ಪ್ರಯಾಗರಾಜ್: ಪ್ರತಿದಿನ ಸಾವಿರಾರು ಜನರು ಭೇಟಿ ನೀಡುವ ಗಂಗಾ ಮತ್ತು ಯಮುನಾ ನದಿಗಳ ಸಂಗಮ ಸ್ಥಳವಾದ ‘ಸಂಗಮ್’ ಬಳಿ ದೋಣಿಯಲ್ಲಿ ‘ಹುಕ್ಕಾ ಪಾರ್ಟಿ’ ನಡೆಸುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕೋಳಿ ಬೇಯಿಸುವುದು ಕೂಡಾ ವಿಡಿಯೊದಲ್ಲಿದೆ. ಇಬ್ಬರು ಪರಿಚಿತ ಮತ್ತು ಆರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿಗಳ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಆರೋಪಿಗಳ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪ ಹೊರಿಸಲಾಗಿದೆ. ಮೂರು ದಿನಗಳ ಹಿಂದೆ ವೈರಲ್ ಆಗಿರುವ 30 ಸೆಕೆಂಡ್ ಗಳ ವಿಡಿಯೊದಲ್ಲಿ ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬ ದೋಣಿಯಲ್ಲಿ ಹುಕ್ಕಾ ಸೇದುತ್ತಿರುವುದು ಕಾಣುತ್ತದೆ. ಕ್ಯಾಮೆರಾ ಕಣ್ಣುಗಳು ನಂತರ ದೋಣಿಯಲ್ಲಿ ಸುಟ್ಟ ಕಬಾಬ್‌ಗಳನ್ನು ತೋರಿಸುತ್ತದೆ. ಅವನ ಸುತ್ತಲೂ ಇತರರೂ ಕುಳಿತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಸುತ್ತಮುತ್ತಲಿನ ಇತರ ದೋಣಿಗಳನ್ನು ತೋರಿಸಲು ಕ್ಯಾಮರಾ ಮತ್ತೆ ಬೇರೆಡೆಗೆ ತಿರುಗುತ್ತದೆ
ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಯಾಗ್‌ರಾಜ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಡಿಯೊದಲ್ಲಿ ಹುಕ್ಕಾ ಮತ್ತು ಮಾಂಸಾಹಾರಿ ಆಹಾರ ಎರಡನ್ನೂ ತೋರಿಸುತ್ತದೆ. ನಾವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಪ್ರಯಾಗರಾಜ್ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ವೀಡಿಯೊ ವೈರಲ್ ಆದ ದಿನದಂದು ಹೇಳಿದ್ದರು.
Published On - 4:52 pm, Thu, 1 September 22