ಇಂದು ಬಿಡುಗಡೆಯಾಗಲಿದೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಯ ಬ್ಲ್ಯೂಪ್ರಿಂಟ್
ಇಂದು ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಯ ನೀಲನಕ್ಷೆಯನ್ನು ಬಿಡುಗಡೆಗೊಳಿಸಲಿದೆ.
ಅಯೋಧ್ಯಾ: ಅಯೋಧ್ಯೆಯಲ್ಲಿ ಏಕ ಕಾಲಕ್ಕೆ ರಾಮ ಮಂದಿರ ಮತ್ತು ಮಸೀದಿ ನಿರ್ಮಾಣಗಳು ಆರಂಭವಾಗುವ ನಿರೀಕ್ಷೆ ದಟ್ಟವಾಗಿದೆ. ನೂತನ ರಾಮ ಮಂದಿರ ನಿರ್ಮಾಣವಾಗಲಿರುವ 20 ಕಿಮೀ ದೂರದಲ್ಲಿ ಬಾಬ್ರಿ ಮಸೀದಿಗೆ ಪರ್ಯಾಯ ನೂತನ ಮಸೀದಿ ನಿರ್ಮಾಣವಾಗಲಿದೆ. ಇಂದು ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ನೂತನ ಮಸೀದಿ ನೀಲನಕ್ಷೆಯನ್ನು ಬಿಡುಗಡೆಗೊಳಿಸಲಿದೆ. ಅಯೋಧ್ಯೆಯ ಧನ್ನಿಪುರ್ ಗ್ರಾಮದಲ್ಲಿ ನೂತನ ಮಸೀದಿ ನಿರ್ಮಾಣವಾಗಲಿದೆ.
5 ಎಕರೆಯಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿ ಏಕಕಾಲಕ್ಕೆ 2 ಸಾವಿರ ಜನರ ಸೇರುವಷ್ಟು ಬೃಹತ್ ಗಾತ್ರದ ಹೊಂದಿರಲಿದೆ. ಅಲ್ಲದೇ, ಗ್ರಂಥಾಲಯ, ಸುಸಜ್ಜಿತ ಅತ್ಯಾಧುನಿಕ ಆಸ್ಪತ್ರೆ, ಸಮುದಾಯ ಭೋಜನ ಶಾಲೆ, ಇಂಡೋ-ಇಸ್ಲಾಮಿಕ್ ಕೇಂದ್ರ ಮತ್ತು ಮ್ಯೂಸಿಯಂಗಳು ಮಸೀದಿಯ ಆವರಣದಲ್ಲಿ ನಿರ್ಮಾಣವಾಗಲಿವೆ.
ಇಸ್ಲಾಂನಲ್ಲಿ ಶಿಲಾನ್ಯಾಸ ಕಾರ್ಯಕ್ರಮದ ಸಂಪ್ರದಾಯ ಇರದಿದ್ದರೂ ನೂತನ ಮಸೀದಿಯ ಶಿಲಾನ್ಯಾಸ ಕಾರ್ಯಕ್ರಮವನ್ನು 2021ರ ಗಣರಾಜ್ಯೋತ್ಸವದಂದು ನಡೆಸಲು ತೀರ್ಮಾನಿಸಲಾಗಿದೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದ ಸ್ಥಾಪಕ ಡೀನ್ ಪ್ರೊ. ಎಸ್.ಎಂ. ಅಕ್ತರ್ ನೂತನ ಮಸೀದಿಯ ವಿನ್ಯಾಸ ಮಾಡಿದ್ದಾರೆ.
Published On - 2:38 pm, Sat, 19 December 20