
ನವದೆಹಲಿ, ಸೆಪ್ಟೆಂಬರ್ 30: ಹಿಂದೂ ಸಂಸ್ಕೃತಿಯೇ ಬಂಗಾಳಿಗಳ ಗುರುತು ಎಂದು ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲಿಮಾ ನಸ್ರೀನ್ (Taslima Nasreen) ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿರುವ ಮುಸ್ಲಿಮರನ್ನೂ ಒಳಗೊಂಡಂತೆ ಬಂಗಾಳಿಗಳ ಗುರುತಿಗೆ ಹಿಂದೂ ಸಂಸ್ಕೃತಿಯೇ ಮೂಲವಾಗಿದೆ ಎಂಬುದು ತಸ್ರೀನ್ ಅವರ ಅಭಿಪ್ರಾಯ.
‘ಬಂಗಾಳ ಸಂಸ್ಕೃತಿಗೆ ಮೂಲವಾಗಿರುವುದು ಹಿಂದೂ ಸಂಸ್ಕೃತಿಯೇ. ಇದನ್ನು ಮುಚ್ಚಿಡುವಂಥದ್ದು ಏನೂ ಇಲ್ಲ. ಇತಿಹಾಸದ ವಿವಿಧ ಹಂತದಲ್ಲಿ ನಾವು ಬಂಗಾಳಿಗಳು ಯಾವುದೇ ಧರ್ಮ ಅಥವಾ ತತ್ವವನ್ನು ಅಪ್ಪಿಕೊಂಡರೂ ನಮ್ಮ ರಾಷ್ಟ್ರೀಯ ಗುರುತು ಭಾರತವೇ ಆಗಿದೆ. ಭಾರತದ ಹಿಂದೂಗಳು, ಬೌದ್ಧರು, ಕ್ರೈಸ್ತರು, ಮುಸ್ಲಿಮರು, ಅಥವಾ ನಾಸ್ತಿಕರು, ಬಹುತೇಕ ಎಲ್ಲರ ಪೂರ್ವಿಕರು ಭಾರತೀಯ ಹಿಂದೂಗಳೇ ಆಗಿದ್ದಾರೆ’ ಎಂದು ಬಾಂಗ್ಲಾದೇಶದಿಂದ ಗಡೀಪಾರಾಗಿ ಭಾರತದ ಆಶ್ರಯದಲ್ಲಿರುವ ತಸ್ಲಿಮಾ ನಸ್ರೀನ್ ವಿವರಿಸಿದ್ದಾರೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?
‘ಒಬ್ಬ ಬಂಗಾಳಿಯು ಮುಸ್ಲಿಮನೇ ಆಗಿರಲಿ, ಆದರೆ ಅವನ ಸಂಸ್ಕೃತಿಯು ಅರೇಬಿಕ್ ಆಗಿರುವುದಿಲ್ಲ. ಆತನದ್ದು ಬಂಗಾಳಿ ಸಂಸ್ಕೃತಿ ಆಗಿರುತ್ತದೆ. ಆ ಸಂಸ್ಕೃತಿಗೆ ಮೂಲವಾಗಿರುವುದು ಹಿಂದೂ ಸಂಪ್ರದಾಯ. ಡೋಲು, ಸಂಗೀತ, ನೃತ್ಯ ಇವೆಲ್ಲವೂ ಬಂಗಾಳೀ ಸಂಸ್ಕೃತಿಯನ್ನು ಅಭಿವ್ಯಕ್ತಪಡಿಸುತ್ತವೆ. ಇದನ್ನೇ ಬಂಗಾಳಿ ಎನ್ನುವುದು. ಇದನ್ನು ನಿರಾಕರಿಸುವುದು ತನ್ನ ಅಸ್ತಿತ್ವ ನಿರಾಕರಿಸಿಕೊಂಡಂತೆ’ ಎಂದು ಲಜ್ಜಾ ಕಾದಂಬರಿಯ ಕರ್ತೃವೂ ಆದ ತಸ್ಲಿಮಾ ತಿಳಿಸಿದ್ದಾರೆ.
ತಸ್ಲಿಮಾ ನಸ್ರೀನ್ ಅವರ ಬಂಗಾಳಿ ಸಂಸ್ಕೃತಿ ವಿಚಾರಕ್ಕೆ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಸ್ಪಂದಿಸಿದ್ದಾರೆ. ಭಾರತೀಯ ಪರಂಪರೆಗಳ ಮೇಲೆ ಪರ್ಷಿಯನ್ ಮತ್ತು ಮಧ್ಯ ಏಷ್ಯನ್ ಸಂಸ್ಕೃತಿಗಳ ಪ್ರಭಾವ ಇರುವುದನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಸಮಗ್ರ ಪರಿಷ್ಕರಣೆ ನಂತರ ಬಿಹಾರ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ
‘ಪಾಶ್ಚಿಮಾತ್ಯ ಸಂಸ್ಕೃತಿ ರೀತಿಯಲ್ಲಿ ಪರ್ಷಿಯನ್ ಮತ್ತು ಮಧ್ಯ ಏಷ್ಯನ್ ಸಂಸ್ಕೃತಿಗಳು ಹಾಗೂ ಭಾಷೆಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ’ ಎಂದ ಅವರು, ಬಂಗಾಳಿಗಳ ಉಪನಾಮಗಳು ಪರ್ಷಿಯನ್ ಮೂಲದ್ದವೆಂಬ ಸಂಗತಿಯನ್ನು ಉಲ್ಲೇಖಿಸಿದ್ದಾರೆ.
ಹಾಗೆಯೇ, ಉತ್ತರಪ್ರದೇಶದ ಅವಧ್ ಪ್ರದೇಶದಲ್ಲಿರುವ ಗಂಗಾ ಜಮುನಿ ತೆಹಜೀಬ್ ಸಂಸ್ಕೃತಿಯನ್ನು ಎತ್ತಿ ತೋರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ