ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ.. ‘ವಿವೇಕಾನಂದರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆಯುವಂತಾಗಲಿ’

| Updated By: ganapathi bhat

Updated on: Apr 06, 2022 | 11:33 PM

ಬಿಜೆಪಿ ರಾಜಕಾರಣದ ಚಾಣಕ್ಯ ಎಂದು ಕರೆಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಪಕ್ಷ ಸಂಘಟನೆಯ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ.. ವಿವೇಕಾನಂದರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆಯುವಂತಾಗಲಿ’
ಅಮಿತ್ ಶಾ
Follow us on

ಕೋಲ್ಕತ್ತಾ: ಬಿಜೆಪಿ ರಾಜಕಾರಣದ ಚಾಣಕ್ಯ ಎಂದು ಕರೆಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಪಕ್ಷ ಸಂಘಟನೆಯ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿರುವ ಐತಿಹಾಸಿಕ, ಜಗದ್ವಿಖ್ಯಾತ ರಾಮಕೃಷ್ಣ ಆಶ್ರಮ ಮತ್ತು ಸ್ವಾಮಿ ವಿವೇಕಾನಂದರ ವಂಶಸ್ಥರ ಮನೆಗೆ ಭೇಟಿ ನೀಡಿದರು. ವಿವೇಕಾನಂದರ ಜನ್ಮಸ್ಥಳದಲ್ಲಿ ಮಾತನಾಡಿದ ಅಮಿತ್ ಶಾ, ವಿವೇಕಾನಂದರು ಆಧ್ಯಾತ್ಮ ಮತ್ತು ಆಧುನಿಕತೆಯನ್ನು ಸಂಧಿಸಿ ನೋಡಿದವರು. ಅವರು ತೋರಿದ ದಾರಿಯಲ್ಲಿ ನಾವೆಲ್ಲರೂ ನಡೆಯುವಂತಾಗಲಿ ಎಂದಿದ್ದಾರೆ.

ಗೃಹ ಸಚಿವರು ಬಳಿಕ ಮಿಡ್ನಾಪುರ, ಬೋಲಾಪುರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಸಿದ್ಧೇಶ್ವರಿ ಮಹಮಾಯಾ ದೇವಾಲಯಕ್ಕೆ ಹಾಗೂ ಕ್ರಾಂತಿಕಾರ ಹೋರಾಟಗಾರ ಖಾದಿರಾಮ್ ಬೋಸ್ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ. ಬೆಲಿಜುರಿ ಗ್ರಾಮದ ರೈತರೊಬ್ಬರ ಮನೆಯಲ್ಲಿ ಮಧ್ಯಾಹ್ನ ಭೋಜನ ಸ್ವೀಕರಿಸಲಿದ್ದಾರೆ. ಮೋದಿನಾಪುರ, ಪಶ್ಚಿಮ ಮಿಡ್ನಾಪುರ, ಭೀರಭೂಮ್ ಜಿಲ್ಲೆಗಳಲ್ಲಿ ಅಮಿತ್ ಶಾ ರೋಡ್ ಶೋ, ಸಾರ್ವಜನಿಕ ರ್ಯಾಲಿಗಳಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.

ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ತಯಾರಿ ನಡೆಸುತ್ತಿದೆ. ಕಳೆದ ವಾರವಷ್ಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ನಡ್ಡಾ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿರುವ ಅಮಿತ್ ಶಾ ಇಂದು ಮತ್ತು ನಾಳೆ ಪಶ್ಚಿಮ ಬಂಗಾಳದಲ್ಲಿ ಪಕ್ಷ ಸಂಘಟನೆ ನಡೆಸಲಿದ್ದಾರೆ.

ಅಮಿತ್​ ಶಾ ಪಶ್ಚಿಮ ಬಂಗಾಳ ಪ್ರವಾಸ; ಮಮತಾ ನಾಡಲ್ಲಿ ಎರಡು ದಿನ ಪ್ರಚಾರ

Published On - 12:52 pm, Sat, 19 December 20