Updated on:Jan 19, 2023 | 4:47 PM
ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಹಮದಾಬಾದ್‌ನ ಎಂಟು ವರ್ಷದ ಬಾಲಕಿ ಆಂಗಿ ಬಗ್ರೇಖ್, ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. 2019ರಲ್ಲಿ ಸೂರತ್‌ನ 12 ವರ್ಷದ ಬಾಲಕಿ ಖುಷಿ ಶಾ ಎಂಬಾಕೆ ಕೂಡ ಸನ್ಯಾಸತ್ವ ಸ್ವೀಕರಿಸಿದ್ದರು.
ಭಾರತದ ಜೈನ ಸಮುದಾಯದ ಅನೇಕ ಯುವಕರು, ಯುವತಿಯರು ಸನ್ಯಾಸಿಗಳಾಗಲು ಭೌತಿಕ ಪ್ರಪಂಚವನ್ನು ತ್ಯಜಿಸುವುದು ಸಾಮಾನ್ಯ. ದೀಕ್ಷೆ ಸ್ವೀಕರಿಸಿದ ನಂತರ, ಅವರು ಬರಿಗಾಲಿನಲ್ಲಿಯೇ ನಡೆಯಬೇಕು. ಭಿಕ್ಷೆಯಾಗಿ ಸ್ವೀಕರಿಸಿದ್ದನ್ನು ಮಾತ್ರ ತಿನ್ನಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಬಾರದು. ಭೌತಿಕ ಪ್ರಪಂಚದಿಂದ ದೂರಾಗಿ ಆತ್ಮ ಮತ್ತು ಆಧ್ಯಾತ್ಮಿಕತೆಯ ಮೇಲೆ ತಮ್ಮನ್ನು ಕೇಂದ್ರೀಕರಿಸಿಕೊಳ್ಳಬೇಕು.
Published On - 3:43 pm, Thu, 19 January 23