8 ಕೋಚ್ಗಳಿರುವ ವಂದೇ ಭಾರತ್ ರೈಲು ತಯಾರಿಸಲಿದೆ ಭಾರತೀಯ ರೈಲ್ವೇ
16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉತ್ಪಾದನೆಯನ್ನು ಮುಂದುವರಿಸಲಾಗುವುದು ಎಂದು ರೈಲ್ವೇ ಹೇಳಿದೆ. 16 ಬೋಗಿಗಳ ರೈಲುಗಳು ದೊಡ್ಡ ನಗರಗಳನ್ನು ಸಂಪರ್ಕಿಸುವ ಮಾರ್ಗಗಳಿಗೆ ಸೇವೆ ಸಲ್ಲಿಸುತ್ತವೆ ಮತ್ತು 8 ಬೋಗಿಗಳು ವಂದೇ ಭಾರತ್ ಸಣ್ಣ ನಗರಗಳಿಗೆ ಸೇವೆ ಸಲ್ಲಿಸಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಣ್ಣ ನಗರಗಳಿಗೆ ವೇಗದ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಭಾರತೀಯ ರೈಲ್ವೇ (Indian Railways) ತಲಾ ಎಂಟು ಕೋಚ್‌ಗಳೊಂದಿಗೆ 64 ವಂದೇ ಭಾರತ್ ರೈಲುಗಳನ್ನು (Vande Bharat trains) ತಯಾರಿಸಲು ನಿರ್ಧರಿಸಿದೆ. ಪ್ರಸ್ತುತ ರೈಲ್ವೇ 16 ಕೋಚ್‌ಗಳೊಂದಿಗೆ ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುತ್ತಿದೆ. ಆದಾಗ್ಯೂ, ಈ 16 ಕೋಚ್‌ಗಳ ರೈಲುಗಳ ಓಡಾಟ ನಡೆಸುತ್ತಿರುವ ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆದ ಕಾರಣ ಪೂರ್ಣ ಸಾಮರ್ಥ್ಯದಲ್ಲಿ ಓಡಲು ಸಾಧ್ಯವಾಗುವುದಿಲ್ಲ ಎಂದು ರೈಲ್ವೇ ಹೇಳಿದೆ. ರೈಲು ಕಾರ್ಯಾಚರಣೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಲು, ಸಣ್ಣ ವಂದೇ ಭಾರತ್ ರೈಲುಗಳನ್ನು ತಯಾರಿಸಲು ಸರ್ಕಾರ ನಿರ್ಧರಿಸಿದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉತ್ಪಾದನೆಯನ್ನು ಮುಂದುವರಿಸಲಾಗುವುದು ಎಂದು ರೈಲ್ವೇ ಹೇಳಿದೆ. 16 ಬೋಗಿಗಳ ರೈಲುಗಳು ದೊಡ್ಡ ನಗರಗಳನ್ನು ಸಂಪರ್ಕಿಸುವ ಮಾರ್ಗಗಳಿಗೆ ಸೇವೆ ಸಲ್ಲಿಸುತ್ತವೆ ಮತ್ತು 8 ಬೋಗಿಗಳು ವಂದೇ ಭಾರತ್ ಸಣ್ಣ ನಗರಗಳಿಗೆ ಸೇವೆ ಸಲ್ಲಿಸಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ 15 ವಂದೇ ಭಾರತ್ ರೈಲುಗಳು ಕಾರ್ಯಾಚರಣೆಯಲ್ಲಿವೆ ಮತ್ತು ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿ ಹೇಳಿದರು.
ಸಂಚಾರ ನಿರ್ದೇಶನಾಲಯವು ಎಂಟು ಬೋಗಿಗಳ ವಂದೇ ಭಾರತ್ ರೈಲುಗಳನ್ನು ಸರಿಯಾದ ಸಮಯದಲ್ಲಿ ಓಡಿಸಲು ಮಾರ್ಗಗಳನ್ನು ಅಂತಿಮಗೊಳಿಸಿದೆ.
ಪ್ರಸ್ತುತ ವಂದೇ ಭಾರತ್ ರೈಲುಗಳು ಕುಳಿತುಕೊಳ್ಳು ಆಸನ ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ 120 ಸ್ಲೀಪರ್ ರೇಕ್‌ಗಳನ್ನು ರಷ್ಯಾದ ರೋಲಿಂಗ್ ಸ್ಟಾಕ್ ಕಂಪನಿ ಟ್ರಾನ್ಸ್‌ಮ್ಯಾಶ್‌ಹೋಲ್ಡಿಂಗ್ (ಟಿಎಮ್‌ಹೆಚ್) ಗೆ ಉತ್ಪಾದಿಸುವ ಗುತ್ತಿಗೆಯನ್ನು ರೈಲ್ವೆ ಈಗಾಗಲೇ ನೀಡಿದೆ. ರಷ್ಯಾದ ಅತಿದೊಡ್ಡ ರೋಲಿಂಗ್ ಸ್ಟಾಕ್ ತಯಾರಕ ಟ್ರಾನ್ಸ್‌ಮ್ಯಾಶ್‌ಹೋಲ್ಡಿಂಗ್ (ಟಿಎಮ್‌ಹೆಚ್) ಮತ್ತು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್), ರೈಲ್ವೆ ಸಾರ್ವಜನಿಕ ವಲಯದ ಸಂಸ್ಥೆಯು ಸ್ಲೀಪರ್ ರೇಕ್‌ಗಳನ್ನು ಉತ್ಪಾದಿಸುವ ಕಡಿಮೆ ಬಿಡ್ಡರ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಜಿ ಕೃಷ್ಣಯ್ಯ ಹಂತಕರ ಬಿಡುಗಡೆ; ಬಿಹಾರ ಸರ್ಕಾರದ ನಿರ್ಧಾರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘಟನೆ
ಈ ರೈಲಿಗೆ ಭಾರಿ ಬೇಡಿಕೆಯಿದ್ದು, 60 ಸಂಸದರು ತಮ್ಮ ತಮ್ಮ ಕ್ಷೇತ್ರಗಳು ಮತ್ತು ರಾಜ್ಯಗಳಲ್ಲಿ ರೈಲುಗಳನ್ನು ಪರಿಚಯಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ