿಯಲ್ಲಿ 3.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯನ್ನು 3.3 ಎಂದು ಅಂದಾಜಿಸಲಾಗಿದೆ
ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿಯಲ್ಲಿ 3.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯನ್ನು 3.3 ಎಂದು ಅಂದಾಜಿಸಲಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ತಿಂಗಳು ಹಿಮಾಚಲದ ಕಂಗ್ರಾ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿತ್ತು. ಆ ಸಮಯದಲ್ಲಿಯೂ ಯಾವುದೇ ರೀತಿಯ ಹಾನಿಯಾಗಿರಲಿಲ್ಲ.
ಭೂಕಂಪದ ಬಗ್ಗೆ ಈ ಮಾಹಿತಿಯನ್ನು ಭಾರತೀಯ ಭೂಕಂಪನ ಇಲಾಖೆಯ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ನೀಡಿದೆ. ಭೂಮಿಯೊಳಗೆ ಏಳು ಟೆಕ್ಟೋನಿಕ್ ಪ್ಲೇಟ್ಗಳಿವೆ, ಇವು ನಿರಂತರವಾಗಿ ತಿರುಗುತ್ತಿರುತ್ತವೆ, ಇವುಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಮಿ ನಡುಗಲು ಶುರುವಾಗುತ್ತದೆ. ಭೂಕಂಪವನ್ನು ಅಳೆಯಲು ರಿಕ್ಟರ್ ಮಾಪಕವನ್ನು ಬಳಸಲಾಗುತ್ತದೆ ಅದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಸ್ಕೇಲ್ ಎಂದು ಕರೆಯಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ