ಎಂಥಾ ಗ್ರಹಚಾರ ನೋಡಿ, ವಂದೇ ಭಾರತ್ ರೈಲು ಡಿಕ್ಕಿ ಹೊಡೆದಿದ್ದು ಹಸುವಿಗೆ ಆದರೆ ಮೃತಪಟ್ಟಿದ್ದು ಇಬ್ಬರು
ಸಾವು ಯಾವಾಗ, ಹೇಗೆ ಬೇಕಾದರೂ ಸಂಭವಿಸಬಹುದು, ಯಮ ಪಾಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸಾವು ಎಂಬುದು ಎಲ್ಲಿದ್ದರೂ ನಿಮ್ಮನ್ನು ಬಿಡದು ಎಂಬುದಕ್ಕೇ ಇದೇ ಉದಾಹರಣೆ. ರಾಜಸ್ಥಾನದಲ್ಲಿ ವಂದೇ ಭಾರತ್ ರೈಲು ಎರಡು ಜೀವಗಳನ್ನು ಬಲಿ ಪಡೆದಿದೆ
ಸಾವು ಯಾವಾಗ, ಹೇಗೆ ಬೇಕಾದರೂ ಸಂಭವಿಸಬಹುದು, ಯಮ ಪಾಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸಾವು ಎಂಬುದು ಎಲ್ಲಿದ್ದರೂ ನಿಮ್ಮನ್ನು ಬಿಡದು ಎಂಬುದಕ್ಕೇ ಇದೇ ಉದಾಹರಣೆ. ರಾಜಸ್ಥಾನದಲ್ಲಿ ವಂದೇ ಭಾರತ್ ರೈಲು ಎರಡು ಜೀವಗಳನ್ನು ಬಲಿ ಪಡೆದಿದೆ. ಅಲ್ವಾರ್ನಲ್ಲಿ ಹಸುವಿಗೆ ಒಂದೇ ಭಾರತ್ ರೈಲು ಡಿಕ್ಕಿ ಹೊಡೆದು ರೈಲ್ವೆ ಹಳಿಯಿಂದ ಸ್ವಲ್ಪ ದೂರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೃದ್ಧರೊಬ್ಬರ ಮೇಲೆ ಆ ಹಸು ಬಿದ್ದು ಇಬ್ಬರೂ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ರಾಜಸ್ಥಾನದ ಅಲ್ವಾರ್ನ ಅರಾವಳಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಶಿವದಯಾಳ್ ಶರ್ಮಾ ಎಂದು ಗುರುತಿಸಲಾಗಿದೆ. ಇವರು 23 ವರ್ಷಗಳ ಹಿಂದೆ ಭಾರತೀಯ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ಹುದ್ದೆಯಿಂದ ನಿವೃತ್ತರಾಗಿದ್ದರು.
ಶಿವದಯಾಳ್ ಸಂಬಂಧಿಕರು ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 8.30ರ ಸುಮಾರಿಗೆ ಹೊರಟಿದ್ದ ವಂದೇ ಭಾರತ್ ರೈಲಿಗೆ ಹಸುವೊಂದು ಅಡ್ಡ ಬಂದಿತ್ತು, ರಭಸಕ್ಕೆ ಹಸುವಿನ ದೇಹ ಒಂದು ಭಾಗವು 30 ಮೀಟರ್ ದೂರದಲ್ಲಿರುವ ಹಳಿಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಿವ ದಯಾಳ್ ಅವರ ಮೇಲೆ ಬಿದ್ದಿದೆ, ಆಗ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿವದಯಾಳ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮತ್ತಷ್ಟು ಓದಿ: ಗುಜರಾತ್ನಲ್ಲಿ ಮತ್ತೆ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಹಸು; ರೈಲಿನ ಮುಂಭಾಗ ಜಖಂ, ಪ್ರಯಾಣಿಕರು ಸೇಫ್
ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಮುಂಬೈ-ಗಾಂಧಿನಗರ ವಂದೇ ಭಾರತ್ ಸೂಪರ್ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 6 ರಂದು ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸಣ್ಣ ಹಾನಿ ಅನುಭವಿಸಿತ್ತು. ಮರುದಿನ ಅದೇ ಗುಜರಾತ್ ರೈಲು ಆನಂದ್ ನಿಲ್ದಾಣದ ಬಳಿ ಹಸುವಿಗೆ ಡಿಕ್ಕಿ ಹೊಡೆದಾಗಲೂ ಸಣ್ಣ ಪ್ರಮಾಣದ ಹಾನಿಯಾಗಿತ್ತು.
ಅಕ್ಟೋಬರ್ 8 ರಂದು, ರೈಲು ದಂಕೌರ್ ಮತ್ತು ವೈರ್ ನಿಲ್ದಾಣಗಳ ನಡುವೆ C8 ಕೋಚ್‌ನ ಟ್ರಾಕ್ಷನ್ ಮೋಟಾರ್‌ನಲ್ಲಿ ಬೇರಿಂಗ್ ದೋಷವನ್ನು ಅನುಭವಿಸಿತ್ತು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹಳಿಗಳ ಮೇಲೆ ಜಾನುವಾರುಗಳ ಡಿಕ್ಕಿಯನ್ನು ತಪ್ಪಿಸಲಾಗುವುದಿಲ್ಲ ಮತ್ತು ಸುಮಾರು 130-160 ಕಿಮೀ ವೇಗದಲ್ಲಿ ಚಲಿಸುವ ವಂದೇ ಭಾರತ್ ರೈಲುಗಳನ್ನು ವಿನ್ಯಾಸಗೊಳಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಏತನ್ಮಧ್ಯೆ, ಪಶ್ಚಿಮ ರೈಲ್ವೆಯು 620 ಕಿಮೀ ಉದ್ದದ ಮುಂಬೈ-ಅಹಮದಾಬಾದ್ ಟ್ರಂಕ್ ಮಾರ್ಗದಲ್ಲಿ ಪ್ರಾಣಿಗಳು ಹಳಿಗಳ ಮೇಲೆ ಅಡ್ಡಾಡುವುದನ್ನು ತಡೆಯಲು ಮತ್ತು ಅಪಘಾತಗಳನ್ನು ತಡೆಯಲು ಲೋಹದ ಬೇಲಿ ಹಾಕಲು ನಿರ್ಧರಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ