ಹುಸಿ ಬಾಂಬ್ ಬೆದರಿಕೆ: 4 ಗಂಟೆಗಳ ಕಾಲ ಉತ್ತರ ಪ್ರದೇಶದಲ್ಲಿ ನಿಂತ ಪುರುಷೋತ್ತಮ್ ಎಕ್ಸ್​ಪ್ರೆಸ್​ ರೈಲು

ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದ ಪರಿಣಾಮ, ರೈಲು ಉತ್ತರ ಪ್ರದೇಶದಲ್ಲಿ 4 ಗಂಟೆಗಳ ಕಾಲ ನಿಂತಿತ್ತು.

ಹುಸಿ ಬಾಂಬ್ ಬೆದರಿಕೆ: 4 ಗಂಟೆಗಳ ಕಾಲ ಉತ್ತರ ಪ್ರದೇಶದಲ್ಲಿ ನಿಂತ ಪುರುಷೋತ್ತಮ್ ಎಕ್ಸ್​ಪ್ರೆಸ್​ ರೈಲು
ಪುರುಷೋತ್ತಮ್ ರೈಲು
Image Credit source: India TV

Updated on: May 01, 2023 | 9:16 AM

ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದ ಪರಿಣಾಮ, ರೈಲು ಉತ್ತರ ಪ್ರದೇಶದಲ್ಲಿ 4 ಗಂಟೆಗಳ ಕಾಲ ನಿಂತಿತ್ತು. ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಜಿಂಗುರಾ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಸ್ಫೋಟ ಸಂಭವಿಸಲಿದೆ ಎಂದು ದಗ್ಮಾಪುರ ಸ್ಟೇಷನ್ ಮಾಸ್ಟರ್‌ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶೋಧ ನಡೆಸಲಾಯಿತು. ರೈಲು ಉತ್ತರ ಪ್ರದೇಶದ ಮಿರ್ಜಾಪುರದ ಚುನಾರ್ ರೈಲು ನಿಲ್ದಾಣದಲ್ಲಿ ನಿಂತಿತ್ತು.

ವರದಿಗಳ ಪ್ರಕಾರ, ದಗ್ಮಾಗ್‌ಪುರ ಸ್ಟೇಷನ್ ಮಾಸ್ಟರ್‌ಗೆ ವಾಕಿ-ಟಾಕಿಯಲ್ಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್‌ನ ಲೊಕೊಮೊಟಿವ್ (ಎಂಜಿನ್) ನಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ ಬಂದಿತ್ತು. ಜಿಂಗುರಾ ನಿಲ್ದಾಣದ ಬಳಿ ರೈಲಿನಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಲಾಯಿತು.

ಮತ್ತಷ್ಟು ಓದಿ:8 ಕೋಚ್​​ಗಳಿರುವ ವಂದೇ ಭಾರತ್ ರೈಲು ತಯಾರಿಸಲಿದೆ ಭಾರತೀಯ ರೈಲ್ವೇ

ಮಾಹಿತಿ ಪಡೆದ ತಕ್ಷಣ ರೈಲನ್ನು ಮಿರ್ಜಾಪುರದ ಚುನಾರ್ ರೈಲು ನಿಲ್ದಾಣದಲ್ಲಿ ನಿಲ್ಲಿಸಿ ಶೋಧ ನಡೆಸಲಾಯಿತು.
ಬಾಂಬ್ ಸ್ಕ್ವಾಡ್, ಜಿಆರ್‌ಪಿ, ಆರ್‌ಪಿಎಫ್, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಚುನಾರ್ ನಿಲ್ದಾಣದಲ್ಲಿ ರೈಲನ್ನು ಕೂಲಂಕಷವಾಗಿ ಶೋಧ ನಡೆಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:16 am, Mon, 1 May 23