AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತ್ಯಕ್ಷವಾದ ಎರಡು ಬೃಹತ್ ನಾಗರಹಾವುಗಳು! ಭಯದಲ್ಲಿ ಭಕ್ತರು ಮಾಡಿದ್ದೇನು?

Tirupati Viral video: ತಿರುಮಲದಲ್ಲಿ ಎರಡು ಹಾವುಗಳು ಬುಸುಗುಟ್ಟಿವೆ. ಪಾದಚಾರಿ ಮಾರ್ಗದಲ್ಲಿ ನಾಗರ ಹಾವು ಏಕಾಏಕಿ ಕಾಣಿಸಿಕೊಂಡಿದ್ದರಿಂದ ಭಕ್ತರು ಪರದಾಡಿದರು. ಗಾಳಿಗೋಪುರದಲ್ಲಿ ಈ ಘಟನೆ ನಡೆದಿದೆ. ಗಾಬರಿಗೊಂಡ ಭಕ್ತರು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸಾಧು ಶ್ರೀನಾಥ್​
|

Updated on:May 01, 2023 | 10:48 AM

Share

ತಿರುಪತಿ: ತಿರುಮಲದಲ್ಲಿ (tirupati) ಎರಡು ಹಾವುಗಳು (cobra) ಪ್ರತ್ಯಕ್ಷವಾಗಿ ಬುಸುಗುಟ್ಟಿವೆ. ಪಾದಚಾರಿ ಮಾರ್ಗದಲ್ಲಿ ನಾಗರ ಹಾವೊಂದು ಏಕಾಏಕಿ ಕಾಣಿಸಿಕೊಂಡಿದ್ದರಿಂದ ಭಕ್ತರು ಪರದಾಡಿದರು. ಗಾಳಿಗೋಪುರದಲ್ಲಿ ಈ ಘಟನೆ ನಡೆದಿದೆ. ಗಾಬರಿಗೊಂಡ ಭಕ್ತರು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಅಲ್ಲಿಗೆ ಆಗಮಿಸಿದ ಹಾವು ಹಿಡಿಯುವ ಭಾಸ್ಕರ್ ನಾಯ್ಡು ಎಂಬಾತ ಜಾಣತನದಿಂದ ಹಾವುಗಳನ್ನು ಹಿಡಿದಿದ್ದಾರೆ. ಮತ್ತೊಂದೆಡೆ ತಿರುಮಲದ ಫಿಲ್ಟರ್ ಹೌಸ್ ನಲ್ಲೂ ಮತ್ತೂ ಒಂದು ಹಾವು (snake) ಕಾಣಿಸಿಕೊಂಡಿದೆ. ಸುಮಾರು ಏಳು ಅಡಿ ಉದ್ದದ ಹಾವನ್ನು ಕಂಡ ಟಿಟಿಡಿ ಸಿಬ್ಬಂದಿ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ.

ಕೂಡಲೇ ಭಾಸ್ಕರ್ ನಾಯ್ಡು ಅವರಿಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ನೀಡಿದ ಮಾಹಿತಿಯೊಂದಿಗೆ ಅಲ್ಲಿಗೆ ಆಗಮಿಸಿದ ಹಾವು ಹಿಡಿಯುವವರು ಹಾವನ್ನು ಹಿಡಿದಿದ್ದಾರೆ. ಇದಾದ ಒಂದು ಗಂಟೆಯೊಳಗೆ ಗಾಳಿಗೋಪುರದಲ್ಲಿಯೂ ನಾಗರಹಾವು ಸರಿದಾಡಿರುವ ಮಾಹಿತಿ ಕೇಳಿಬಂದಿದೆ. ಕೂಡಲೇ ಅಲ್ಲಿಗೆ ಆಗಮಿಸಿದ ಸ್ಥಳೀಯ ಉರಗ ಹಿಡಿಯುವ ಭಾಸ್ಕರ್ ನಾಯ್ಡು ನಾಗರಹಾವನ್ನು ಸೆರೆ ಹಿಡಿದು ಎರಡೂ ಹಾವುಗಳನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ. ಬೇಸಿಗೆ ಕಾಲವಾಗಿರುವುದರಿಂದ ಬಿಸಿಲಿನ ಝಳಕ್ಕೆ ಹಾವುಗಳು ಜನವಸತಿ ಪ್ರದೇಶಕ್ಕೆ ಬರುವುದರಿಂದ ಜನರು ಜಾಗೃತರಾಗಬೇಕು ಎಂದು ಹಾವು ಹಿಡಿಯುವ ಭಾಸ್ಕರ್ ನಾಯ್ಡು ಕಿವಿಮಾತು ಹೇಳಿದ್ದಾರೆ. ಹಾವು ಎಲ್ಲೇ ಕಾಣಿಸಿಕೊಂಡರೂ ಅದರ ಮೆಲೆ ದಾಳಿ ಮಾಡದೆ, ತಕ್ಷಣ ತನಗೆ ಮಾಹಿತಿ ನೀಡುವಂತೆ ಅವರು ಸೂಚಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:44 am, Mon, 1 May 23