ಕೊರೊನಾ ಲಸಿಕೆ ನೀಡಿಕೆಯಲ್ಲಿ ಶೇ.100ರ ಸಾಧನೆ ಮಾಡಿದ ಹಿಮಾಚಲ ಪ್ರದೇಶ; ಎರಡೂ ಡೋಸ್​ ಪೂರ್ಣ, ಡಿ.5ಕ್ಕೆ ಸನ್ಮಾನ ಕಾರ್ಯಕ್ರಮ

| Updated By: Lakshmi Hegde

Updated on: Dec 04, 2021 | 11:07 PM

ನಾಳೆಯ ಕಾರ್ಯಕ್ರಮಕ್ಕೆ ಆಗಮಿಸಲಿರುವ ಜೆ.ಪಿ.ನಡ್ಡಾ, ಏಮ್ಸ್​ನಲ್ಲಿ ಹೊರ-ರೋಗಿಗಳ ಘಟಕವನ್ನು ಕೂಡ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿತ್ತು.

ಕೊರೊನಾ ಲಸಿಕೆ ನೀಡಿಕೆಯಲ್ಲಿ ಶೇ.100ರ ಸಾಧನೆ ಮಾಡಿದ ಹಿಮಾಚಲ ಪ್ರದೇಶ; ಎರಡೂ ಡೋಸ್​ ಪೂರ್ಣ, ಡಿ.5ಕ್ಕೆ ಸನ್ಮಾನ ಕಾರ್ಯಕ್ರಮ
Follow us on

ಶಿಮ್ಲಾ: ಶೇ.100ರಷ್ಟು ವಯಸ್ಕರಿಗೂ ಸಂಪೂರ್ಣವಾಗಿ (ಎರಡೂ ಡೋಸ್​ ಹಾಕಿ ಪೂರ್ಣಗೊಳಿಸಿದ) ಕೊವಿಡ್​ 19 ಲಸಿಕೆ ಹಾಕಿದ ಮೊದಲ ರಾಜ್ಯ ಹಿಮಚಾಲಯ ಪ್ರದೇಶವಾಗಿದೆ ಎಂದು ಅಲ್ಲಿನ ಸರ್ಕಾರಿ ವಕ್ತಾರರೊಬ್ಬರು ಇಂದು ತಿಳಿಸಿದ್ದಾರೆ.  ಇಲ್ಲಿನ 53,86,393 ಅರ್ಹ ವಯಸ್ಕರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಆಗಸ್ಟ್​ ಅಂತ್ಯದ ಹೊತ್ತಿಗೆ ಶೇ.100ರಷ್ಟು ವಯಸ್ಕರಿಗೆ ಮೊದಲ ಡೋಸ್​ ಲಸಿಕೆ ನೀಡಿಕೆ ಪೂರ್ಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. 

ವಯಸ್ಕರಿಗೆ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ನೀಡಿ ಮುಗಿದ ಹಿನ್ನೆಲೆಯಲ್ಲಿ ನಾಳೆ (ಭಾನುವಾರ-ಡಿಸೆಂಬರ್​5) ಬಿಲಾಸ್​ಪುರದ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ (ಏಮ್ಸ್​​)ನಲ್ಲಿ ಕೊವಿಡ್​ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಮುಖ್ಯಮಂತ್ರಿ ಜೈರಾಮ್​ ಠಾಕೂರ್, ಕೇಂದ್ರ ಸಚಿವ ಅನುರಾಗ್ ಠಾಕೂರ್​, ರಾಜ್ಯದ ಆರೋಗ್ಯ ಮಂತ್ರಿ ರಾಜೀವ್ ಸೈಝಲ್​ ಇತರರು ಭಾಗವಹಿಸಲಿದ್ದಾರೆ.  ನಾಗರಿಕರಿಗೆ ಲಸಿಕೆ ಹಾಕಲು ಶ್ರಮಿಸಿದ ಎಲ್ಲ ಆರೋಗ್ಯ ಸಿಬ್ಬಂದಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಲಾಗಿದೆ.

ಇನ್ನು ನಾಳೆಯ ಕಾರ್ಯಕ್ರಮಕ್ಕೆ ಆಗಮಿಸಲಿರುವ ಜೆ.ಪಿ.ನಡ್ಡಾ, ಏಮ್ಸ್​ನಲ್ಲಿ ಹೊರ-ರೋಗಿಗಳ ಘಟಕವನ್ನು ಕೂಡ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿತ್ತು. ಸೆಪ್ಟೆಂಬರ್​ 6ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಮಾಚಲ ಪ್ರದೇಶದ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ್ದರು. ಇದೀಗ ಈ ರಾಜ್ಯ ಹೊಸದೊಂದು ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಒಮಿಕ್ರಾನ್​ ಮಾರಣಾಂತಿಕವಲ್ಲ, ಆದರೆ ಭಾರತೀಯರು ಕೊರೊನಾ 3ನೇ ಅಲೆಗೆ ಸಿದ್ಧರಾಗಬೇಕು: ತಜ್ಞರ ವರದಿ

Published On - 11:07 pm, Sat, 4 December 21