AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆಯ ಕೈ ಹಿಡಿದು, ಪ್ಯಾಂಟ್​ ಜಿಪ್​ ತೆರೆದರೆ ಅದು ಲೈಂಗಿಕ ದೌರ್ಜನ್ಯವಲ್ಲ.. ಹೊರಬಿತ್ತು ಬಾಂಬೆ ಹೈಕೋರ್ಟ್​ನ ಮತ್ತೊಂದು ತೀರ್ಪು

ಕ್ತಿ ತನ್ನ ಮಗಳನ್ನು ಹಿಡಿದುಕೊಂಡು ಪ್ಯಾಂಟ್​ನ ಜಿಪ್​ ತೆಗೆದಿದ್ದಾನೆ ಎಂದು ಆಕೆಯ ತಾಯಿಯೇ ದೂರು ನೀಡಿದ್ದಾರೆ. ತಾಯಿ ಪ್ರತ್ಯಕ್ಷ ದರ್ಶಿ ಇದ್ದರೂ ಕೂಡ ಇದು POCSO ಕಾಯ್ದೆಯಡಿ ಉಲ್ಲೇಖಿತವಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಅಪ್ರಾಪ್ತೆಯ ಕೈ ಹಿಡಿದು, ಪ್ಯಾಂಟ್​ ಜಿಪ್​ ತೆರೆದರೆ ಅದು ಲೈಂಗಿಕ ದೌರ್ಜನ್ಯವಲ್ಲ.. ಹೊರಬಿತ್ತು ಬಾಂಬೆ ಹೈಕೋರ್ಟ್​ನ ಮತ್ತೊಂದು ತೀರ್ಪು
ಬಾಂಬೆ ಹೈಕೋರ್ಟ್​
Lakshmi Hegde
| Updated By: ಸಾಧು ಶ್ರೀನಾಥ್​|

Updated on: Jan 28, 2021 | 6:15 PM

Share

ಅಪ್ರಾಪ್ತೆಯ ಬಟ್ಟೆ ಮೇಲಿಂದ ಅವಳ ಖಾಸಗಿ ಅಂಗಗಳನ್ನು ಮುಟ್ಟಿದರೆ ಅದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಆಕೆಯ ಬಟ್ಟೆ ಬಿಚ್ಚಿ ಅಥವಾ ಬಟ್ಟೆಯೊಳಗಿಂದ ಕೈ ತೂರಿಸಿ ಸ್ಪರ್ಶಿಸಿದರೆ ಮಾತ್ರ ಅದು ಲೈಂಗಿಕ ದೌರ್ಜನ್ಯವಾಗಿದ್ದು ಅಂತಹುದು POCSO ಕಾಯ್ದೆಯಡಿ ಬರುತ್ತದೆ ಎಂದು ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠದ ನ್ಯಾಯಾಧೀಶರಾದ ಪುಷ್ಪಾ ಗನೇಡಿವಾಲಾ ತೀರ್ಪು ನೀಡಿದ್ದರು.

ವ್ಯಕ್ತಿಯೋರ್ವ 12ವರ್ಷದ ಬಾಲಕಿಯನ್ನು ಮನೆಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಹೀಗೆಂದು ತೀರ್ಪು ನೀಡುವ ಮೂಲಕ ಆರೋಪಿಯ ಜೈಲು ಶಿಕ್ಷೆ ಅವಧಿಯನ್ನು ಕಡಿಮೆ ಮಾಡಿದ್ದರು. ಆದರೆ ಈ ತೀರ್ಪಿಗೆ ಸದ್ಯ ಸುಪ್ರೀಂ ಕೋರ್ಟ್​ ತಡೆ ನೀಡಿದೆ.

ಆದರೆ ಇದೇ ಜಡ್ಜ್​ ಜನವರಿ 15ರಂದು ನೀಡಿದ್ದ ಇನ್ನೊಂದು ತೀರ್ಪು ಕೂಡ ಇದೀಗ ಮುನ್ನೆಲೆಗೆ ಬಂದಿದೆ. 5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಬಂಧಿತನಾಗಿದ್ದ 50 ವರ್ಷದ ಲಿಬ್ನಸ್​ ಕುಜುರ್​ ಎಂಬಾತ ಮೊದಲು ಸೆಷನ್ಸ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಅಲ್ಲಿ, ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾಗಿ, 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಆದರೆ ಸೆಷನ್ಸ್ ಕೋರ್ಟ್​ನ ತೀರ್ಪು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ. ಅಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಪುಷ್ಪಾ, ಒಬ್ಬಳು ಬಾಲಕಿಯ ಕೈ ಹಿಡಿಯುವುದು, ಅವಳೆದುರು ಪ್ಯಾಂಟ್ ಜಿಪ್​ ಓಪನ್ ಮಾಡುವುದು ಲೈಂಗಿಕ ದೌರ್ಜನ್ಯವಲ್ಲ. ಇಂಥ ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ಬರುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

ವ್ಯಕ್ತಿ ತನ್ನ ಮಗಳನ್ನು ಹಿಡಿದುಕೊಂಡು ಪ್ಯಾಂಟ್​ನ ಜಿಪ್​ ತೆಗೆದಿದ್ದಾನೆ ಎಂದು ಆಕೆಯ ತಾಯಿಯೇ ದೂರು ನೀಡಿದ್ದಾರೆ. ತಾಯಿ ಪ್ರತ್ಯಕ್ಷದರ್ಶಿ ಇದ್ದರೂ ಕೂಡ ಇದು POCSO ಕಾಯ್ದೆಯಡಿ ಉಲ್ಲೇಖಿತವಾಗುವುದಿಲ್ಲ. ಒಬ್ಬ ವ್ಯಕ್ತಿ ಲೈಂಗಿಕ ಬಯಕೆಯಿಂದ ದೇಹ ಸಂಪರ್ಕ ಹೊಂದುವುದು ಮಾತ್ರ ಈ ಆ್ಯಕ್ಟ್​ನಡಿ ಬರುತ್ತದೆ ಎಂದು ಹೇಳಿದ್ದಾರೆ.

ಹಾಗೇ, ಕುಜುರ್​ ವಿರುದ್ಧ POCSO ಕಾಯ್ದೆಯಡಿ ದಾಖಲಾಗಿದ್ದ ಅಪರಾಧವನ್ನು ರದ್ದುಗೊಳಿಸಿದ ಬಾಂಬೆ ಹೈ ಕೋರ್ಟ್​, ಬೇರೆ ವಿಭಾಗಗಳಡಿ ಶಿಕ್ಷೆ ವಿಧಿಸಿದೆ.

ಬಟ್ಟೆ ಹಾಕಿದ್ದಾಗ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ ಎಂಬ ಬಾಂಬೇ ಹೈ ಕೋರ್ಟ್​ ಆದೇಶಕ್ಕೆ ಸುಪ್ರೀಂ ತಡೆ