Hit And Run : ಮಹಿಳಾ ಆಯೋಗದ ಅಧ್ಯಕ್ಷರಿಗೇ ಹೀಗಾದರೆ ಸಾಮಾನ್ಯ ಹೆಣ್ಣುಮಕ್ಕಳ ಗತಿ ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 19, 2023 | 3:15 PM

ದೆಹಲಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಕಾರು ಚಾಲಕನೊಬ್ಬ 10 ರಿಂದ 15 ಮೀಟರ್ ವರೆಗೆ ಎಳೆದೊಯ್ದಿದ್ದಾನೆ.

Hit And Run : ಮಹಿಳಾ ಆಯೋಗದ ಅಧ್ಯಕ್ಷರಿಗೇ ಹೀಗಾದರೆ ಸಾಮಾನ್ಯ ಹೆಣ್ಣುಮಕ್ಕಳ ಗತಿ ಏನು?
DCW chief Swati Maliwal
Image Credit source: NDTV
Follow us on

ದೆಹಲಿ: ದೆಹಲಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್  (Swati Maliwal) ಅವರನ್ನು ಕಾರು ಚಾಲಕನೊಬ್ಬ 10 ರಿಂದ 15 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ದೆಹಲಿ ಏಮ್ಸ್ ಬಳಿ ಈ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಿನ್ನೆ (ಜ.18) ತಡರಾತ್ರಿ ದೆಹಲಿಯಲ್ಲಿ ಮಹಿಳೆಯರ ಭದ್ರತೆಯ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.  ಕಾರು ಮಾಲೀಕ ಕುಡಿದ ಮತ್ತಿನಲ್ಲಿ ಆಕೆಗೆ ಕಿರುಕುಳ ನೀಡಿದ್ದಾನೆ. ಈ ಸಂದರ್ಭದಲ್ಲಿ ಸ್ವಾತಿ ಮಲಿವಾಲ್ ಅವನನ್ನು ಹಿಡಿಯಲು ಕಾರಿನ ಒಳಗೆ ಕೈ ಹಾಕಿದಾಗ ಚಾಲಕ ಕಾರಿನ ಕನ್ನಡಿಯನ್ನು ಮೇಲೆ ಮಾಡಿದ್ದೇನೆ.

ಇದನ್ನು ಓದಿ:Hit and Run Case: ಈ ದೃಶ್ಯ ನೋಡಿದ್ರೆ ಎದೆ ಝಲ್​ ಎನ್ನುತ್ತೆ, ಬೀದಿ ನಾಯಿಗೆ ಆಹಾರ ನೀಡುತ್ತಿದ್ದ ವೇಳೆ ಯುವತಿಗೆ ಕಾರು ಡಿಕ್ಕಿ

ಈ ಸಮಯದಲ್ಲಿ ಸ್ವಾತಿ ಮಲಿವಾಲ್ ಅವರ ಕೈ ಕಾರಿನ ಒಳಗೆ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಮತ್ತಿನಲ್ಲಿದ್ದ ಕಾರು ಚಾಲಕ ಕಾರು ಮೂವ್ ಮಾಡಿಕೊಂಡು ಎಳೆದೊಯ್ದದ್ದಾನೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡ ಸ್ವಾತಿ ಮಲಿವಾಲ್ ದೇವರು ನನ್ನ ಜೀವವನ್ನು ಉಳಿಸಿದ್ದಾನೆ ಎಂದು  ಹೇಳಿದರು. ಮಹಿಳಾ ಆಯೋಗದ ಅಧ್ಯಕ್ಷೆ ದೆಹಲಿಯಲ್ಲಿ ಸುರಕ್ಷಿತವಾಗಿಲ್ಲ ಎಂದರೆ, ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Thu, 19 January 23