ಭಾರತದಲ್ಲಿ ಒಮಿಕ್ರಾನ್​ 4ನೇ ಪ್ರಕರಣ ಪತ್ತೆ; ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಮಹಾರಾಷ್ಟ್ರದ ವ್ಯಕ್ತಿಯಲ್ಲಿ ಸೋಂಕು

Omicron in India: ಈ ವ್ಯಕ್ತಿ ನವೆಂಬರ್​ 24ರಂದು ಕೇಪ್​ ಟೌನ್​​ನಿಂದ ದುಬೈ, ದೆಹಲಿ ಮಾರ್ಗವಾಗಿ ಮುಂಬೈಗೆ ಬಂದಿಳಿದಿದ್ದರು. ಇವರನ್ನೂ ಸೇರಿ ಹೈ ರಿಸ್ಕ್​ ದೇಶಗಳಿಂದ ಬಂದ 12 ಮಂದಿಯನ್ನು ಸಾರ್ವಜನಿಕ ಆರೋಗ್ಯ ಇಲಾಖೆ ಸಿಬ್ಬಂದಿ ಟ್ರೇಸ್​ ಮಾಡಿದ್ದರು.

ಭಾರತದಲ್ಲಿ ಒಮಿಕ್ರಾನ್​ 4ನೇ ಪ್ರಕರಣ ಪತ್ತೆ; ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಮಹಾರಾಷ್ಟ್ರದ ವ್ಯಕ್ತಿಯಲ್ಲಿ ಸೋಂಕು
ಮುಂಬೈ ಏರ್​ಪೋರ್ಟ್​ ಚಿತ್ರ

ಭಾರತದಲ್ಲೀಗ ಒಮ್ರಿಕಾನ್​ ಸೋಂಕಿನ ನಾಲ್ಕನೇ ಕೇಸ್​ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದ ಕೇಪ್​ ಟೌನ್​​ನಿಂದ ಮುಂಬೈಗೆ ಬಂದಿದ್ದ, ಮಹಾರಾಷ್ಟ್ರದ ದೊಂಬಿವ್ಲಿಯ 33ವರ್ಷದ ವ್ಯಕ್ತಿಯಲ್ಲೀಗ ಒಮಿಕ್ರಾನ್​ ದೃಢಪಟ್ಟಿದೆ. ಇವರು ದುಬೈ ಮಾರ್ಗವಾಗಿ ಮುಂಬೈ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಇದು ಮಹಾರಾಷ್ಟ್ರದಲ್ಲಿ ಮೊದಲ ಒಮಿಕ್ರಾನ್​ ಪ್ರಕರಣವಾಗಿದ್ದು, ದೇಶದಲ್ಲಿ ನಾಲ್ಕನೇಯದ್ದಾಗಿದೆ. ಇವರಲ್ಲಿ ಕೊರೊನಾ ದೃಢಪಟ್ಟಿತ್ತು. ಅದಾದ ಬಳಿಕ ಜಿನೋಮ್​ ಸಿಕ್ವೆನ್ಸಿಂಗ್​ ತಪಾಸಣೆಗೆ ಕಳಿಸಿದಾಗ ಒಮಿಕ್ರಾನ್​ ಪಾಸಿಟಿವ್ ವರದಿ ಬಂದಿದೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ. ಪ್ರದೀಪ್​ ವ್ಯಾಸ ತಿಳಿಸಿದ್ದಾರೆ.

ಈ ವ್ಯಕ್ತಿ ನವೆಂಬರ್​ 24ರಂದು ಕೇಪ್​ ಟೌನ್​​ನಿಂದ ದುಬೈ, ದೆಹಲಿ ಮಾರ್ಗವಾಗಿ ಮುಂಬೈಗೆ ಬಂದಿಳಿದಿದ್ದರು. ಇವರನ್ನೂ ಸೇರಿ ಹೈ ರಿಸ್ಕ್​ ದೇಶಗಳಿಂದ ಬಂದ 12 ಮಂದಿಯನ್ನು ಸಾರ್ವಜನಿಕ ಆರೋಗ್ಯ ಇಲಾಖೆ ಸಿಬ್ಬಂದಿ ಟ್ರೇಸ್​ ಮಾಡಿದ್ದರು. ಅದರಲ್ಲಿ 33 ವರ್ಷದ ಈ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿತ್ತು. ಅವರ ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಕಳಿಸಲಾಗಿತ್ತು. ವರದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಅದಾದ ಬಳಿಕ ಇವರ ಜತೆಗೆ ಬಂದಿದ್ದ 25 ಪ್ರಯಾಣಿಕರು, ಇವರ ತಂದೆ-ತಾಯಿಯರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆಲ್ಲ ಕೊರೊನಾ ನೆಗೆಟಿವ್ ವರದಿ ಬಂದಿದೆ. ಅಂದಹಾಗೆ ಇವರು ಸಣ್ಣಮಟ್ಟದ ಜ್ವರದಿಂದ ಬಳಲುತ್ತಿದ್ದರು ಬಿಟ್ಟರೆ ಇನ್ನುಳಿದ ಯಾವುದೇ ಲಕ್ಷಣಗಳೂ ಇರಲಿಲ್ಲ ಎಂದು ದೊಂಬಿವ್ಲಿ ಮುಖ್ಯ ಔಷಧ ಅಧಿಕಾರಿ ಪ್ರತಿಭಾ ಪಾನಪಾಟೀಲ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರಾನ್​ ಭಾರತದಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಂಡಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಅದಾದ ಬಳಿಕ ಇಂದು ಗುಜರಾತ್​​ನಲ್ಲೊಂದು ಕೇಸ್​ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಜಿಂಬಾಬ್ವೆಯಿಂದ ಹಿಂದಿರುಗಿದ್ದ ಜಾಮ್​ನಗರದ 72ವರ್ಷದ ವೃದ್ಧರೊಬ್ಬರಲ್ಲಿ ಒಮಿಕ್ರಾನ್​ ದೃಢಪಟ್ಟಿದೆ. ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.

ಇದನ್ನೂ ಓದಿ:  ಒಮಿಕ್ರಾನ್​ನಿಂದ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಪ್ರಮಾಣ ಆರು ಪಟ್ಟು ಹೆಚ್ಚಳ: ಭಾರತದಲ್ಲಿ ಹೆಚ್ಚಾಗುತ್ತಿದೆ ಆತಂಕ

Published On - 8:32 pm, Sat, 4 December 21

Click on your DTH Provider to Add TV9 Kannada